ರಾಹುಲ್ ಗಾಂಧಿ ಗೆ ಟಾಂಗ್ ನೀಡಿದ ಶಶಿ ತರೂರ್ ! ದೇಶದ ಗೌರವ ಎತ್ತಿ ಹಿಡಿಯಲು ಒತ್ತಾಯ ಮಾಡಿದ್ದು ಯಾಕೆ ಗೊತ್ತಾ?

ನರೇಂದ್ರ ಮೋದಿ ರವರು ದೇಶಕ್ಕಾಗಿ ದಿನದ ೨೪ ಗಂಟೆಗಳಲ್ಲಿ ೧೮ ಗಂಟೆಗಳ ಕೆಲಸ ಮಾಡುವ ದಣಿವರಿಯದ ನಾಯಕ ಎಂಬುವುದರಲ್ಲಿ ಎರಡು ಮಾತಿಲ್ಲ. ಇದನ್ನು ಹಲವಾರು ವಿರೋಧ ಪಕ್ಷದ ನಾಯಕರು ಸಹ ಒಪ್ಪಿಕೊಂಡಿದ್ದಾರೆ. ಅಷ್ಟೇ ಯಾಕೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಸಹ ಒಪ್ಪಿಕೊಂಡಿದ್ದಾರೆ. ಇನ್ನು ಒಂದೆಡೆ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಭರ್ಜರಿ ಯಶಸ್ಸು ಗಳಿಸುತ್ತಾ ಇದ್ದರೆ, ಮತ್ತೊಂದೆಡೆ ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಹೀಗಿರುವಾಗ ಸದಾ ನರೇಂದ್ರ ಮೋದಿ ರವರನ್ನು ಟೀಕೆ ಮಾಡುವ ರಾಹುಲ್ ಗಾಂಧಿ ರವರು ಅಮೆರಿಕದ ಹ್ಯೂಸ್ಟನ್​ನಲ್ಲಿ ಭಾರತೀಯ ಸಮುದಾಯದವರು ‘ಹೌಡಿ ಮೋದಿ’ ಕಾರ್ಯಕ್ರಮವನ್ನು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.

ಇದೇ ವಿಚಾರವಾಗಿ ಇದೀಗ ಶಶಿ ತರೂರ್ ರವರು ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ. ಟಾಂಗ್ ನೀಡುವುದಷ್ಟೇ ಅಲ್ಲದೆ, ರಾಹುಲ್ ಗಾಂಧಿ ರವರಿಗೆ ರಾಜಕೀಯ ಪಾಠ ಕಲಿಸಲು ಮುಂದಾಗಿದ್ದಾರೆ. ಹೌದು, ನೀವು ಯಾವ ಪಕ್ಷದ ಬೆಂಬಲಿಗರೇ ಹಾಗಿರಬಹುದು, ಆದರೆ ದೇಶದ ಪ್ರಧಾನಿ ಎಂದರೆ, ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲೇಬೇಕು, ಇದೇ ವಿಷಯವನ್ನು ಸಾರಿ ಹೇಳಿರುವ ಶಶಿ ತರೂರ್ ರವರು, ವಿಪಕ್ಷ ಸಂಸದನಾದ ನಾನು ಮೋದಿ ಅವರ ನೀತಿ, ಹೇಳಿಕೆಗಳು, ಕೆಲಸಗಳನ್ನು ಮತ್ತು ಸರ್ಕಾರದ ವೈಫಲ್ಯಗಳನ್ನು ಟೀಕಿಸುವ ಹಕ್ಕು ಇದೆ. ಆದರೆ ಮೋದಿ ವಿದೇಶಕ್ಕೆ ತೆರಳಿದಾಗ ಅವರು ಭಾರತ ದೇಶದ ಪ್ರಧಾನ ಮಂತ್ರಿ, ಅವರು ಭಾರತದ ಧ್ವಜವನ್ನು ವಿದೇಶದಲ್ಲಿ ಹಾರಿಸಲು ಹೋಗಿರುತ್ತಾರೆ. ಹಾಗಾಗಿ ಮೋರಿ ರವರನ್ನು ನಮ್ಮ ದೇಶದ ಪ್ರಧಾನಮಂತ್ರಿ ಎಂದು ಗೌರವ ನೀಡಬೇಕು ಎಂದು ತಿಳಿಸಿದ್ದಾರೆ.

Post Author: Ravi Yadav