ರಂಜಾನ್- ಉಪವಾಸವಿದ್ದು ಭಯೋತ್ಪಾದಕರ ಹೆಡೆಮುರಿಕಟ್ಟಿದ ವೀರ ಯೋಧನ ಕಥೆ

ರಂಜಾನ್ ಮಾಸದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಸಲ್ಮಾನ ಬಾಂಧವರು ಉಪವಾಸವಿರುತ್ತಾರೆ. ಮುಂಜಾನೆ ಉಪಹಾರ ಸೇವಿಸಿದ ನಂತರ ರಾತ್ರಿಯವರೆಗೂ ಒಂದು ಹನಿ ನೀರನ್ನು ಸಹ ಮುಟ್ಟುವುದಿಲ್ಲ. ಈ ಆಚರಣೆಯನ್ನು ಭಾರತೀಯ ಸೇನೆಯಲ್ಲಿರುವ ಹಲವಾರು ಮುಸಲ್ಮಾನ ಬಾಂಧವರು ಆಚರಿಸುತ್ತಾರೆ. ಅದೇ ರೀತಿ ಕಮಾಂಡರ್ ಇಕ್ಬಾಲ್ ಎಂಬವರು, ಬೆಳಗಿನ ಜಾವ ಸಹ್ರಿಗಾಗಿ ( ಮುಂಜಾನೆ ಉಪಹಾರ ಪ್ರಾರಂಭಿಸುವಾಗ ಸೇವಿಸುವ ಆಹಾರ) ಬೆಳಗ್ಗೆ ಬೇಗ ಎದ್ದಿದ್ದ ಸಮಯದಲ್ಲಿ ತನ್ನ ವೈರ್ ಲೆಸ್ ಷನಲ್ಲಿ ವಿಚಿತ್ರ ಶಬ್ದ ಕೇಳಿದ ತಕ್ಷಣ ಅಲರ್ಟ್ ಆಗುತ್ತಾರೆ. ಕೂಡಲೇ ತನ್ನ ತಂಡಕ್ಕೂ ಮಾಹಿತಿ ರವಾನಿಸಿ ಅಲರ್ಟ್ ಆಗುವಂತೆ ಆದೇಶ ನೀಡುತ್ತಾರೆ.

ಉತ್ತರ ಕಾಶ್ಮೀರದ ಬಂಡಿಪೋರಾ ಪ್ರದೇಶದಲ್ಲಿ ಸಿಆರ್ಪಿಎಫ್ ಶಿಬಿರದ ಮೇಲೆ ಆತ್ಮಾಹುತಿ ದಾಳಿ ನಡೆಸಲು ಉಗ್ರವಾದಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯು ಈ ಮೊದಲೇ ಮಾಹಿತಿ ನೀಡಿತ್ತು‌ ಆದ ಕಾರಣ ತಕ್ಷಣವೇ ರೈಫಲ್ ಅನ್ನು ತೆಗೆದುಕೊಂಡು ಹತ್ತಿರದ ಕ್ಯಾಂಪ್ ಗೆ ತೆರಳಿದ ಇಕ್ಬಾಲ್ ಅಹಮದ್ ರವರು, ಬೀದಿ ನಾಯಿಗಳ ಬೊಗಳುವಿಕೆ ಇಂದ ಉಗ್ರರು ಎಲ್ಲಿದ್ದಾರೆ ಎಂದು ಕಂಡು ಹಿಡಿದು 4 ಉಗ್ರರನ್ನು ಕ್ಷಣಮಾತ್ರದಲ್ಲಿ ಮುಗಿಸಿಬಿಡುತ್ತಾರೆ. ಬೀದಿ ನಾಯಿಗಳ ಬೊಗಳುವಿಕೆ ಯನ್ನು ಬೇಧಿಸಿ ಉಗ್ರರ ಬಾರಿ ಯೋಜನೆಯನ್ನು ವಿಫಲಗೊಳಿಸುತ್ತಾರೆ. ತಮ್ಮ ಬಗ್ಗೆ ಕಿಂಚಿತ್ತು ಯೋಚನೆ ಮಾಡದ ಇಕ್ಬಾಲ್ ರವರು ತಮ್ಮ ತಂಡವನ್ನು ಕಳುಹಿಸಿ ತಾವು ಆಹಾರವನ್ನು ಸೇವಿಸಬಹುದಿತ್ತು ಆದರೆ ತನ್ನ ಮುಂಜಾನೆಯ ಊಟವನ್ನು ತ್ಯಜಿಸಿ ಉಪವಾಸವನ್ನು ಪ್ರಾರಂಭಿಸಿ ಇಡೀ ದಿನ ಉಪವಾಸವಿದ್ದು ದೇಶ ರಕ್ಷಣೆ ಮಾಡಿದ ಇಕ್ಬಾಲ್ ರವರಿಗೆ ನಮ್ಮದೊಂದು ಸಲಾಂ.

Post Author: Ravi Yadav