ಥ್ಯಾಂಕ್ಯೂ ಮೋದಿಜಿ! ಕರ್ನಾಟಕ ರೈತರಿಗೆ ಆಶಾದಾಯಕವಾದ ಮೋದಿ ನಡೆ! ಒಂದು ರೂಪಾಯಿ ಭ್ರಷ್ಟಾಚಾರ ವಿಲ್ಲದೆ ಪರಿಹಾರ ಘೋಷಿಸಿದ್ದು ಎಷ್ಟು ಕೋಟಿ ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದಲ್ಲಿ ಕಳೆದ ವರ್ಷ ಮುಂಗಾರು ಕೈಕೊಟ್ಟ ಕಾರಣ ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಸಾಲಗಳಿಗೆ ಸಿಲುಕಿಕೊಂಡಿರುವ ರೈತರಿಗೆ ಇದೀಗ ಕೇಂದ್ರ ಸರ್ಕಾರವು ಪರಿಹಾರವನ್ನು ಘೋಷಣೆ ಮಾಡಿದೆ. ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿಯು ನಷ್ಟ ಅನುಭವಿಸಿದ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಹಲವು ದಿನಗಳ ಹಿಂದೆ ವರದಿ ಸಲ್ಲಿಸಿತ್ತು. ಆದರೆ ನೀತಿ ಸಂಹಿತೆ, ಚುನಾವಣೆ ಹೀಗೆ ವಿವಿಧ ಕಾರಣಗಳಿಂದ ಪರಿಹಾರ ಬಿಡುಗಡೆ ವಿಳಂಬವಾಗಿತ್ತು. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿ ಗಳಿಗಾಗಿ ಕೆಳಗಡೆ ಓದಿ.

ಇದೀಗ ಎಲ್ಲಾ ಸಂಸದರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಘಂಟೆಗಳಲ್ಲಿ ಟೇಕಾಫ್ ಗೊಂಡಿರುವ ಮೋದಿರವರ ನೇತೃತ್ವದ ಸರಕಾರವು ಮುಂಗಾರು ಬೆಳೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು ಇನ್ನು ಕೇವಲ ಎರಡು ದಿನಗಳಲ್ಲಿ ಬಾಕಿ ಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದೆ. ಇದೀಗ ಶೇಕಡ ಎಂಬತ್ತರಷ್ಟು ಪರಿಹಾರ ಬಿಡುಗಡೆಯಾಗಿದ್ದು, ಕೇವಲ ಎರಡು ದಿನಗಳಲ್ಲಿ ಬ್ಯಾಂಕ್ ಖಾತೆಗಳಲ್ಲಿ ರೈತರು ಹಣ ನೋಡಬಹುದಾಗಿದೆ. ಇನ್ನುಳಿದ ಶೇಕಡ 20ರಷ್ಟು ರೈತರು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ಸಲ್ಲಿಸದ ಕಾರಣ ಮೂರ್ನಾಲ್ಕು ದಿನಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂಬ ಮಾಹಿತಿ ತಿಳಿದುಬಂದಿದೆ.

ರಾಜ್ಯ ಸರ್ಕಾರದ ಕಂದಾಯ ಸಚಿವ ನೇತೃತ್ವದ ಸಮಿತಿಯು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡಿ ಕೇಂದ್ರಕ್ಕೆ 814 ಕೋಟಿ ಪರಿಹಾರ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರವು ರಾಜ್ಯದ ವರದಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದು ಮೊದಲ ಹಂತದಲ್ಲಿ 651 ಕೋಟಿ ಗಳನ್ನು ಬಿಡುಗಡೆ ಮಾಡಿದೆ. ಮೊದಲೇ ಹೇಳಿದಂತೆ ಇನ್ನುಳಿದ ಹಣ ರೈತರು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ಸಲ್ಲಿಸಿದ ತಕ್ಷಣ ಬಿಡುಗಡೆಯಾಗಲಿದ್ದು ಮೂರ್ನಾಲ್ಕು ದಿನಗಳಲ್ಲಿ ಈ ಪರಿಹಾರವನ್ನು ನಿರೀಕ್ಷಣೆ ಮಾಡಬಹುದು.

ಕಳೆದ ಸಲ ಬರದಿಂದಾಗಿ ರಾಜ್ಯದ್ಯಂತ 21,74,134 ರೈತರು ಬೆಳೆ ಪರಿಹಾರಕ್ಕೆ ನೊಂದಣಿ ಮಾಡಿಕೊಂಡಿದ್ದರು, ಈ ಪೈಕಿ 15,57,010 ರೈತರ ಪರಿಹಾರದ ಬಗ್ಗೆ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ್ದರು. ಸಂಪೂರ್ಣ ಅಂಕಿ ಅಂಶಗಳ ಪ್ರಕಾರ ಈ ಬಾರಿ ರಾಜ್ಯದ 15 ಲಕ್ಷಕ್ಕೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಯಾಗಲಿದೆ. ಬರದ ಜಿಲ್ಲೆ ವಿಜಯಪುರ ಸಿಂಹಪಾಲು ಪಡೆದಿದ್ದು, ಅತಿ ಹೆಚ್ಚು ಪರಿಹಾರ ಪಡೆದ ರೈತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ವಿಷಯವನ್ನು ಖುದ್ದು ವಿಜಯಪುರ ಜಿಲ್ಲಾಧಿಕಾರಿ ಪ್ರಸನ್ನರವರು ಖಚಿತಪಡಿಸಿದ್ದು, ರೈತರ ಪರಿಹಾರ ಬೆಳೆ ಒಂದು ರೂಪಾಯಿ ಭ್ರಷ್ಟಾಚಾರ ವಿಲ್ಲದೆ ಇದೀಗ ರೈತರ ಖಾತೆಗೆ ಜಮಾ ಆಗಲಿದೆ, ಇದುವೇ ಡಿಜಿಟಲೀಕರಣದ ಮ್ಯಾಜಿಕ್.

Post Author: Ravi Yadav