35-A ರದ್ದಾದ ಬಳಿಕ ಮತ್ತೊಂದು ಮಹತ್ವದ ಬೆಳವಣಿಗೆ ! ಎಚ್ಚರಿಕೆ ನೀಡಿದ ರಾಜಕೀಯ ನಾಯಕರನ್ನು ಮಟ್ಟಹಾಕಲು ಮತ್ತೊಂದು ದಿಟ್ಟ ನಿರ್ಧಾರ ತೆಗೆದುಕೊಂಡ ಅಮಿತ್ ಶಾ

ಇಂದು ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದಾಗಿರುವುದು ನಿಮಗೆಲ್ಲರಿಗೂ ತಿಳಿದಿರುವ ಇಂತಹ ಸಮಯದಲ್ಲಿ ಈ ರೀತಿಯ ನಿರ್ಧಾರವನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿದ್ದ ಕಾಶ್ಮೀರದ ರಾಜಕಾರಣಿಗಳಾದ ಪಿಡಿಪಿ ನಾಯಕಿ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ನ್ಯಾಶ್ನಲ್ ಕಾನ್ಫಿರೆನ್ಸ್  ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ರವರು ಮನ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದರು. ಕೇಂದ್ರ ಸರ್ಕಾರ ಕಾಶ್ಮೀರಿಗಳಿಗೆ ಮೋಸ ಮಾಡುತ್ತಿದೆ ಎಂದು ಉಭಯ ನಾಯಕರೂ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವು ಈ ರೀತಿಯ ಕಠಿಣ ಕ್ರಮವನ್ನು ತೆಗೆದುಕೊಂಡ ಕಾರಣ ಇಷ್ಟು ದಿವಸ ಇದ್ದ ತಮ್ಮ ಓಟ್ ಬ್ಯಾಂಕ್ ಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತ ಜಮ್ಮು-ಕಾಶ್ಮೀರದ ರಾಜಕಾರಣಿಗಳು ಮನಬಂದಂತೆ ಕೇಂದ್ರ ಸರ್ಕಾರಕ್ಕೆ ಬೆದರಿಕೆ ಒಡ್ಡಲು ಆರಂಭ ಮಾಡಿದರು.

ಜಮ್ಮು-ಕಾಶ್ಮೀರದಲ್ಲಿ ರಕ್ತ ಹರಿಯುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಕೂಡಲೇ ಇದನ್ನು ಅರಿತ ಅಮಿತ್ ಶಾ ರವರು ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಏರ್ಪಡುವ ಸೂಚನೆ ಸಿಗುತ್ತಿದೆ, ಅದರಲ್ಲಿ ನೀವೂ ಭಾಗಿಯಾಗಲಿದ್ದೀರಿ ಎಂಬ ಎಂಬ ಅನುಮಾನ ನಮಗೆ ಬಂದಿದೆ,  ನಿಮ್ಮ ನಡವಳಿಕೆ ಹಾಗೂ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಖಂಡಿತ ಇದಕ್ಕೆ ನೀವು ಪುಷ್ಟಿ ನೀಡಿದಂತೆ ಕಾಣುತ್ತಿದೆ. ಆದ ಕಾರಣದಿಂದ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಲಾಗುತ್ತಿದೆ ಎಂದು  ಎಲ್ಲ ರಾಜಕಾರಣಿಗಳಿಗೂ ಪತ್ರ ಬರೆದು ಇಂದು ಸಂಜೆ ಆರು ಮೂವತ್ತರ ಹೊತ್ತಿಗೆ ಸೇನೆಯ ಬೆಂಬಲ ಪಡೆದು ಬಂಧಿಸಲಾಗಿದೆ.  ಅಷ್ಟೇ ಅಲ್ಲದೆ  ಕಾಶ್ಮೀರಕ್ಕೆ ಮತ್ತಷ್ಟು ಹೆಚ್ಚುವರಿ ಯೋಧರನ್ನು ರವಾನೆ ಮಾಡಲು ಅಮಿತ್ ಶಾ ರವರು ನಿರ್ಧಾರ ಮಾಡಿದ್ದು ಇಂದು ಮತ್ತೆ 8000 ಯೋಧರು ಕಾಶ್ಮೀರ ತಲುಪಲಿದ್ದಾರೆ.

Post Author: Ravi Yadav