ವಿಶ್ವಕಪ್ ಅಭಿಯಾನಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್ ! ಕಿಂಗ್ ಕೊಹ್ಲಿ ಇಲ್ಲದೆ ಆಡುವುದೇ ಭಾರತ ತಂಡ??

ಇಡೀ ವಿಶ್ವವೇ ಇಂದು ವಿಶ್ವಕಪ್ ಟೂರ್ನಿಯತ್ತ ಗಮನಹರಿಸಿದೆ. ವಿಶ್ವದ ಬಲಾಡ್ಯ ತಂಡಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟವನ್ನು ಆರಂಭಿಸಿವೆ. ಆಂಗ್ಲರ  ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ತಂಡಗಳಿಗೆ ಬಹುದೊಡ್ಡ ಸವಾಲುಗಳು ಎದುರಾಗುತ್ತಿವೆ. ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಈಗಾಗಲೇ ಆಂಗ್ಲರ ನಾಡಿನಲ್ಲಿ ವೈಫಲ್ಯವನ್ನು ಆರಂಭಿಸಿವೆ, ಆದರೆ ಇತರ ತಂಡಗಳಿಗೆ ಸವಾಲು ನೀಡಬಲ್ಲ ಏಕೈಕ ಏಷ್ಯಾ ತಂಡ ಎನಿಸಿಕೊಂಡಿದ್ದ ಭಾರತ ತಂಡಕ್ಕೆ ಈದೀಗ ಬಹುದೊಡ್ಡ ಆಘಾತವಾಗಿದೆ. ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ವಿರಾಟ್ ಕೊಹ್ಲಿ ರವರು ಇದೀಗ ಆಡುವುದು ಅನುಮಾನವಾಗಿದೆ, ಆದರೆ ಇನ್ನೂ ಯಾವುದೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ ಯಾಕೆಂದರೆ ಇದರ ಬಗ್ಗೆ ಸ್ಪಷ್ಟತೆ ನೀಡಬೇಕಿದ್ದ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ಯನ್ನು ಹೊರಹಾಕಿಲ್ಲ. ಆದರೆ ಮೈದಾನದಲ್ಲಿ ನಡೆದ ಘಟನೆಯನ್ನು ನೋಡಿದರೆ ಕೊಹ್ಲಿ ರವರು ಕೆಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ವಿಶ್ವಕಪ್ ನಲ್ಲಿ ಬಲಿಷ್ಠ ಎದುರಾಳಿಯಾಗಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ಶನಿವಾರ ಭಾರತ ತಂಡ ಅಭ್ಯಾಸ ನಡೆಸಿದ ವೇಳೆಯಲ್ಲಿ ಹೆಬ್ಬೆರಳಿಗೆ ಗಾಯವಾಗಿದ್ದು, ಬ್ಯಾಟಿಂಗ್ ಮಾಡುವಾಗ ಆಯಿತೋ ಅಥವಾ ಫೀಲ್ಡಿಂಗ್ ಅಭ್ಯಾಸದ ವೇಳೆ ಆಯಿತೋ ಎಂಬುದು ಇಲ್ಲಿಯವರೆಗೂ ಬಿಸಿಸಿಐ ಸ್ಪಷ್ಟಪಡಿಸಿಲ್ಲ. ತಕ್ಷಣವೇ ನೆರವಿಗೆ ಧಾವಿಸಿದ ಭಾರತದ ಫಿಜಿಯೋ ಮ್ಯಾಜಿಕ್ ಸ್ಪ್ರೇ ಹಾಕಿದ್ದಲ್ಲದೆ ಹೆಬ್ಬರಳಿಗೆ ಟೇಪ್ ಸುತ್ತಿದರು. ಇಷ್ಟೇ ಅಲ್ಲದೆ ಅಭ್ಯಾಸ ಮುಗಿದ ಬಳಿಕವೂ ಸಹ ವಿರಾಟ್ ಕೊಹ್ಲಿ ರವರು ಕಪ್  ಒಂದರಲ್ಲಿ ಐಸ್ ನೀರು ತುಂಬಿಸಿಕೊಂಡು ಅದರೊಳಗೆ ಹೆಬ್ಬೆರಳು ಇಟ್ಟಿಕೊಂಡು ಡ್ರೆಸ್ಸಿಂಗ್ ರೂಮ್ ನಡೆದುಹೋಗುತ್ತಿದ್ದರು. ಇದನ್ನು ಗಮನಿಸಿದಾಗ ಕೊಹ್ಲಿ ರವರಿಗೆ ಗಂಭೀರವಾದ ಗಾಯಗಳು ಆಗಿರುವುದು ಸ್ಪಷ್ಟವಾಗುತ್ತದೆ, ಆದರೆ ಈ =ಇದರ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕಿದ್ದ ಬಿಸಿಸಿಐ ಸಂಸ್ಥೆಯು ಯಾವುದೇ ಹೇಳಿಕೆಯನ್ನು ನೀಡದೆ ಅಭಿಮಾನಿಗಳ ಆತಂಕವನ್ನು ಹೆಚ್ಚಿಸುತ್ತಿದೆ.

Post Author: Ravi Yadav