ಹೈಕಮಾಂಡ್ ವಿರುದ್ಧ ಸಿಡಿದೆದ್ದ ಬಿಎಸ್ವೈ ಪುತ್ರ ! ಅಸಮಾಧಾನ ಯಾಕೆ ಗೊತ್ತಾ??

ಹೈಕಮಾಂಡ್ ವಿರುದ್ಧ ಸಿಡಿದೆದ್ದ ಬಿಎಸ್ವೈ ಪುತ್ರ ! ಅಸಮಾಧಾನ ಯಾಕೆ ಗೊತ್ತಾ??

ಇದೀಗ ಬಿಜೆಪಿ ಪಕ್ಷದ ಹೈಕಮಾಂಡ್ ಮುಂದಾಲೋಚನೆ ಮಾಡಿ, ಬಿಎಸ್ ಯಡಿಯೂರಪ್ಪನವರ ರಾಜಕೀಯ ನಿವೃತ್ತಿಯಾದ ನಂತರ ಕರ್ನಾಟಕ ಪಕ್ಷದಲ್ಲಿ ಬಿಜೆಪಿ ಪಕ್ಷವು ಇಂದಿನಂತೆ ನೆಲೆಯೂರಿ ಇರಬೇಕು ಎಂಬ ಮಹತ್ವಾಕಾಂಕ್ಷೆಯಿಂದ 3 ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ್ದಾರೆ. ಬಿಜೆಪಿ ಪಕ್ಷವು ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೇರುವ ಮಟ್ಟಿಗೆ ಪಕ್ಷವನ್ನು ಕಟ್ಟಿ ಬೆಳೆಸಿದ್ದು ಬಿಎಸ್ ಯಡಿಯೂರಪ್ಪನವರು ಎಂದು ಬಿಜೆಪಿ ಪಕ್ಷದ ಹೈಕಮಾಂಡ್ಗೆ ಮೊದಲಿನಿಂದಲೂ ತಿಳಿದಿದೆ.

ಅದೇ ಕಾರಣಕ್ಕಾಗಿ ಎಲ್ಲ ಚುನಾವಣೆಗಳನ್ನು ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಸಿ, ಅತಿದೊಡ್ಡ ಪಕ್ಷವಾಗಿ ಇಂದು ಕರ್ನಾಟಕ ರಾಜ್ಯದಲ್ಲಿ ಹೊರಹೊಮ್ಮಿದೆ.ಕಳೆದ ಚುನಾವಣಾ ಸಂದರ್ಭದಲ್ಲಿ ಬಿ ಸ್ ವೈ ರವರನ್ನು ನಾಯಕತ್ವದಿಂದ ಕೆಳಗೆ ಇಳಿಸುವಂತೆ ಹಲವಾರು ಕರ್ನಾಟಕ ರಾಜಕೀಯ ನಾಯಕರು ಕೇಳಿಕೊಂಡಾಗ ಅಮಿತ್ ಶಾ ಖಡಕ್ ಸಂದೇಶ ನೀಡಿ ಬಿ ಸ್ ವೈ ಅವರೇ ನಾಯಕ್ರು ಎಂದು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು, ಹೀಗಿರುವಾಗ ಯಡಿಯೂರಪ್ಪನವರ ನಂತರ ಕರ್ನಾಟಕ ರಾಜ್ಯದ ಬಿಜೆಪಿ ಪಕ್ಷದ ಗತಿಯೇನು ಎಂಬುದನ್ನು ಆಲೋಚನೆ ಮಾಡಿ, ವಿವಿಧ ಸಮುದಾಯದ ನಾಯಕರನ್ನು ಮುನ್ನೆಲೆಗೆ ತರಬೇಕು ಎಂದು ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದೆ.

ಬಿಜೆಪಿ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಹಲವಾರು ನಾಯಕರು ಸ್ವಾಗತ ಮಾಡಿದ್ದರೆ, ಮತ್ತಷ್ಟು ನಾಯಕರು ತಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕೆಲವು ಮಾಧ್ಯಮಗಳು ಯಡಿಯೂರಪ್ಪನವರನ್ನು ತಡೆಹಿಡಿಯಲು ಈ ರೀತಿ ಬಿಜೆಪಿ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದೆ ಎಂದು ಕೆಲವು ಗಾಳಿ ಮಾತುಗಳನ್ನು ಹಬ್ಬಿಸುತ್ತಿದ್ದಾರೆ, ಇದನ್ನು ಅರ್ಥ ಮಾಡಿಕೊಂಡ ಬಿಜೆಪಿ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದ ಹೈಕಮಾಂಡ್ ಹಾಗೂ ಬಿಎಸ್ವೈ ನಡುವೆ ಕಾಳಗ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಬಿಎಸ್ ಯಡಿಯೂರಪ್ಪನವರ ಪುತ್ರರಾದ ಬಿ ವೈ ರಾಘವೇಂದ್ರ ರವರು ಬಿಜೆಪಿ ಪಕ್ಷದ ಹೈಕಮಾಂಡ್ ವಿರುದ್ಧ ಸಿಟ್ಟಾಗಿದ್ದಾರೆ. ಹೌದು ಬಿಜೆಪಿ ಪಕ್ಷದ ಹೈಕಮಾಂಡ್ ಮೂರು ಉಪಮುಖ್ಯಮಂತ್ರಿ ಗಳನ್ನು ಸೃಷ್ಟಿ ಮಾಡಿರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆ ಮಾಡಿದಂತೆ ಆಗುತ್ತದೆ ಎಂಬರ್ಥದಲ್ಲಿ ಮಾತನಾಡಿರುವ ಬಿ ವೈ ರಾಘವೇಂದ್ರ ರವರು ಬಿಜೆಪಿ ಪಕ್ಷದ ಹೈಕಮಾಂಡ್ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಾರದು.

ಸಂವಿಧಾನದಲ್ಲಿ ಅಸ್ತಿತ್ವವೇ ಇಲ್ಲದ ಹುದ್ದೆಗೆ ಮೂರು ಜನರನ್ನು ಆಯ್ಕೆ ಮಾಡುವ ಅವಶ್ಯಕತೆ ಕರ್ನಾಟಕದಲ್ಲಿ ಏನಿತ್ತು? ಈ ರೀತಿಯಾಗಿ ನಮ್ಮ ತಂದೆಯವರಾದ ಯಡಿಯೂರಪ್ಪನವರನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೆ ಸ್ವತಃ ಯಡಿಯೂರಪ್ಪನವರು ಇದೇ ಮಾತುಗಳನ್ನು ಕಳೆದ ಕೆಲವು ಗಂಟೆಗಳ ಹಿಂದಷ್ಟೇ ಇದು ಕೇವಲ ಮುಂದಾಲೋಚನೆಯ ನಿರ್ಧಾರ ಎಂದು  ತಳ್ಳಿಹಾಕಿದ್ದರು.