ಬಿಗ್ ಬ್ರೇಕಿಂಗ್: ಅಭಿನಂದನ್ ಅಣ್ಣ ಸೇಫ್, ಭಾರತೀಯರಿಗೆ ಹೊಸ ಸಂದೇಶ ರವಾನಿಸಿದ ಅಭಿನಂದನ್

ಭಾರತದ ಗಡಿ ದಾಟಲು ಪ್ರಯತ್ನಿಸಿದ ಪಾಕ್ ಯುದ್ಧ ವಿಮಾನಗಳನ್ನು ಅಟ್ಟಿಸಿಕೊಂಡು ಹೋದ ಮಿಗ್-21 ಯುದ್ಧ ವಿಮಾನದ ಪೈಲೆಟ್ ಅಭಿನಂದನ್ ರವರು ಪಾಕಿಸ್ತಾನದ ಸೇನೆ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೆಲವು ಗ್ರಾಮಸ್ಥರು ಅಭಿನಂದನ ರವರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋಗಳು ಸಹ ರಿಲೀಸ್ ಆಗಿದೆ.ಈ ಹಲ್ಲೆಗೆ ಬಾರಿ ವಿರೋಧ ಸಹ ವ್ಯಕ್ತವಾಗಿತ್ತು

ಆದರೆ ಇಡೀ ಭಾರತೀಯರ ಕೋರಿಕೆಗೆ ದೇವರು ಫಲ ನೀಡಿದಂತೆ ಕಾಣುತ್ತಿದೆ. ಇಡೀ ದೇಶವೇ ಇಂದು ಅಭಿನಂದನ್ ಅಣ್ಣನವರ  ಕ್ಷೇಮದವಾಪಸಾತಿ ಗಾಗಿ ಕಾಯುತ್ತಿದೆ . ಇಷ್ಟೆಲ್ಲಾ ವಿಡಿಯೋಗಳು ರಿಲೀಸ್ ಆದ ನಂತರ ಕೊನೆಗೂ ಭಾರತೀಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ವತಃ ಪಾಕಿಸ್ತಾನ ಸೇನೆಯು ವಿಡಿಯೋ ರೆಕಾರ್ಡ್ ಮಾಡಿದ್ದು ಅಭಿನಂದನ್ ರವರೆ ಮಾತನಾಡಿದ್ದಾರೆ

ಪಾಕಿಸ್ತಾನ ಸೇನೆಯು ಅಭಿನಂದನ್ ರವರನ್ನು ಬಂಧನಕ್ಕೆ ತೆಗೆದುಕೊಂಡಿರುವುದು ಸತ್ಯ, ವಿಮಾನ ಪತನಕೊಳ್ಳಗಾದ ನಂತರ ಪಾಕಿಸ್ತಾನದ ಸೇನೆ ಕೈಯಲ್ಲಿ ಅಭಿನಂದನ್ ಅಣ್ಣಾರವರು ಬಂಧನಕ್ಕೆ ಒಳಗಾಗಿದ್ದರು.ಕೆಲವು ಗ್ರಾಮಸ್ಥರು ಹಲ್ಲೆ ಸಹ ನಡೆಸಿದ್ದರು, ತದನಂತರ ಅಭಿನಂದನ್ ರವರನ್ನು ಪಾಕಿಸ್ತಾನ ಸೇನೆಯು ತನ್ನ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದೆ.

ಭಾರತೀಯ ಸೇನೆಯ ಜೊತೆ ಶಾಂತಿ ಮಾತುಕತೆಯನ್ನು ಆಡಿದ ಇಮ್ರಾನ್ ಖಾನ್ ರವರು, ಭಾರತದ ಅಭಿನಂದನ್ ರವರನ್ನು ಕ್ಷೇಮವಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಅಭಿನಂದನ್ ರವರು ವಿಡಿಯೋ ಮೂಲಕ ಹೊರಹಾಕಿದ್ದಾರೆ. ಪಾಕಿಸ್ತಾನ ಸೇನೆಯು ವಿಚಾರಣೆ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿದ್ದು, ಅಭಿನಂದನ್ ರವರು ತಾನು ಕ್ಷೇಮವಾಗಿದ್ದೇನೆ ಎಂಬ ಮಾಹಿತಿಯನ್ನು ಇಡೀ ಭಾರತೀಯರಿಗೆ ಕಳುಹಿಸಿದ್ದಾರೆ ಹಾಗೂ ಪಾಕಿಸ್ತಾನದಲ್ಲಿ ಇದ್ದೇನೆ ಎಂಬುದನ್ನು ಮರೆತು ಸತ್ಯದ ಮಾತುಗಳನ್ನು ನೇರವಾಗಿ ಉತ್ತರ ನೀಡುತ್ತಿದ್ದಾರೆ.

Post Author: Ravi Yadav