ಫೈನಲ್ ಗು ಮುನ್ನ ಭಾರತೀಯ ಇಬ್ಬರು ವನಿತೆಯರ ಮುಂದೆ ತಲೆಬಾಗಿ ವಿಶ್ವದ ನಂಬರ್ 1 ಬೌಲರ್ ಹೇಳಿದ್ದೇನು ಗೊತ್ತಾ? ಇದು ನಮ್ಮ ಸಹೋದರಿಯರ ತಾಕತ್ತು !

ಫೈನಲ್ ಗು ಮುನ್ನ ಭಾರತೀಯ ಇಬ್ಬರು ವನಿತೆಯರ ಮುಂದೆ ತಲೆಬಾಗಿ ವಿಶ್ವದ ನಂಬರ್ 1 ಬೌಲರ್ ಹೇಳಿದ್ದೇನು ಗೊತ್ತಾ? ಇದು ನಮ್ಮ ಸಹೋದರಿಯರ ತಾಕತ್ತು !

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ತಂಡದ ವನಿತೆಯರು ಟಿ20 ವಿಶ್ವಕಪ್ ನಲ್ಲಿ ಫೈನಲ್ ತಲುಪಿ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ವಿಶ್ವದ ಬಲಾಢ್ಯ ತಂಡಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಆಸ್ಟ್ರೇಲಿಯಾ ತಂಡ ಫೈನಲ್ ತಲುಪಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಹೀಗಿರುವಾಗ ಆಸ್ಟ್ರೇಲಿಯಾದ ವಿಶ್ವದ ನಂಬರ್ ಬೌಲರ್ ನಿಂದ ಭಾರತೀಯ ವನಿತೆಯರ ಕುರಿತು ಮಹತ್ವದ ಹೇಳಿಕೆಗಳು ಹೊರಬಿದ್ದಿವೆ.

ಹೌದು ಇದೀಗ ಇಷ್ಟು ದಿವಸ ತನ್ನ ಅಗ್ರೆಸ್ಸಿವ್ ಆಟದ ಮೂಲಕ ಹೆಸರು ಮಾಡಿ, ಎದುರಾಳಿ ತಂಡದ ಆಟಗಾರ್ತಿ ಯರಲ್ಲಿ ನಡುಕ ಹುಟ್ಟಿಸಿ ಐಸಿಸಿ ವಿಶ್ವ ಟಿ-20 ಬೌಲರ್ ರ್ಯಾಂಕಿಂಗ್ನಲ್ಲಿ ಮೊಟ್ಟ ಮೊದಲ ಸ್ಥಾನ ಪಡೆದು ಕೊಂಡಿರುವ ಆಸ್ಟ್ರೇಲಿಯಾ ತಂಡದ ಮೇಘನ್ ಶೌಟ್ರವರು ಭಾರತೀಯ ವನಿತೆಯರ ಕುರಿತು ಮಾತನಾಡಿದ್ದಾರೆ. ಫೈನಲ್ ಪಂದ್ಯಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ವನಿತೆಯರ ಕುರಿತು ಮಹತ್ವದ ಹೇಳಿಕೆ ನೀಡಿರುವ ಮೇಘನ್ ರವರು ತಾವು ಭಾರತ ತಂಡದ ವಿರುದ್ಧ ಆಡಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿ, ಕಾರಣ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ನೀಡಿರುವ ಕಾರಣವಾದರು ಏನು ಗೊತ್ತಾ?? ಸಂಪೂರ್ಣ ಓದಿ !

ಅದರಲ್ಲಿಯೂ ಶೆಫಾಲಿ ವರ್ಮ ಹಾಗೂ ಸ್ಮೃತಿ ಮಂದನ ರವರಿಗೆ ಯಾವುದೇ ಕಾರಣಕ್ಕೂ ಟಿ ಟ್ವೆಂಟಿ ವಿಶ್ವಕಪ್ ಫೈನಲ್ನಲ್ಲಿ ಪವರ್ ಪ್ಲೇ ಯಲ್ಲಿ ಬೌಲಿಂಗ್ ಮಾಡಲು ಬಯಸುವುದಿಲ್ಲ, ನನಗೆ ಭಾರತೀಯ ಆರಂಭಿಕ ವನಿತೆಯರಿಗೆ ಬೌಲಿಂಗ್ ಮಾಡುವ ಬಗ್ಗೆ ಆತಂಕವಿದೆ. ಸ್ಮೃತಿ ಮಂದನ ಹಾಗೂ ಶೆಫಾಲಿ ವರ್ಮ ಅವರು ಮೊದಲಿನಿಂದಲೂ ನನ್ನ ಎಸೆತಗಳನ್ನು ಚೆನ್ನಾಗಿ ಅರಿತಿದ್ದಾರೆ, ಅದರಲ್ಲಿಯೂ ಕಳೆದ ತ್ರಿಕೋನ ಸರಣಿಯಲ್ಲಿ ಶೆಫಾಲಿ ವರ್ಮ ಅವರು ನನಗೆ ಬಾರಿಸಿದ ಅದ್ಭುತ ಸಿಕ್ಸರ್ ಇಲ್ಲಿಯವರೆಗೂ ನನ್ನ ಜೀವನದಲ್ಲಿ ಅಂತಹ ಸಿಕ್ಸರ್ ನೋಡಿಲ್ಲ ಮುಂದೇ ನೋಡುತ್ತೇನೆಂಬ ಎಂಬ ನಂಬಿಕೆಯೂ ಇಲ್ಲ.

ಅವರಿಬ್ಬರೂ ನನಗಾಗಿ ಪ್ರತ್ಯೇಕ ಯೋಜನೆಗಳನ್ನು ತಮ್ಮಲ್ಲಿ ಇಟ್ಟು ಕೊಂಡಿದ್ದಾರೆ. ನಾನು ಪವರ್ ಪ್ಲೇ ನಲ್ಲಿ ಕಂಡಿತ ಇವರಿಬ್ಬರಿಗೆ ಬೌಲಿಂಗ್ ಮಾಡಲು ಸಾಧ್ಯವಿಲ್ಲ, ವಿಶ್ವಕಪ್ ಸರಣಿಯ ಮೊದಲ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ನಾಲ್ಕು ಬೌಂಡರಿ ಶೆಫಾಲಿ ವರ್ಮ ಗಳಿಸಿದರು, ಅಷ್ಟೇ ಅಲ್ಲದೆ ಕಳೆದ ತ್ರಿಕೋಣ ಸರಣಿಯಲ್ಲಿಯೂ ಕೂಡ ಶೆಫಾಲಿ ವರ್ಮ ರವರು ಬೌಂಡರಿ ಮೂಲಕ ನನಗೆ ಸ್ವಾಗತ ನೀಡಿದರು, ಅಷ್ಟು ಸಾಲದು ಎಂಬಂತೆ ಅದೇ ಓವರ್ ನ ಕೊನೆಯ ಎಸೆತದಲ್ಲಿ ಸ್ಮೃತಿ ಮಂದನ ನನಗೆ ಸಿಕ್ಸರ್ ಬಾರಿಸಿದ ರೀತಿ ಅದ್ಭುತವಾಗಿತ್ತು ಎಂದಿದ್ದಾರೆ.

ಇಷ್ಟೆಲ್ಲಾ ಮಾತನಾಡಿದ ಬಳಿಕ ಪಂದ್ಯದ ಕುರಿತು ಮಾತನಾಡಿ ನಾವು ಇತ್ತೀಚೆಗೆ ಭಾರತೀಯ ವನಿತೆಯರ ಜೊತೆ ಹಲವಾರು ಪಂದ್ಯಗಳನ್ನು ಆಡಿದ್ದೇವೆ. ಆದ ಕಾರಣ ಫೈನಲ್ ನಲ್ಲಿ ಭಾರತ ತಂಡ ನಮ್ಮ ಎದುರಾಳಿಯಾಗಿರುವುದು ಕೊಂಚ ಒಳ್ಳೆಯದೇ, ವನಿತೆಯರ ಕುರಿತು ಚೆನ್ನಾಗಿ ಅರಿತಿದ್ದೇವೆ ಖಂಡಿತ ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇನೇ ಆಗಲಿ ಭಾರತೀಯ ಲೇಡಿ ಸೆಹ್ವಾಗ್ ಹಾಗೂ ಸ್ಮೃತಿ ಮಂಧನ ರವರು ವಿಶ್ವದ ನಂಬರ್ ವನ್ ಬೌಲರ್ ಮೇಘನ್ ರವರಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.