ಕಿಂಗ್ ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ ಎಂದ ಎ ಬಿ ಡಿವಿಲಿಯರ್ಸ್- ಯಾಕೆ ಗೊತ್ತಾ??

ಚಾಲೆಂಜರ್ಸ್ ತಂಡದ ನಾಯಕ ಕಿಂಗ್ ಕೊಹ್ಲಿ ಹಾಗೂ ತಂಡದ ಸ್ಟಾರ್ ಬ್ಯಾಟ್ಸ್ ಮ್ಯಾನ್ ಆಗಿರುವ ಎ ಬಿ ಡಿವಿಲಿಯರ್ಸ್ ರವರ ಸ್ನೇಹ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕುಚಿಕು ಗೆಳೆಯರಾಗಿರುವ ಈ ಜೋಡಿ ಮೈದಾನದಲ್ಲಿ ತಮ್ಮ ಆಟದ ಮೂಲಕ ಅಭಿಮಾನಿಗಳನ್ನು ಮನರಂಜಿಸುವದಷ್ಟೇ ಅಲ್ಲದೇ ಮೈದಾನದ ಹೊರಗೆ ಒಬ್ಬರ ಬಗ್ಗೆ ಒಬ್ಬರು ತಮ್ಮ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಾ ಜನರಿಗೆ ಕೆಲವೊಂದಷ್ಟು ಕುತೂಹಲದ ಸಂಗತಿ ಗಳನ್ನು ಹೇಳುತ್ತಾರೆ. ಇದೀಗ ತಂಡದ ನಾಯಕ ವಿರಾಟ್ ಕೊಹ್ಲಿ ರವರ ಬಗ್ಗೆ ಎ ಬಿ ಡಿವಿಲಿಯರ್ಸ್ ಅವರು ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ರವರ ಎದುರು ಏನನ್ನಾದರೂ ಹೇಳಲು ನನಗೆ ಭಯ ಆಗುತ್ತದೆ ಎಂದು ಎಬಿ ಡಿವಿಲಿಯರ್ಸ್ ಅವರು ಹೇಳಿಕೆ ನೀಡಿದ್ದಾರೆ. ಆದರೆ ಈ ಭಯ ಯಾಕೆ ಎಂದು ಪ್ರಶ್ನೆ ಮಾಡಿದಾಗ ಒಂದು ವೇಳೆ ಯಾರಾದರೂ ವಿರಾಟ್ ಕೊಹ್ಲಿ ಅವರ ಬಳಿ ತೆರಳಿ ನಿನ್ನ ಗಡಿಯಾರ ಚೆನ್ನಾಗಿದೆ ಎಂದರೆ ಸಾಕು ಮರುದಿನವೇ ಅದೇ ರೀತಿಯ ವಾಚನ್ನು ಗಿಫ್ಟ್ ನೀಡುತ್ತಾರೆ, ಒಂದು ವೇಳೆ ನನ್ನ ಫೋನ್ ಬ್ಯಾಟರಿ ಇಲ್ಲದೆ ಸ್ವಿಚ್ ಆಫ್ ಆಗಿದೆ ಎಂದ ತಕ್ಷಣವೇ ಪವರ್ ಬ್ಯಾಂಕ್ ಅನ್ನು ಉಡುಗೊರೆಯನ್ನಾಗಿ ನೀಡುತ್ತಾರೆ. ಮೊನ್ನೆ ಹೀಗೆ ಕೊಹ್ಲಿ ನಿಮ್ಮ ಡ್ರೆಸ್ ಚೆನ್ನಾಗಿದೆ ಎಂದು ಹೇಳಿಕೆ ನೀಡಿದೆ ತದನಂತರ ಅದೇ ಬ್ರಾಂಡಿನ ಅದೇ ಕಲರ್ ಡ್ರೆಸ್ ಅನ್ನು ತೋರಿಸಿ ಉಡುಗೊರೆಯಾಗಿ ನೀಡಿದ್ದಾರೆ. ಆದಕಾರಣ ಅವರ ಮುಂದೆ ನಾನು ಮಾತನಾಡಲು ತುಂಬಾ ಭಯವಾಗುತ್ತದೆ ಯಾವ ಹೇಳಿಕೆಯಿಂದ ಅವರು ಯಾವ ರೀತಿಯ ಉಡುಗೊರೆ ನೀಡುತ್ತಾರೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ವಿರಾಟ್ ಕೊಹ್ಲಿ ರವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Post Author: Ravi Yadav