ಮಂಡ್ಯ ಚುನಾವಣೆಯ ಸೇಡನ್ನು ಯಶ್ ಹಾಗೂ ದರ್ಶನ್ ರವರ ಮೇಲೆ ತೀರಿಸಿ ಕೊಳ್ಳುತ್ತಿರುವ ಹೇಗೆ ಗೊತ್ತಾ??

ಮಂಡ್ಯ ಚುನಾವಣೆಯ ಸೇಡನ್ನು ಯಶ್ ಹಾಗೂ ದರ್ಶನ್ ರವರ ಮೇಲೆ ತೀರಿಸಿ ಕೊಳ್ಳುತ್ತಿರುವ ಹೇಗೆ ಗೊತ್ತಾ??

ಕನ್ನಡದ ಖ್ಯಾತ ನಟರಾಗಿರುವ ಯಶ್ ಹಾಗೂ ದರ್ಶನ್ ರವರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದ್ದರು. ಮಾಜಿ ಮುಖ್ಯಮಂತ್ರಿಗಳ ಮಗನಾಗಿರುವ ನಿಖಿಲ್ ಕುಮಾರಸ್ವಾಮಿ ರವರ ವಿರುದ್ಧ ಸುಮಲತಾ ಅಂಬರೀಶ್ ಅವರ ಪರವಾಗಿ ನಿಂತಿದ್ದ ಕಾರಣ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇಬ್ಬರು ನಟರ ವಿರುದ್ಧ ಕಿಡಿಕಾರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಚಿತ್ರಗಳನ್ನು ನೋಡುವುದಿಲ್ಲ ಹಾಗೆ ಹೀಗೆ ಎಂದೆಲ್ಲ ಮನಬಂದಂತೆ ಅಭಿಯಾನಗಳನ್ನು ನಡೆಸಿದ್ದರು. ಇನ್ನು ಚುನಾವಣಾ ಸಮಯದಲ್ಲಿ ಕುಮಾರಸ್ವಾಮಿ ರವರು ಮುಖ್ಯಮಂತ್ರಿಯಾಗಿದ್ದ ಕಾರಣ ಚುನಾವಣೆ ಮುಗಿದ ಮೇಲೆ ಒಂದು ವೇಳೆ ಇಬ್ಬರ ನಟರ ಬೆಂಬಲದಿಂದ ಸುಮಲತಾ ರವರು ಗೆದ್ದಲ್ಲಿ, ನಟರ ವಿರುದ್ಧ ಸಾಮಾನ್ಯವಾಗಿ ಆಡಳಿತ ಪಕ್ಷ ದ್ವೇಷ ಸಾಧಿಸಲಿದೆ ಎಂಬ ಮಾತುಗಳು ಸಹ ದಟ್ಟವಾಗಿ ಕೇಳಿ ಬಂದಿದ್ದವು. ಇದೀಗ ದರ್ಶನ್ ಹಾಗೂ ಯಶ್ ರವರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು ಮೊದಲೇ ಹೇಳಿದಂತೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ಯಾವ ರೀತಿ ಎಂದು ನೋಡಿದರೆ ನಗು ಬರುತ್ತದೆ, ಆದರೆ ಇದರಿಂದ ಯಾರಿಗೆ ನಷ್ಟ ಎಂಬುದು ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ.ಹೇಗೆ ಗೊತ್ತಾ??  ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗೆ ರಾಮನಗರದಲ್ಲಿ ಜೆಡಿಎಸ್ ಪಕ್ಷದ ನಾಯಕರ ನಾಯಕತ್ವದಲ್ಲಿ ಐತಿಹಾಸಿಕ ಚಾಮುಂಡಿ ತಾಯಿಯ ಕರಗ ಮಹೋತ್ಸವ ನಡೆಯಿತು. ಈ ಕರಗ ಮಹೋತ್ಸವದಲ್ಲಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಯಶ್ ರವರ ಯಾವುದೇ ಹಾಡುಗಳನ್ನು ಹಾಡಬಾರದು ಎಂದು ಜೆಡಿಎಸ್ ಪಕ್ಷದ ನಾಯಕರು ಆದೇಶ ಮಾಡಿದ್ದರು. ಅಭಿಮಾನಿಗಳು ರೊಚ್ಚಿಗೆದ್ದು ಇಬ್ಬರು ನಾಯಕರ ಹಾಡನ್ನು ಹಾಡುವಂತೆ ಕೇಳಿಕೊಂಡರು ಸಹ ಅರ್ಜುನ್ ಜನ್ಯ ನೇತೃತ್ವದಲ್ಲಿ ನೆರೆದಿದ್ದ ಗಾಯಕರು ತಲೆಕೆಡಿಸಿಕೊಳ್ಳದೆ, ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಅಭಿಮಾನಿಗಳು ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್ ಪಕ್ಷದ ಅಭಿಮಾನಿಗಳು ಈ ರೀತಿಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.