ಸುಮಲತಾರವರಿಗೆ ಮೊದಲ ಗೆಲುವು, ಮಂಡ್ಯ ರೈತರಿ ಭರ್ಜರಿ ಗುಡ್ ನ್ಯೂಸ್, ಟೀಕಿಸಿದವರು ಎಲ್ಲಿದಿರಾ?

ಸುಮಲತಾರವರಿಗೆ ಮೊದಲ ಗೆಲುವು, ಮಂಡ್ಯ ರೈತರಿ ಭರ್ಜರಿ ಗುಡ್ ನ್ಯೂಸ್, ಟೀಕಿಸಿದವರು ಎಲ್ಲಿದಿರಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ರವರು ಅಖಾಡಕ್ಕಿಳಿದ ಕ್ಷಣದಿಂದಲೂ ಸುಮಲತಾ ರವರ ಮೇಲೆ ಹಲವಾರು ಟೀಕೆಗಳು ಕೇಳಿಬಂದಿದ್ದವು, ಕೆಲವು ರಾಜಕೀಯ ನಾಯಕರು ಮನಬಂದಂತೆ ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಎಲ್ಲಾ ಟೀಕೆಗಳನ್ನು ಸುಮಲತಾ ರವರು ಬದಿಗೊತ್ತಿ ಕರ್ನಾಟಕ ರಾಜ್ಯದ ಇಂದಿನ ಮುಖ್ಯಮಂತ್ರಿಗಳ ಮಗ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಇಷ್ಟಾದರೂ ಸುಮಲತಾರವರ ಮೇಲೆ ಟೀಕೆಗಳು ಮಾತ್ರ ನಿಲ್ಲಲಿಲ್ಲ, ಸುಮಲತಾ ರವರು ಗೆಲ್ಲುತ್ತಿದ್ದಂತೆ ವಿರೋಧಪಕ್ಷ ನಾಯಕರ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು, ಮನಬಂದಂತೆ ಟೀಕೆಗಳನ್ನು ಮಾಡಲು ಮತ್ತೊಮ್ಮೆ ಆರಂಭಿಸಿದರು. ಗೆಲುವಿನ ನಂತರ ಮೊದಲ ಸಮಸ್ಯೆ ಕೇಳಿಬಂದಿದ್ದು ಕಾವೇರಿ ನೀರು ಹರಿವಿನ ಬಗ್ಗೆ, ಇದೇ ವಿಚಾರವಾಗಿ ಸುಮಲತಾರವರ ವಿರುದ್ಧ ಭಾರೀ ಟೀಕೆಗಳು ಕೇಳಿಬಂದಿದ್ದವು. 

ಆದರೆ ಅದ್ಯವುದಕ್ಕೂ ತಲೆಕೆಡಿಸಿಕೊಳ್ಳದ ಸುಮಲತಾರವರು,  ಮಂಡ್ಯ ಜಿಲ್ಲೆಯ ಜನರಿಗೆ ಕಾವೇರಿ ನದಿ ನೀರು ಬಿಡುವ ವಿಷಯ ಕೇಳಿ ಬಂದ ತಕ್ಷಣ  ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿಶೇಷವಾಗಿ ಮನವಿ ಮಾಡಿಕೊಂಡಿದ್ದರು. ಇಷ್ಟಾದರೂ ಟೀಕಾಕಾರರು ಸುಮ್ಮನಾಗಲಿಲ್ಲ, ಸುಮಲತಾರವರ ಮೇಲೆ ಟೀಕೆಗಳು ನಿಲ್ಲಲಿಲ್ಲ. ಏನು ಕೇಳಿದರೂ ಸಾಕು ಸುಮಲತಾ ರವರನ್ನು ಕೇಳಿ, ಸುಮಲತಾ ರವರಿಗೆ ಮೋದಿ ರವರು ಸಹ ಚೆನ್ನಾಗಿ ಗೊತ್ತು ಆದ ಕಾರಣದಿಂದ ಕಾವೇರಿ ವಿಚಾರವನ್ನು ಸುಮಲತಾ ರವರ ಬಳಿ ಕೇಳಿ ಎಂದು ನಿಖಿಲ್ ಕುಮಾರಸ್ವಾಮಿ ರವರು ಸಹ ಹೇಳಿದ್ದರು. ಇದೀಗ ಸುಮಲತಾ ರವರು ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದನೆ ನೀಡಿದ್ದು ಟೀಕಾಕಾರರು ಹೊಸ ದಾರಿ ಹುಡುಕಿಕೊಳ್ಳಬೇಕಾಗಿದೆ .ಇದೀಗ ಈ ಮನವಿಗೆ ಪ್ರತಿಕ್ರಿಯೆ ನೀಡಿರುವ  ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ ರವರು ಮಂಡ್ಯದ ನಾಲೆಗಳಿಗೆ 2ಟಿಎಂಸಿ ನೀರು ಬಿಡುಗಡೆ ಮಾಡಲು ಒಪ್ಪಿಗೆ ನೀಡಿ ಆದೇಶ ಹೊರಡಿಸಿದ್ದಾರೆ.