ಭಾರತೀಯ ವನಿತೆಯರು ಫೈನಲ್ ತಲುಪಿದ ಬೆನ್ನಲ್ಲೇ ಮೀಸಲು ದಿನದ ಕುರಿತು ನಾಲಿಗೆ ಹರಿಬಿಟ್ಟ ಇಂಗ್ಲೆಂಡ್ ಮಾಜಿ ನಾಯಕ ಟ್ವಿಟರ್ ನಲ್ಲಿ ಜನರು ತಿರುಗೇಟು ನೀಡಿದ್ದು ಹೇಗೆ ಗೊತ್ತಾ?

ಭಾರತೀಯ ವನಿತೆಯರು ಫೈನಲ್ ತಲುಪಿದ ಬೆನ್ನಲ್ಲೇ ಮೀಸಲು ದಿನದ ಕುರಿತು ನಾಲಿಗೆ ಹರಿಬಿಟ್ಟ ಇಂಗ್ಲೆಂಡ್ ಮಾಜಿ ನಾಯಕ ಟ್ವಿಟರ್ ನಲ್ಲಿ ಜನರು ತಿರುಗೇಟು ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ವನಿತೆಯರು ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಫೈನಲ್ ತಲುಪಿದ್ದಾರೆ. ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿ ಕೊಳ್ಳಲು ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ.

ಇಂದು ನಡೆಯ ಬೇಕಿದ್ದ ಸೆಮಿಫೈನಲ್ ಪಂದ್ಯ ವಿಪರ್ಯಾಸವೆಂಬಂತೆ ಮಳೆ ಬಂದು ರದ್ದಾಗಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತೀಯ ವನಿತೆಯರು ಗೆಲ್ಲುವ ಫೇವರಿಟ್ ಎನಿಸಿ ಕೊಂಡಿದ್ದರು. ಆದರೆ ಪಂದ್ಯ ರದ್ದಾದ ಕಾರಣ ಐಸಿಸಿ ನಿಯಮದ ಪ್ರಕಾರ ಭಾರತೀಯ ವನಿತೆಯರು ಫೈನಲ್ ತಲುಪಿದ್ದಾರೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಭಾರತೀಯ ವನಿತೆಯರು ಕೂಡ ಪಂದ್ಯ ನಡೆದಿದ್ದರೆ ಖಂಡಿತ ನಾವು ಗೆದ್ದು ಫೈನಲ್ ತಲುಪುತ್ತಿದ್ದೆವು, ಇದೀಗ ಐಸಿಸಿ ನಿಯಮಕ್ಕೆ ತಲೆಬಾಗಿ, ವಿಧಿಯಿಲ್ಲದೇ ನಾವು ಫೈನಲ್ ತಲುಪಿದ್ದೇವೆ. ನಮಗೂ ಕೂಡ ಪಂದ್ಯ ನಡೆಯಬೇಕು ಎಂಬ ಆಸೆ ಇತ್ತು ಎಂದು ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ.

ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಾಜಿ ಇಂಗ್ಲೆಂಡ್ ನಾಯಕ ಮೈಕಲ್ ವಾಗನ್ ರವರು, ಐಸಿಸಿ ನಿಯಮದ ಕುರಿತು ತಮ್ಮ ಅಸಮಾಧಾನವನ್ನು ಹೊರ ಹಾಕಿ ವಿಶ್ವಕಪ್ ಸೆಮಿಫೈನಲ್ ನಲ್ಲಿ ಮೀಸಲು ದಿನಗಳಿಲ್ಲ, ಏನು ಅಲುಗಾಡುತ್ತಿದೆ (ಕ್ರಿಕೆಟ್ನ ಭವಿಷ್ಯ, ಕ್ರಿಕೆಟ್ ಕಾನೂನುಗಳು ಅಲುಗಾಡುತ್ತಿವೆ) ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಐಸಿಸಿ ನಿರ್ಧಾರವು ಒಂದು ಅಸಂಬದ್ಧ ನಿರ್ಧಾರ ಎಂದು ಹೇಳುವ ಮೂಲಕ ಕ್ರೀಡಾಸ್ಪೂರ್ತಿ ಮರೆತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಇದೇ ರೀತಿಯ ಐಸಿಸಿ ಕಾನೂನನ್ನು ಬಳಸಿಕೊಂಡು ಕಳೆದ ಪುರುಷರ ವಿಶ್ವಕಪ್ ಪ್ರಶಸ್ತಿಯನ್ನು ಇಂಗ್ಲೆಂಡ್ ತಂಡ ಪಡೆದುಕೊಂಡಿತು. ಪಂದ್ಯ ಟೈ ಆದರೂ ಕೂಡ ಬೌಂಡರಿಗಳ ಆಧಾರದ ಮೇಲೆ ಇಂಗ್ಲೆಂಡ್ ತಂಡ ಗೆದ್ದಾಗ ನೀವು ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿದ್ದೀರಿ. ಯಾಕೆಂದರೆ ಆಗ ಅಲ್ಲಿ ಗೆದ್ದಿದ್ದು ಇಂಗ್ಲೆಂಡ್, ಈಗ ಇಂಗ್ಲೆಂಡ್ ತಂಡದ ವನಿತೆಯರು ಸೆಮಿಫೈನಲ್ ನಲ್ಲಿ ಭಾರತೀಯ ತಂಡದ ಎದುರು ನಡೆಯಬೇಕಿದ್ದ ಪಂದ್ಯದಿಂದ ಹೊರಹೋಗಿದಕ್ಕೆ ನಿಮಗೆ ಇಷ್ಟು ಅಸಮಾಧಾನ ವಾಗುತ್ತಿದೆ. ಇದೇ ರೀತಿ ಅಂದು ನ್ಯೂಜಿಲೆಂಡ್ ತಂಡದ ಪರವಾಗಿ ಮಾತನಾಡಿದ್ದರೇ ಇಂದು ಕೂಡ ನಾವು ನಿಮ್ಮ ಮಾತನ್ನು ಕೇಳುತ್ತಿದ್ದೆವು. ನಿಮ್ಮ ಮಾತಿಗೆ ಬೆಂಬಲ ಸೂಚಿಸುತ್ತಿದ್ದೆವು, ಆದರೆ ತೀರ್ಪು ನಿಮ್ಮ ಪರವಾಗಿ ಬಂದರೆ ಮಾತ್ರ ನಿಮಗೆ ಐಸಿಸಿ ಕಾನೂನುಗಳು ಸರಿಯೆನಿಸುತ್ತದೆ ಆಗ ಕ್ರೀಡಾಸ್ಪೂರ್ತಿ ಮನದಲ್ಲಿ ಹುಟ್ಟುತ್ತದೆ, ಇಲ್ಲವಾದಲ್ಲಿ ಕ್ರೀಡಾಸ್ಪೂರ್ತಿ ನಿಮಗೆ ನೆನಪಿಗೆ ಕೂಡ ಬರುವುದಿಲ್ಲ. ಐಸಿಸಿ ಕ್ರಿಕೆಟ್ ಕಾನೂನುಗಳು ನಿಮಗೆ ತಪ್ಪಾಗಿ ಕಾಣಿಸುತ್ತವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ