ಬಿಗ್ ನ್ಯೂಸ್:ಬಡವರಿಗೆ ಬಂಪರ್, ಆರೋಗ್ಯ ಕರ್ನಾಟಕಕ್ಕೆ ಭರ್ಜರಿ ಯೋಜನೆ ಘೋಷಣೆ ಮಾಡಿದ ಶ್ರೀ ರಾಮುಲು

ಬಿಗ್ ನ್ಯೂಸ್:ಬಡವರಿಗೆ ಬಂಪರ್, ಆರೋಗ್ಯ ಕರ್ನಾಟಕಕ್ಕೆ ಭರ್ಜರಿ ಯೋಜನೆ ಘೋಷಣೆ ಮಾಡಿದ ಶ್ರೀ ರಾಮುಲು

ಶ್ರೀ ರಾಮುಲು ರವರು ಈ ಬಾರಿ ಭರ್ಜರಿ ಫಾರ್ಮ್ನಲ್ಲಿ ಇದ್ದಂತೆ ಕಾಣುತ್ತಿದೆ. ಆರೋಗ್ಯ ಇಲಾಖಾ ಸಚಿವರಾದ ಮೇಲೆ ತಮಗೆ ಹೈ ಕಮಾಂಡ್ ಯಾವ ಕಾರಣಕ್ಕೆ ಮಹತ್ವದ ಖಾತೆ ನೀಡಿದೆ ಎಂಬುದನ್ನು ಎಲ್ಲರಿಗೂ ತಮ್ಮ ಕಾರ್ಯ ವೈಖರಿಯ ಮೂಲಕ ಸಾರಿ ಹೇಳುತ್ತಿದ್ದಾರೆ. ಕಳೆದ ಬಾರಿ ಇದೇ ಖಾತೆಯ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಿ ತೋರಿಸಿ, ಈ ಬಾರಿ ಮತ್ತಷ್ಟು ವೇಗದಿಂದ ಕರ್ನಾಟಕ ರಾಜ್ಯದಲ್ಲಿ ಮುನ್ನುಗುತ್ತಿರುವ ಶ್ರೀ ರಾಮುಲು ರವರು ಇದೀಗ ಮತ್ತೊಮ್ಮೆ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ನೆರವಾಗುವಂತಹ ಭರ್ಜರಿ ಘೋಷಣೆಯನ್ನು ಘೋಷಣೆ ಮಾಡುವ ಮೂಲಕ ನರೇಂದ್ರ ಮೋದಿ ರವರ ಆರೋಗ್ಯ ಭಾರತ ಎಂಬ ಕನಸಿಗೆ ಆರೋಗ್ಯ ಕರ್ನಾಟಕ ಮಾಡುವ ಮೂಲಕ ಕೈ ಜೋಡಿಸಲು ಮುಂದಾಗಿದ್ದಾರೆ.

ಹೌದು, ನರೇಂದ್ರ ಮೋದಿ ರವರ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತ್‌ ಅನ್ನು ಎಲ್ಲ ನಾಗರಿಕರು ಬಳಸಿಕೊಳ್ಳಬೇಕು ಎಂದು ಕರೆ ನೀಡಿರುವ ಶ್ರೀ ರಾಮುಲು ರವರು, ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ರಾಜ್ಯದ 2509 ಸರ್ಕಾರಿ ಆಸ್ಪತ್ರೆಗಳು ಹಾಗೂ 434 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 2943 ಆಸ್ಪತ್ರೆಗಳಲ್ಲಿ 1650 ವಿವಿಧ ಬಗೆಯ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿರುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಮತ್ತಷ್ಟು ಬಡ ಕುಟುಂಬಗಳಿಗೆ ಇದು ಸಹಕಾರಿಯಾಗಲಿದೆ. ಬಿಪಿಎಲ್‌ ಕುಟುಂಬಗಳು ಪ್ರತಿ ವರ್ಷ 5 ಲಕ್ಷ ವರೆಗೆ ಉಚಿತ ಚಿಕಿತ್ಸೆ ಪಡೆಯ ಬಹುದಾಗಿದೆ. ಎಪಿಎಲ್‌ ಕುಟುಂಬಗಳು ಪ್ರತಿ ವರ್ಷ 1.50 ಲಕ್ಷ ವರೆಗೆ ಉಚಿತ ಚಿಕಿತ್ಸೆ ಪಡೆಯ ಬಹುದಾಗಿದೆ. ಆದ ಕಾರಣದಿಂದ ಈ ಯೋಜನೆಯ ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿ ದಾಖಲೆಯನ್ನಾಗಿ ನೀಡಿ ಬೆಂಗಳೂರು ಒನ್‌, ಕರ್ನಾಟಕ ಒನ್‌, ಸೇವಾ ಸಿಂಧು ಕೇಂದ್ರಗಳು ಸೇರಿಂದಂತೆ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯಕಾರ್ಡ್’ ಪಡೆಯಲು ಅವಕಾಶ ನೀಡಿರುವುದಾಗಿ ಘೋಷಣೆ ಮಾಡಿದ್ದಾರೆ.