ದೇವೇಗೌಡರ ಭದ್ರ ಕೋಟೆ ಮತ್ತಷ್ಟು ಕೇಸರಿ ಮಯಾ, ಕೊನೆಗೂ ದಿಟ್ಟ ನಿರ್ಧಾರ ತೆಗೆದುಕೊಂಡ ಮಂಜು

ದೇವೇಗೌಡರ ಭದ್ರ ಕೋಟೆ ಮತ್ತಷ್ಟು ಕೇಸರಿ ಮಯಾ, ಕೊನೆಗೂ ದಿಟ್ಟ ನಿರ್ಧಾರ ತೆಗೆದುಕೊಂಡ ಮಂಜು

ಹಲವಾರು ದಿನಗಳಿಂದ ಬಾರಿ ಗೊಂದಲಗಳಿಂದ ಕೂಡಿದ ಹಾಸನ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಇಂದು ಅಧಿಕೃತವಾಗಿ ಫಿಕ್ಸ್ ಆಗಿದೆ. ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಖಚಿತ ವಾಗುತ್ತಿದ್ದಂತೆ ಬಂಡಾಯವೆದ್ದಿದ್ದ ಎ ಮಂಜುರವರು ಬಿಜೆಪಿ ಪಕ್ಷಕ್ಕೆ ಸೇರುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದರು. ಆದರೆ ಕಾಂಗ್ರೆಸ್ ಪಕ್ಷದ ಕೊನೆಯ ನಿರ್ಧಾರಕ್ಕಾಗಿ ಕಾಯುತ್ತಿದ್ದ ಮಂಜುರವರು ಯಾವುದೇ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಇಂದು ಕೊನೆಗೂ ಎ ಮಂಜುರವರು ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಮೂಲಕ ಹಾಸನ ಜಿಲ್ಲೆಯಿಂದ ಪ್ರಜ್ವಲ್ ರೇವಣ್ಣ ರವರ ಎದುರಾಳಿಯಾಗಿ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಎ ಮಂಜುರವರು ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನು ರಾಜ್ಯದ ಹಿರಿಯ ಬಿಜೆಪಿ ನಾಯಕರು ಅಮಿತ್ ಶಾ ರವರ ಭೇಟಿಗಾಗಿ ದೆಹಲಿಯಲ್ಲಿ ಠಿಕಾಣಿ ಹೂಡಿರುವ ಕಾರಣ ಇಂದು ದೇವೇಗೌಡರ ಭದ್ರಕೋಟೆಯನ್ನು ಛಿದ್ರ ಛಿದ್ರ ಮಾಡಿದ ಯುವ ನಾಯಕ ಪ್ರೀತಂಗೌಡ ರವರ ಉಪಸ್ಥಿತಿಯಲ್ಲಿ ಎ ಮಂಜುರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಹಾಸನ ಲೋಕಸಭಾ ಕ್ಷೇತ್ರ ಭೂ ಮತ್ತಷ್ಟು ರಂಗೇರಿದ್ದು ಮೊದಲ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಕಠಿಣ ಎದುರಾಳಿಯನ್ನು ಎದುರಿಸಬೇಕಾದ ಸಂದರ್ಭ ಎದುರಾಗಿದೆ. ಒಂದು ವೇಳೆ ಎ ಮಂಜುರವರು ಪ್ರಜ್ವಲ್ ರೇವಣ್ಣ ಅವರಿಗೆ ಸೋಲನ್ನು ತೋರಿಸಿದಲ್ಲಿ ದೇವೇಗೌಡರ ಭದ್ರಕೋಟೆ ಕೇಸರಿಮಯ ವಾಗಲಿದೆ.