ಉಪ ಚುನಾವಣೆಯ ದಿನಾಂಕ ಪ್ರಕಟಣೆ ಬೆನ್ನಲ್ಲೇ ಜೆಡಿಎಸ್ ಗೆ ಮೊದಲ ಶಾಕ್ ! ಬಿಜೆಪಿಗೆ ಫುಲ್ ಪವರ್???

ಇದೀಗ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆಯ ರಂಗು ಏರಿದೆ. ಅಧಿಕಾರಯುತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಈ ಚುನಾವೆಯಲ್ಲಿ ಭಾರಿ ಪೈಪೋಟಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಧಿಕಾರವನ್ನು ಕೈಯಲ್ಲಿ ಇಟ್ಟಿಕೊಂಡು ಅದೇ ಕ್ಷೇತ್ರಗಳ ಮಾಜಿ ಶಾಸಕರನ್ನು ತನ್ನ ಸುಪ್ಪತ್ತಿಗೆಯಲ್ಲಿ ಇಟ್ಟಿಕೊಂಡು ಹಾಗೂ ಲೋಕಸಭೆಯ ಚುನಾವಣಾ ಫಲಿತಾಂಶವನ್ನು ಗಮನಿಸಿ ಹೇಳುವುದಾದರೆ ಖಂಡಿತ ಬಿಜೆಪಿ ಪಕ್ಷ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಗಳಿಗಿಂತ ಒಂದು ಕೈ ಮೇಲೆ ಇದೆ. ಆದರೆ ಯಾರು ಏನೇ ಮಾಡಿದರೂ ಕೊನೆ ಕ್ಷಣದಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೋ ಯಾರಿಗೂ ತಿಳಿದಿಲ್ಲ.

ಈಗಾಗಲೇ ಎಲ್ಲಾ ಮೂರು ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿಯನ್ನು ನಡೆಸಲು ಸಿದ್ಧವಾಗಿವೆ. ಇತ್ತ ಬಿಜೆಪಿ ಪಕ್ಷವು ಅನರ್ಹ ಶಾಸಕರನ್ನು ಹೇಗೆ ಸ್ಪರ್ಧೆ ಮಾಡಿಸುವುದು ಎಂದು ಯೋಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೇಗಾದರೂ ಮಾಡಿ ತಮಗೆ ಕೈ ನೀಡಿ ಸರ್ಕಾರ ಉರುಳಿಸಿದ ಶಾಸಕರಿಗೆ ಬುದ್ದಿ ಕಲಿಸುವುದಷ್ಟೇ ಅಲ್ಲದೇ, ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಪಕ್ಷವನ್ನು ಬಹುಮತದಿಂದ ದೂರ ಇಟ್ಟು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಸಲು ತಮ್ಮದೇ ಆದ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳುತ್ತಿವೆ. ಈ ವಿದ್ಯಮಾನಗಳ ನಡುವೆ ಚುನಾವಣೆಯ ದಿನಾಂಕ ಪ್ರಕಟಣೆಗೊಂಡ ಕೆಲವು ಘಂಟೆಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಜೆಡಿಎಸ್ ಪಕ್ಷಕ್ಕೆ ಮೊದಲ ಶಾಕ್ ನೀಡಿದ್ದಾರೆ ಜೆಡಿಎಸ್ ಪಕ್ಷದ ಪ್ರಭಾವಿ ಶಾಸಕ.

ಹೌದು, ಕಳೆದ ಬಾರಿ ಜೆಡಿಎಸ್ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ್ ರವರು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ಹುಣಸೂರು ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪಕ್ಷವು ತನ್ನ ಎಲ್ಲಾ ಪ್ರತಿಷ್ಠೆಯನ್ನು ಕಣಕ್ಕೆ ಇಟ್ಟು ಹೋರಾಟ ಮಾಡಲು ಸಿದ್ಧವಾಗಿದೆ. HD ದೇವೇಗೌಡ, ಮಾಜಿ ಸಚಿವ ರೇವಣ್ಣ, ಕುಮಾರಸ್ವಾಮಿ ಸೇರಿದಂತೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ರವರೂ ಸಹ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ತಮಗೆ ಬಾರಿ ಮುಖಭಂಗ ಉಂಟಾಗುವಂತೆ ಮಾಡಿದ ವಿಶ್ವನಾಥ್ ರವರ ಕ್ಷೇತ್ರವನ್ನು ಹೇಗಾದರೂ ಗೆದ್ದುಕೊಂಡು ಬಿಜೆಪಿಗೆ ಬುದ್ದಿ ಕಲಿಸಬೇಕು ಹಾಗೂ ತಮ್ಮ ತಾಕತ್ತು ಏನು ಎಂಬುದು ತಿಳಿಸಬೇಕು ಎಂದು ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ದಿನಾಂಕ ಪ್ರಕಟಣೆಗೊಳ್ಳುವ ಮುನ್ನವೇ ಈ ವಿಚಾರವನ್ನು ಹಲವಾರು ಬಾರಿ ಸ್ಪಷ್ಟಪಡಿಸಿದ್ದರು.

ಮೊದಲಿಂದಲೂ GT ದೇವೇಗೌಡರ ಪುತ್ರನನ್ನು ಇಲ್ಲಿ ಕಣಕ್ಕೆ ಇಳಿಯುವಂತೆ ಮಾಡಿ, ಕುಟುಂಬ ರಾಜಕಾರಣ ಕಳಂಕವನ್ನು ಕಳೆದುಕೊಳ್ಳುವಂತೆ ಮಾಡಲು ಹಾಗೂ GT ದೇವೇಗೌಡರ ವರ್ಚಸ್ಸು ಹಾಗೂ ಸಮುದಾಯದ ಬಲವನ್ನು ಸಂಪೂರ್ಣವಾಗಿ ಬಳಸಿಕೊಂಡು ಮತಗಳನ್ನು ಪಡೆಯಲು ಹಾಗೂ ಜೆಡಿಎಸ್ ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ಬಿಂಬಿಸಲು ಪ್ರಯತ್ನ ಪಡುತ್ತಿದ್ದ ಜೆಡಿಎಸ್ ಪಕ್ಷದ ವರಿಷ್ಠರಿಗೆ ಚುನಾವಣಾ ದಿನಾಂಕ ಪ್ರಕಟಣೆಗೊಂಡ ದಿನವೇ GT ದೇವೇಗೌಡರವರು ಶಾಕ್ ನೀಡಿದ್ದಾರೆ. ಯಾರು ಏನೇ ಹೇಳಿದರೂ ನಮ್ಮ ಕುಟುಂಬದಿಂದ ಯಾರೇ ಆಗಲಿ ಅದು ನನ್ನ ಪುತ್ರನೇ ಆಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದರಿಂದ, GT ದೇವೇಗೌಡರ ತೋಳ್ಬಲ, ವರ್ಚಸ್ಸು ಹಾಗೂ ಒಕ್ಕಲಿಗ ಸಮುದಾಯದ ಬೆಂಬಲದ ಆಸೆಯಲ್ಲಿದ್ದ ಜೆಡಿಎಸ್ ಗೆ ಶಾಕ್ ಎದುರಾಗಿದೆ. ಅಷ್ಟೇ ಅಲ್ಲದೇ ಇದೀಗ ಇರುವ ಕೊಂಚ ಸಮಯದಲ್ಲಿ ಸ್ಪರ್ಧೆ ಮಾಡಲು ಒಕ್ಕಲಿಗ ನಾಯಕರನ್ನು ಹುಡುಕುವುದಾ ಅಥವಾ ಈಗಾಗಲೇ ಕ್ಷೇತ್ರದಲ್ಲಿ ಕೊಂಚಿತ್ತೂ ವರ್ಚಸ್ಸನ್ನು ಹೊಂದಿರುವ ಬೇರೆ ಸಮುದಾಯದ ನಾಯಕರನ್ನು ಹುಡುಕುವುದಾ ಎಂದು ಜೆಡಿಎಸ್ ತಲೆಕೆಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.

Post Author: Ravi Yadav