ಬಿಗ್ ಬ್ರೇಕಿಂಗ್: ಭಾರತದ ಮೇಲೆ ಬಾಂಬ್ ದಾಳಿ ನಡೆಸಿದ ಪಾಕ್ ವಾಯುಪಡೆ, ಮುಂದೇನು ಆಯಿತು ಗೊತ್ತಾ? (ಮೂಲ PTI ನ್ಯೂಸ್)

ಪುಲ್ವಾಮ ದಾಳಿಗೆ ಭಾರತ ದೇಶವು ಪ್ರತಿಕಾರ ತೀರಿಸಿಕೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ವಿಶ್ವ ಮಟ್ಟದಲ್ಲಿ ಭಾರಿ ಮುಜುಗರ ಉಂಟಾಗಿದೆ. ನಿನ್ನೆಯಷ್ಟೇ ಇಮ್ರಾನ್ ಖಾನ್ ರವರು ಪಾಕಿಸ್ತಾನದ ಜನತೆಗೆ ಎಲ್ಲದಕ್ಕೂ ತಯಾರಾಗಿರುವ ಘೋಷಣೆ ಮಾಡಿ ಯುದ್ಧದ ಮುನ್ಸೂಚನೆ ನೀಡಿದ್ದರು. ಆದರೆ ಭಾರತದ ಮೇಲೆ ಯುದ್ಧ ಮಾಡುವ ದುಸ್ಸಾಹಸ ಪಾಕಿಸ್ತಾನ ಮಾಡುವುದಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಮನೆ ಮಾಡಿತ್ತು‌.

ಆದರೆ ಇಷ್ಟೆಲ್ಲಾ ವಿದ್ಯಮಾನಗಳು ನಡೆದರೂ ಕುತಂತ್ರಿ ದೇಶ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಮತ್ತೊಮ್ಮೆ ಪಾಕಿಸ್ತಾನ ವಾಯು ಪಡೆ  ಭಾರತದ ವಿರುದ್ಧ ಗರ್ಜನೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸಾಗಿ ಮತ್ತೊಮ್ಮೆ ತಮ್ಮ ಪೌರುಷ ಕೇವಲ ಹೇಳಿಕೆಗಳಲ್ಲಿ ಮಾತ್ರ ಎಂಬುದನ್ನು ಸಾಬೀತು ಪಡಿಸಿದೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಇಮ್ರಾನ್ ಖಾನ್ ರೋಡ್ ಹೇಳಿಕೆ ನಂತರ ಪಾಕಿಸ್ತಾನವು ಪ್ರತಿ ದಾಳಿ ನಡೆಸುವ ಎಲ್ಲ ಯೋಜನೆಗಳು ಇವೆ ಎಂದು ಭಾರತಕ್ಕೆ ಅರ್ಥವಾಗಿತ್ತು. ಕಿತ ಕಿತ ಹಾಗೆ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಗಡಿ  ರೇಖೆಯನ್ನು ನೌಶೇರಾ ದಲ್ಲಿ ದಾಟಲು ಪ್ರಯತ್ನಪಟ್ಟಿದ್ದಾರೆ. ಬರುವ ದಾರಿಯಲ್ಲಿ ಸಿಡಿಮದ್ದುಗಳನ್ನು ಸ್ಪೋಟಿಸಿ ಸುಮ್ಮನೆ ಉದ್ಧಟತನ ಮೆರೆದಿದ್ದಾರೆ.

ಆದರೆ ತಕ್ಷಣ ಎಚ್ಚೆತ್ತುಕೊಂಡ ಭಾರತೀಯ ವಾಯು ಪಡೆ ಯು ತಕ್ಕ ಪ್ರತ್ಯುತ್ತರ ವನ್ನು ನೀಡಲು ಆಕಾಶಕ್ಕೆ ಹಾರಿದಾಗ ಭಾರತೀಯ ವಾಯುಪಡೆಯ ಗುಂಪನ್ನು ಕಂಡು ಪಾಕಿಸ್ತಾನದ ವಾಯುಪಡೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಕುತಂತ್ರಿ ದೇಶಕ್ಕೆ ಇನ್ನು ಯಾವರೀತಿ ಬುದ್ಧಿ ಕಲಿಸಬೇಕು ಎಂಬ ಯೋಚನೆ ಭಾರತದ ತಲೆಯಲ್ಲಿ ಓಡುತ್ತಿದೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

ಮೂಲ PTI ನ್ಯೂಸ್,

Post Author: Ravi Yadav