ಎಲ್ಲಾ ವರ್ಗದ ಬಡವರಿಗೆ ಭರ್ಜರಿ ಸಿಹಿ ಸುದ್ದಿ ನೀಡಲು ಮುಂದಾದ ಸುರೇಶ್ ಕುಮಾರ್ ! ಮೋದಿಯ ಮತ್ತೊಂದು ಮಹತ್ವದ ಯೋಜನೆ ಕರ್ನಾಟಕದಲ್ಲಿಯೂ ಜಾರಿ??

ನಮಸ್ಕಾರ ಸ್ನೇಹಿತರೇ, ದೇಶದೆಲ್ಲೆಡೆ ಮೊದಲಿಂದಲೂ ಹಲವಾರು ಸಮುದಾಯಗಳ ಅಭಿವೃದ್ದಿಗಾಗಿ ಸರ್ಕಾರವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಅದೇ ಕಾರಣಕ್ಕಾಗಿಯೇ ಸಮುದಾಯದ ಆಧಾರದ ಮೇಲೆ ಹಲವಾರು ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನಿಗದಿ ಪಡಿಸಲಾಗಿದೆ. ಆದರೆ ಕೆಲವು ಸಮುದಾಯಗಳನ್ನು ಹೊರತು ಪಡಿಸಿ ಉಳಿದ ಸಮುದಾಯಗಳ ಬಡವರು ಯಾವುದೇ ಮೀಸಲಾತಿಯಿಲ್ಲದೆ ಕಷ್ಟ ಪಡುತ್ತಿದ್ದರು. ಅದೇ ಕಾರಣಕ್ಕಾಗಿ ಸಮುದಾಯದ ಮೀಸಲಾತಿಯ ಜೊತೆಯಲ್ಲಿ ಉಳಿದ ಸಮುದಾಯದ ಬಡವರಿಗೂ ಸರ್ಕಾರೀ ಮೀಸಲಾತಿ ಅಗತ್ಯ ಎಂದು ತಿಳಿದ ಕೇಂದ್ರ ಸರ್ಕಾರ ಶಿಕ್ಷಣ, ಉದ್ಯೋಗ, ಇನ್ನಿತರ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ನೀಡಿತ್ತು.

ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಜಾರಿಗೆ ತಂದಿದ್ದರೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಕಾರಣ ಈ ಯೋಜನೆ ಜಾರಿಯಾಗಿರಲಿಲ್ಲ. ಆದರೆ ಇದೀಗ ಇದರ ಕುರಿತು ಧ್ವನಿ ಎತ್ತಿರುವ ಸಚಿವ ಸುರೇಶ್ ಕುಮಾರ್ ರವರು, ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿಯೂ ಕೂಡ ಸಾಮಾನ್ಯ ವರ್ಗದ ಜನರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಚಿಂತನೆ ನಡೆಸಲಾಗಿದೆ. ಇದರ ಕುರಿತು ಮುಖ್ಯಮಂತ್ರಿ ಬಿ ಸ್ ವೈ ರವರಿಗೆ ಪತ್ರ ಬರೆದಿದ್ದೇನೆ. ಮುಂದಿನ ವಿಧಾಸಭಾ ಕಲಾಪದಲ್ಲಿ ಈ ಹೊಸ ಮಾಸೂದೆಯನ್ನು ಮಂಡಿಸಲು ಅವಕಾಶ ನೀಡಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.

Post Author: Ravi Yadav