ತಂದೆ-ತಮ್ಮನ ಸಾವಿನ ಮರುದಿನ ಪರೀಕ್ಷೆ ಬರೆದು ಈಕೇ ಸಾಧಿಸಿದ್ದು ಏನು ಗೊತ್ತಾ??

ಮರುದಿನ ಟಿಯಾ ಸಿಂಗ್ ಎಂಬ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಿತ್ತು. ತನ್ನ ಪುಟ್ಟ ಸಹೋದರ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಪರೀಕ್ಷೆಯ ತಯಾರಿಯಲ್ಲಿ ಟಿಯಾಸಿಂಗ್ ಇರುವಾಗ ಸಹೋದರನ ಫಲಿತಾಂಶ ಹೊರಬಿದ್ದಿತ್ತು. ತನ್ನ ಸಹೋದರ ತರಗತಿಯಲ್ಲಿ ಎರಡನೇ ಸ್ಥಾನವನ್ನು ಪಡೆದು ಪಾಸ್ ಆಗಿದ್ದ. ಇದನ್ನು ಕಂಡ ಪೋಷಕರು ಅದೇ ಖುಷಿಯಲ್ಲಿ ಅಂದು ರಾತ್ರಿ ಡಾಬಾದಲ್ಲಿ ಊಟ ಮಾಡಲು ಕುಟುಂಬ ಸಮೇತರಾಗಿ ಮೋಟಾರ್ ಬೈಕ್ ನಲ್ಲಿ ತೆರಳಿದ್ದರು. ಪರೀಕ್ಷೆ ಇದ್ದರೂ ಸಹ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಟಿಯಾ ಸಿಂಗ್ ರವರು ಸಹ ಡಾಬಾಗೆ ಊಟಕ್ಕೆ ತೆರಳಿದ್ದರು.

ಆದರೆ ವಿಧಿಯಾಟ ಯಾರಿಗೂ ತಿಳಿದಿರಲಿಲ್ಲ, ಊಟ ಮುಗಿಸಿ ಕೊಂಡು ವಾಪಸ್ಸು ಬರುವ ಸಮಯದಲ್ಲಿ ಸರಿಸುಮಾರು ರಾತ್ರಿ ಒಂಬತ್ತು ಮೂವತ್ತಕ್ಕೆ ಶಾಸ್ತ್ರಿ ನಗರದ ಸಮೀಪ ವೇಗವಾಗಿ ನಿಯಂತ್ರಣ ತಪ್ಪಿ ಬಂದ ಟ್ರಕ್ ಡಿಕ್ಕಿ  ಹೊಡೆದಿತ್ತು. ಬಹಳ ರಭಸದಿಂದ ಟ್ರಕ್ ಗುದ್ದಿದ ಕಾರಣ ಬೈಕ್ ಓಡಿಸುತ್ತಿದ್ದ ತಂದೆಯು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನು ತಾಯಿ ಹಾಗೂ ಟಿಯಾ ಸಿಂಗ್ ರವರು ಚಿಕ್ಕ ಪುಟ್ಟ ಗಾಯಗಳಿಂದ ಬಚಾವಾಗಿದ್ದರು, ಆದರೆ ಸಹೋದರನ ಸ್ಥಿತಿ ಗಂಭೀರವಾಗಿತ್ತು.

ಕೂಡಲೇ ಪುಟ್ಟ ಸಹೋದರನನ್ನು ಆಸ್ಪತ್ರೆಗೆ ಕೊಂಡೊಯ್ದರು, ಆದರೆ ಆಸ್ಪತ್ರೆಗೆ ತೆರಳಿದ ಕೆಲವೇ ಕೆಲವು ಗಂಟೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಹೋದರನು ಸಹ ಮೃತಪಟ್ಟಿದ್ದಾನೆ. ಇದರಿಂದ ಟಿಯಾಸಿಂಗ್ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಮರುದಿನ ಟಿಯಾ ಅವರ ಮೊದಲ ಪರೀಕ್ಷೆ ಆರಂಭವಾಗಿತ್ತು, ಕಣ್ಣ ಮುಂದೆಯೇ ಅಪ್ಪ ಮತ್ತು ತಮ್ಮನನ್ನು ಕಳೆದುಕೊಂಡ ಟಿಯಾ ಅವರು ದುಃಖದಲ್ಲಿ ಮುಳುಗಿದ್ದರು.ಆದರೂ ಸಹ ಪರೀಕ್ಷೆ ಬರೆಯಲು ಸಿದ್ದರಾಗಿ ಶಾಲೆಗೆ ತೆರಳುತ್ತಾರೆ. ಪರೀಕ್ಷೆ ಬರೆದು ವಾಪಸ್ಸು ಬಂದ ಬಳಿಕ ತಂದೆ ಹಾಗೂ ತಮ್ಮನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಾರೆ.

ರಾತ್ರಿ ಇಡೀ ಕಣ್ಣೀರು ಇಟ್ಟು, ಬೆಳಿಗ್ಗೆ ಎದ್ದು ಪರೀಕ್ಷೆ ಬರೆದು ಸಂಜೆ ತಂದೆ ಹಾಗೂ ತಮ್ಮನ ಅಂತಿಮ ಸಂಸ್ಕಾರದಲ್ಲಿ  ಪಾಲ್ಗೊಂಡ ನಂತರ ಅದೇ ದುಃಖದಲ್ಲಿ ಎಲ್ಲಾ ಪರೀಕ್ಷೆಗಳನ್ನು ಟಿಯಾ ಸಿಂಗ್ ಅವರು ಎದುರಿಸುತ್ತಾರೆ. ತನ್ನ ತಂದೆಯ ಕನಸನ್ನು ನನಸಾಗಿಸಲು ಟಿಯಾ ಸಿಂಗ್ ರವರು ತಾನು ಡಾಕ್ಟರ್ ಆಗಬೇಕು ಎಂದು ಪರೀಕ್ಷೆ ಬರೆದು ಶೇಕಡ 92.4 ರಷ್ಟು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ತನ್ನ ತಂದೆ ಮಗಳು ಡಾಕ್ಟರ್ ಆಗಬೇಕು ಎಂದು ಇಷ್ಟಪಟ್ಟಿದ್ದರು, ಅದಕ್ಕಾಗಿಯೇ ನಾನು ಡಾಕ್ಟರ್ ಆಗುತ್ತೇನೆ. ನನ್ನ ಸಹೋದರ ಜೊತೆ ಮಾಡುತ್ತಿದ್ದ ಜಗಳವೇ ನೆನಪಾಗುತ್ತಿದೆ. ಅವನು ನನ್ನನ್ನು ಬಹಳ ಪ್ರೀತಿಸುತ್ತಿದ್ದನು. ನನ್ನ ಫಲಿತಾಂಶವನ್ನು ನೋಡಿ ತಂದೆ ಖುಷಿ ಪಡುತ್ತಿದ್ದರು. ಆದರೆ ಅಪಘಾತದಿಂದ ಅವರನ್ನು ನಾನು ಕಳೆದುಕೊಂಡೆ. ತಂದೆಯ ಕನಸನ್ನು ನನಸು ಮಾಡುವುದೇ ನನ್ನ ಗುರಿ ಎಂದು ಟಿಯಾ ಸಿಂಗ್ ರವರು ಹೇಳಿದ್ದಾರೆ.

Post Author: Ravi Yadav