ಮತ್ತೊಮ್ಮೆ ರೈತರ ಪರವಾಗಿ ನಿಂತ ಅಮಿತಾಬ್ ! ಈ ಬಾರಿ ಮಾಡಿದ್ದೇನು ಗೊತ್ತಾ??

ಬಾಲಿವುಡ್ ಚಿತ್ರರಂಗದಲ್ಲಿ ಬಹಳಷ್ಟು ಖ್ಯಾತಿ ಪಡೆದಿರುವ ಅಮಿತಾ ಬಚ್ಚನ್ ರವರು ಕೇವಲ ನಟನೆಯಲ್ಲಿ ಅಷ್ಟೇ ಅಲ್ಲದೆ ತಮ್ಮ ಸಮಾಜಮುಖಿ ಕಾರ್ಯಗಳಿಂದ ಹೆಸರು ಮಾಡಿದ್ದಾರೆ. ಮೊದಲಿನಿಂದಲೂ ಹಲವಾರು ವಿಷಯಗಳಲ್ಲಿ ಮಾನವೀಯತೆ ಮರೆಯುತ್ತಿರುವ ಅಮಿತಾಬಚ್ಚನ್ ರವರು, ದೇಶದ ವಿಕಾಸಕ್ಕಾಗಿ ರೈತನ ಪಾತ್ರ ಬಹಳ ಮುಖ್ಯವಾದದ್ದು ಎಂದು ನಾನು ನಂಬಿದ್ದೇನೆ ಅದೇ ಕಾರಣಕ್ಕಾಗಿ ನಾನು ರೈತರ ಪರ ನಿಲ್ಲುತ್ತೇನೆ ಎಂದು ಹಲವಾರು ದಿನಗಳಿಂದ ಹೇಳಿಕೆ ನೀಡಿತ್ತಾ ಬಂದಿದ್ದಾರೆ. ಅದರಂತೆಯೇ ಈ ಹಿಂದೆಯೂ ಹಲವಾರು ಬಾರಿ ರೈತರ ಬೆಂಬಲಕ್ಕೆ ನಿಂತು, ಹಲವಾರು ರೀತಿಯಲ್ಲಿ ಸಹಾಯ ಮಾಡಿರುವ ಅಮಿತಾಬಚ್ಚನ್ ರವರು ಇದೀಗ ಮತ್ತೊಮ್ಮೆ ಇದೇ ವಿಷಯವಾಗಿ ಸುದ್ದಿಯಲ್ಲಿದ್ದಾರೆ.

ಬಿಹಾರ ರಾಜ್ಯದಲ್ಲಿ ಇದೀಗ ಬರ ತಾಂಡವವಾಡುತ್ತಿದೆ, ಕಳೆದ ಬಾರಿ ರೈತರು ಮಳೆಯ ಅಭಾವದ ಕಾರಣ ಬೆಳೆ ಬೆಳೆಯಲು ಸಾಧ್ಯವಾಗಿದೆ ಸಾಲದ ಶೂಲದಲ್ಲಿ ಸಿಲುಕಿದ್ದಾರೆ. ಅದ್ಯಾಗೋ ಇದು ಅಮಿತಾ ಬಚ್ಚನ್ ರವರ ಕಣ್ಣಿಗೆ ಬಿದ್ದಿತ್ತು. ಈ ವಿಷಯ ತಿಳಿದ ಕೂಡಲೇ ಅಂದೇ ಅಮಿತಾಬಚ್ಚನ್ ರವರು ಬಿಹಾರ ರಾಜ್ಯದಲ್ಲಿ ಸಾಲದ ಶೂಲದಲ್ಲಿ ಸಿಲುಕಿರುವ 2100 ರೈತರ ಸಾಲ ಮರುಪಾವತಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಕೊಟ್ಟಮಾತಿನಂತೆ ಇದೀಗ ಅಮಿತಾಬಚ್ಚನ್ ರವರು ಎಲ್ಲ ರೈತರ ಸಾಲದ ಹಣ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಉತ್ತರ ಪ್ರದೇಶದ ಸಾವಿರಾರು ರೈತರ ಸಾಲ ಪಾವತಿಸಿ ಗಮನಸೆಳೆದಿದ್ದರು, ಈ ರೀತಿಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಅಮಿತಾಬಚ್ಚನ್ ರವರಿಗೆ ನಮ್ಮದೊಂದು ಸಲಾಂ. ನಿಮ್ಮ ಈ ಸಮಾಜಮುಖಿ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.

Post Author: Ravi Yadav