ಚೀನಾ ವಿರುದ್ಧ ಹೊಸ ಆಟ ಆರಂಭಿಸಿದ ಯೋಗಿ ! ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತಾ??

ಚೀನಾ ವಿರುದ್ಧ ಹೊಸ ಆಟ ಆರಂಭಿಸಿದ ಯೋಗಿ ! ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಕೋರೋನ ವೈರಸ್ ಮೂಲ ಚೀನಾ ದೇಶಕ್ಕೆ ಅಸಲಿ ಸವಾಲುಗಳು ಆರಂಭವಾಗಿವೆ. ಚೀನಾಗೆ ಸರಿಯಾಗಿ ಬುದ್ಧಿ ಕಲಿಸಲು ಇತರ ದೇಶಗಳು ಒಂದಾಗುತ್ತಿವೆ.

ಅಮೇರಿಕಾ ದೇಶವು ಚೀನಾ ದೇಶದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಈಗಾಗಲೇ ಎಚ್ಚರಿಕೆ ನೀಡಿದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಪಾನ್ ದೇಶವು ಚೀನಾ ದೇಶದಿಂದ ಜಪಾನ್ ದೇಶಗಳಿಗೆ ಕಂಪನಿಗಳನ್ನು ಸ್ಥಳಾಂತರಿಸಲು ಜಪಾನಿನ ಯಾವುದೇ ಕಂಪನಿ ಒಪ್ಪಿಕೊಂಡರೆ ಹಣಕಾಸು ಪ್ಯಾಕೇಜ್ ಮೂಲಕ ಸಹಾಯ ಮಾಡುವುದಾಗಿ 2.2 ಬಿಲಿಯನ್ ಯುಎಸ್ ಡಾಲರ್ ಗಳನ್ನು ಮೀಸಲಿಟ್ಟಿದೆ.

ಇನ್ನು ಅಮೆರಿಕ ಮೂಲದ ಕಂಪನಿಗಳು ಈಗಾಗಲೇ ಇತರ ದೇಶಗಳಿಗೆ ತಮ್ಮ ಕಂಪನಿಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಿ ಕೊಳ್ಳುತ್ತಿವೆ. ಇದೀಗ ಇದರ ಕುರಿತು ಗಮನ ಹರಿಸಿರುವ ಯೋಗಿ ಆದಿತ್ಯನಾಥ್ ಅವರು ಈ ಉತ್ತಮ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಯೋಜನೆ ರೂಪಿಸಿದ್ದಾರೆ.

ಹೌದು, ಇದೀಗ ಚೀನಾ ದೇಶದಿಂದ ಉತ್ತರ ಪ್ರದೇಶಕ್ಕೆ ಕಂಪನಿಗಳು ಸ್ಥಳಾಂತರ ಮಾಡಲು ನಿರ್ಧಾರ ಮಾಡಿದರೇ ವಿಶೇಷ ಪ್ಯಾಕೇಜ್ ನೀಡಲು ಮುಂದಾಗಿ ಅಧಿಕಾರಿಗಳಿಗೆ ಇದಕ್ಕಾಗಿ ವಿಶೇಷ ಪ್ಯಾಕೇಜ್ ಸಿದ್ದಪಡಿಸುವಂತೆ ಆದೇಶ ಹೊರಡಿಸಿದ್ದಾರೆ. ಆದರೆ ಇದು ಸ್ವದೇಶಿ ಕಂಪನಿಗಳಿಗೆ ಮಾತ್ರ ಅನ್ವಯವಾಗುತ್ತದೆಯೋ ಅಥವಾ ವಿದೇಶಿ ಕಂಪನಿಗಳಿಗೆ ಕೂಡ ವಿಶೇಷ ಪ್ಯಾಕೇಜ್ ಅನ್ವಯವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ತನ್ನ 22 ಕೋಟಿ ಜನಸಂಖ್ಯೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಗಿ
ಆದಿತ್ಯನಾಥ್ ರವರ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಯೋಜನೆ ಯಶಸ್ವಿ ಗೊಂಡು ಚೀನಾ ದೇಶದಿಂದ ಹಲವಾರು ಕಂಪನಿಗಳು ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಂಡರೆ ಸ್ಥಳೀಯರಲ್ಲಿ ಉದ್ಯೋಗ, ಆರ್ಥಿಕತೆ ಹೆಚ್ಚಳ, ಅಭಿವೃದ್ಧಿ ಹೀಗೆ ಹಲವಾರು ನೇರ ಹಾಗೂ ಪರೋಕ್ಷ ಲಾಭಗಳು ಇವೆ ಎಂಬುದು ಹಣಕಾಸು ತಜ್ಞರ ಲೆಕ್ಕಾಚಾರ ಮುಂದಿಟ್ಟಿದ್ದಾರೆ.