ಹೈ ಅಲರ್ಟ್ ಘೋಷಿಸಿದ ಭಾರತೀಯ ಸೇನೆ: ಭಾರತದ ಗಡಿಯಲ್ಲಿ ಶತೃಗಳ ಹಾರಾಟ

ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಸೇನೆಯನ್ನು ಯಾವ ಕಾರಣಕ್ಕೂ ಸಹ ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದು ಭಾರತೀಯ ಕೇಂದ್ರ ಸರ್ಕಾರವು ಈಗಾಗಲೇ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿರುವುದು ನಮಗೆಲ್ಲರಿಗೂ ತಿಳಿದಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಪಾಕಿಸ್ತಾನ ದೇಶವು ಸಹ ಪಾಕಿಸ್ತಾನದ ಗಡಿಯಲ್ಲಿ ಹಲವಾರು ಸಂಖ್ಯೆಯಲ್ಲಿ ಸೇನಾ ಜಮಾವಣೆ ಮಾಡಿತ್ತು. ಇದರಿಂದ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ಉಂಟಾಗಿತ್ತು.

ಇನ್ನು ಎಂದಿನಂತೆ ಪಾಕಿಸ್ತಾನವು ಈಗಲೂ ಸಹ ತನ್ನ ಅಪ್ರಚೋದಿತ ದಾಳಿಯನ್ನು ಮುಂದುವರೆಸುತ್ತಿದೆ ಆದರೆ ಮೊದಲಿನ ಹಾಗೆ ಭಾರತೀಯ ಸೇನೆಯು ಕೈಕಟ್ಟಿ ಕುಳಿತಿಲ್ಲ ಬದಲಾಗಿ ಕೇಂದ್ರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿರುವುದರಿಂದ ಪಾಕಿಸ್ತಾನ ಸೇನೆಗೆ ತಕ್ಕ ಉತ್ತರವನ್ನು ನೀಡುತ್ತಾ ಪಾಕಿಸ್ತಾನ ಸೇನೆಯ ಹಲವಾರು ಚೆಕ್ ಪೋಸ್ಟ್ ಗಳನ್ನು ಈಗಾಗಲೇ ಧ್ವಂಸ ಮಾಡಿದ್ದಾರೆ, ಇಷ್ಟೇ ಅಲ್ಲದೆ ನಾಗರಿಕರ ಮೇಲೆ ದಾಳಿ ತಪ್ಪಿಸಲು ಬಂಕರ್ ಗಳನ್ನು ಜಮಾಯಿಸಿ ಮತ್ತಷ್ಟು ಸೇನೆ ಹೆಚ್ಚಳ ಮಾಡಿ ಭಾರತ ಎಂತಹ ದಾಳಿಯನ್ನು ಎದುರಿಸಲು ಸಿದ್ಧವಾಗಿ ನಿಂತಿದೆ.

ಇನ್ನು ಭಾರತದ ಜೊತೆ ಯುದ್ಧ ಮಾಡಿದರೆ ತಾನು ಸೋಲುತ್ತೇನೆ ಎಂಬ ಅರಿವಿದ್ದರೂ ಸಹ ಪಾಕಿಸ್ತಾನವು ತನ್ನ ಕುತಂತ್ರ ಪುಂಡ ನೀತಿಯನ್ನು ಬಿಡಲು ಸಿದ್ಧವಿಲ್ಲ ಇಷ್ಟು ದಿನ ಅಪ್ರಚೋದಿತ ದಾಳಿ ಮಾಡಿ ಸುಖಾ ಸುಮ್ಮನೆ ಕಾಲು ಕೆರೆ ಯುತ್ತಿದ್ದ ಪಾಕಿಸ್ತಾನವು ಈಗ ಒಂದು ಹೆಜ್ಜೆ ಮುಂದೆ ಹೋಗಿದೆ, ಹೌದು ಭಾರತ ಗಡಿ ರೇಖೆಯ ಪೂಂಛ್ ಸೆಕ್ಟರ್ ನಲ್ಲಿ ಪಾಕಿಸ್ತಾನದ ವಾಯುಪಡೆಯ ಯುದ್ಧ ವಿಮಾನಗಳು ಸುತ್ತು ಹಾಕುತ್ತೀವೆ. ಯಾವ ಘನ ಕಾರ್ಯಕ್ಕಾಗಿ ಪಾಕಿಸ್ತಾನವು ಈ ರೀತಿಯ ಕೆಲಸವನ್ನು ಮಾಡುತ್ತಿದೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.

ಇತ್ತ ಭಾರತೀಯ ಸೇನೆ ಪುಲ್ವಾಮಾ ದಾಳಿಯ ಪ್ರತೀಕಾರದ ನಂತರ ಸುಮ್ಮನೆ ಇದ್ದರೂ ಸಹ ಪಾಕಿಸ್ತಾನವು ಕಾಲ್ ಕೆರೆಯುತ್ತಿರುವ ಕಾರಣ ಬೇರೆ ವಿಧಿಯಿಲ್ಲದೆ ಭಾರತ ಸೇನೆಯು ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದೆ, ಈಗಾಗಲೇ ಭಾರತದ ಜಲಾಂತರ್ಗಾಮಿ ಗಳು ಸಮುದ್ರದಲ್ಲಿ ಕಾದು ಕುಳಿತಿವೆ. ಇನ್ನು ಭಾರತೀಯ ವಾಯುಪಡೆಯು ಸಹ ಮೊದಲಿನಿಂದಲೂ ಎಂತಹ ದಾಳಿಯನ್ನು ಎದುರಿಸಲು ಸಿದ್ಧ ವಾಗಿದೆ, ಇದೀಗ ಅಲರ್ಟ್ ಘೋಷಿಸಿರುವ ಕಾರಣ ಗಡಿ ಮತ್ತಷ್ಟು ಉದ್ವಿಗ್ನವಾಗಿದ್ದು, ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು ಸಿದ್ಧವಾಗಿ ನಿಂತಿದೆ. ಒಂದು ವೇಳೆ ಪಾಕಿಸ್ತಾನ ದೇಶವು ದಾಳಿ ಮಾಡಿದರೆ, ಮುಂದಿನ ವರ್ಷ ಪಠ್ಯಪುಸ್ತಕಗಳಲ್ಲಿ ಪಾಕಿಸ್ತಾನದ ಅಂತ್ಯಕ್ಕೆ ಕಾರಣವೇನೆಂದು ಪುಟ್ಟ ಮಕ್ಕಳು ಉತ್ತರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಯಾಕೆಂದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧ ನಡೆದರೆ ಪಾಕಿಸ್ತಾನದ ಅಂತ್ಯ ಖಚಿತ.

Post Author: Ravi Yadav