ಮತ್ತೊಂದು ಹಗರಣದಲ್ಲಿ ಸಿಎಂಗೆ ಬಿಗ್ ಶಾಕ್ ನೀಡಿದ ನ್ಯಾಯಾಲಯ !

ಮತ್ತೊಂದು ಹಗರಣದಲ್ಲಿ ಸಿಎಂಗೆ ಬಿಗ್ ಶಾಕ್ ನೀಡಿದ ನ್ಯಾಯಾಲಯ !

ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಇದೀಗ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹೇಗಾದರೂ ಮಾಡಿ ವಿಧಾನಸಭಾ ಕಲಾಪದಲ್ಲಿ ವಿಶ್ವಾಸಮತ ಮಂಡಿಸುವ ಕಾರ್ಯವನ್ನು ಸಾಧ್ಯವಾದಷ್ಟು ಮುಂದೂಡಿ ಅತೃಪ್ತರನ್ನು ಮತ್ತೊಮ್ಮೆ ಕೆಲಸದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ರವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ದೊಡ್ಡ ಶಾಕ್ ನೀಡಿದೆ. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ರವರು ನೂರಾರು ಕೋಟಿ ರೂ ಬೆಲೆ ಬಾಳುವ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ 4 ಎಕರೆ ಜಮೀನು ಡಿನೋಟಿಫೈ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಮ್ ಎಸ್ ಮಹದೇವಸ್ವಾಮಿ ರವರು ಜನಪ್ರತಿನಿಧಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯು ಬಿ ರಿಪೋರ್ಟ್ ನೀಡಿತ್ತು‌.

ಲೋಕಾಯುಕ್ತ ಪೊಲೀಸರ ತನಿಖಾ ವರದಿಯನ್ನು ಪ್ರಶ್ನಿಸಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ ಮಹದೇವಸ್ವಾಮಿ ರವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಲೋಕಾಯುಕ್ತ ಪೊಲೀಸರು ನೀಡಿದ ಬಿ ವರದಿಯನ್ನು ವಜಾ ಮಾಡಿ ಕುಮಾರಸ್ವಾಮಿ ರವರು ಸೇರಿದಂತೆ ಬರೋಬ್ಬರಿ 19 ಜನರನ್ನು ವಿಚಾರಣೆಗೆ ಒಳಪಡಿಸುವಂತೆ ಆದೇಶ ನೀಡಿದೆ. ಇದರಿಂದ ಕುಮಾರಸ್ವಾಮಿ ರವರಿಗೆ ಸಂಕಷ್ಟ ಎದುರಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಕುಮಾರಸ್ವಾಮಿ ರವರು ಇದೇ ವಿಚಾರವಾಗಿ ಎಫೈಯರ್ ರದ್ದು ಮಾಡುವಂತೆ ಹೈಕೋರ್ಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಕುಮಾರಸ್ವಾಮಿ ಅವರ ಮನವಿಯನ್ನು ಹೈಕೋರ್ಟ್ ಸಂಪೂರ್ಣವಾಗಿ ತಳ್ಳಿ ಹಾಕಿತ್ತು. ಇದೀಗ ಮತ್ತೊಮ್ಮೆ ಎಫ್ ಐಆರ್ ದಾಖಲಾಗುವ ಎಲ್ಲಾ ಸೂಚನೆಗಳು ಕಾಣಸಿಗುತ್ತಿದ್ದು ಕುಮಾರಸ್ವಾಮಿ ರವರು ಈ ಸವಾಲನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.