ಯು-ಟರ್ನ್ ಹೊಡೆದ ಸುಧಾಕರ್ ! ಸಂಚಲನ ಮೂಡಿಸಿದ ರಾಜಕೀಯ ನಡೆ

ಚಿಕ್ಕಬಳ್ಳಾಪುರ ಮಾಜಿ ಶಾಸಕರಾಗಿದ್ದ ಕೆ ಸುಧಾಕರ್ ಅವರು ಇತ್ತೀಚಿಗಷ್ಟೇ ಸರ್ಕಾರದ ವೈಫಲ್ಯಗಳನ್ನು ಕಂಡು ಹಾಗೂ ತಮಗೆ ಮೈತ್ರಿ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ರಾಜೀನಾಮೆ ನೀಡಿ ಅತೃಪ್ತರ ಬಣ ಸೇರಿಕೊಂಡಿದ್ದರು, ಪಕ್ಕ ಸಿದ್ದರಾಮಯ್ಯರವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಇವರ ಈ ನಡೆ ರಾಜಕೀಯದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಸಿದ್ದರಾಮಯ್ಯ ಅವರೇ ಸರ್ಕಾರ ಉರುಳಿಸಲು ಸುಧಾಕರ್ ಅವರನ್ನು ಅತೃಪ್ತ ಬಣ ಸೇರಿಕೊಳ್ಳಲು ಆದೇಶ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಯಾಕೆಂದರೆ ಇವರು ಸಿದ್ದರಾಮಯ್ಯರವರ ಮಾತು ಮೀರುವಂತಹ ನಾಯಕ ನಾಗಿರಲಿಲ್ಲ. ಕೊನೆಗೂ ಅತೃಪ್ತರ ಬಣ ಸೇರಿಕೊಂಡಿದ್ದ ಸುಧಾಕರ್ ಅವರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು. ತದನಂತರ ಶಾಸಕರು ಅನರ್ಹಗೊಂಡ ಮೇಲೆ ವಾಪಸ್ಸಾದ ಸುಧಾಕರ್ ಅವರು ಕಾಂಗ್ರೆಸ್ ಪಕ್ಷದ ಹಲವಾರು ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆಗಳನ್ನು ಆರಂಭ ಮಾಡಿದ್ದರು.

ಇನ್ನು ಅನರ್ಹತೆ ಬಗ್ಗೆ ಮಾತನಾಡಿದಾಗ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಡಿ ಕೆ ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದಿದ್ದ ಸುಧಾಕರ್ ಅವರು ಇದೀಗ ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲನ್ನು ಮತ್ತೊಮ್ಮೆ ಮರು ನೆನಪಿಸಿ ಕಾಂಗ್ರೆಸ್ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದ ಸುಧಾಕರ್ ಅವರ ಈ  ನ್ಯೂ ಯು ಟರ್ನ್ ಹೇಳಿಕೆ ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕ ಸುಧಾಕರ್ ಅವರ ಮುಂದಿನ ಹೆಜ್ಜೆ ಇನ್ನು ಪ್ರಶ್ನಾತೀತವಾಗಿದೆ. ತಮ್ಮ ಸ್ವಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾಕರ್ ಅವರು, ಈ ಕ್ಷಣದವರೆಗೂ ನಾನು ಕಾಂಗ್ರೆಸ್ ನವನೇ‌. ನಾನು ಕಾಂಗ್ರೆಸ್ ವಿರುದ್ಧ ಎಲ್ಲಾದರೂ ಮಾತನಾಡಿದ್ದೀನಾ’ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದಾರೆ . ನಾನು ಯಾವುದೇ ತಪ್ಪು ಮಾಡಿಲ್ಲ, ಯಾವುದೇ ವಿಚಾರಣೆ ಮಾಡದೆ ಕಾಂಗ್ರೆಸ್ ಪಕ್ಷದ ನಾಯಕರು ಯಾಕೆ ಹೀಗೆ ಮಾಡಿದರು ಎಂಬುದು ತಿಳಿಯುತ್ತಿಲ್ಲ.

ನಾನು ಹೀಗೆ ಯಾಕೆ ಮಾಡಿದೆ ಎಂಬುದನ್ನು ಅರ್ಥಮಾಡಿಕೊಳ್ಳದೆ ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ವಿಚಾರದ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಕ್ತಾರ ವೇಣುಗೋಪಾಲ್ ರವರ ಬಳಿ ಮಾತುಕತೆ ನಡೆಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಸೇರಿಕೊಳ್ಳುವ ಬಯಕೆಯನ್ನು ಹೊರಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಇದೀಗ ಈ ರೀತಿ ಹೇಳಿಕೆ ನೀಡಿರುವ ಸುಧಾಕರ್ ಅವರ ನಡೆಯನ್ನು ನೋಡಿದರೆ ಎಲ್ಲರಲ್ಲೂ ಕುತೂಹಲ ಉಂಟಾಗಿದೆ. ಆದರೆ ಅಂದು ವಿಧಾನಸಭಾ ಕಲಾಪದಲ್ಲಿ ಸಿದ್ದರಾಮಯ್ಯರವರು ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಸೇರಿಸಿಕೊಳ್ಳುವುದಿಲ್ಲ ಎಂಬ ಮಾತು ಸಹ ನೆನಪಾಗುತ್ತದೆ. ಇದೀಗ ಸಿದ್ದರಾಮಯ್ಯರವರು ಕುಮಾರಸ್ವಾಮಿ ರವರಿಗೆ ನೀಡಿದ ಮಾತು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಇನ್ನು ಇದೇ ಸಮಯದಲ್ಲಿ ಸುಧಾಕರ್ ಅವರ ಮೇಲೆ ಅನರ್ಹ ಬಾಣವನ್ನು ಬಿಟ್ಟಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರ ಬಗ್ಗೆ ಮಾತನಾಡಿದ ಸುಧಾಕರ್ ಅವರು, ರಮೇಶ್ ಕುಮಾರ್ ರವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮನ್ನು ನಾನು ಸ್ವಾಮಿ ಎಂದು ದೇವರ ಭಾವನೆಯಿಂದ ಕರೆಯುತ್ತಿದ್ದೆ, ಸತ್ಯಹರಿಶ್ಚಂದ್ರ ನಂತೆ ನೀವು ಮಾತನಾಡುತ್ತೀರಿ, ಆದರೆ ಅಂದು ಮಾಜಿ ಸಿಎಂ ದೇವರಾಜ ಅರಸು ಅವರ ಜೊತೆಯಲ್ಲಿದ್ದ ರಾಮಕೃಷ್ಣ ಹೆಗಡೆಯವರ ಜೊತೆ ಯಾಕೆ ನೀವು ಹೋಗಿ ಸೇರಿಕೊಂಡಿರೀ? ತದನಂತರ ರಾಮಕೃಷ್ಣ ಹೆಗಡೆಯವರ ಜೊತೆ ಸ್ನೇಹ ಕಳೆದುಕೊಂಡು ಹೆಚ್ ಡಿ ದೇವೇಗೌಡರ ಜೊತೆ ಯಾಕೆ ಹೋದ್ರಿ?? ನಿಮ್ಮನ್ನು ಐದು ವರ್ಷಗಳ ಕಾಲ ಸ್ಪೀಕರ್ ಮಾಡಿದ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರಿಗೆ ಕೈನೀಡಿ ಕೊನೆಗೆ ಕೋಲಾರದ ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಎಸ್ಸೆಂ ಕೃಷ್ಣ ರವರ ನೇತೃತ್ವದಲ್ಲಿ ಯಾಕೆ ಕಾಂಗ್ರೆಸ್ ಪಕ್ಷ ಸೇರಿಕೊಂಡೀರೀ? ಇದು ಪಕ್ಷಾಂತರವಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Post Author: Ravi Yadav