ಮೋದಿ ನಿರ್ಧಾರಕ್ಕೆ ಐತಿಹಾಸಿಕ ಜಯ: ಸೇನೆಗೆ ಫುಲ್ ಪವರ್, ಉಗ್ರರಿಗೆ ಶಾಕ್

ಮೋದಿ ನಿರ್ಧಾರಕ್ಕೆ ಐತಿಹಾಸಿಕ ಜಯ: ಸೇನೆಗೆ ಫುಲ್ ಪವರ್, ಉಗ್ರರಿಗೆ ಶಾಕ್

ಹಲವಾರು ವರ್ಷಗಳಿಂದ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಹಿಂಸಾಚಾರವನ್ನು ನೋಡಲಾರದೆ ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂಬುದನ್ನು ಜನತೆಗೆ ಸಾರಿದಂತೆ ನರೇಂದ್ರ ಮೋದಿ ಅವರು ತಮ್ಮ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಸೇನ ಆಡಳಿತ ಜಾರಿಗೆ ತಂದಿದ್ದರು.  ಕೆಲವು ದಿನಗಳ ಸೇನೆಯ ಆಡಳಿತ ನಂತರ ರಾಷ್ಟ್ರಪತಿ ಆಡಳಿತ ಕೂಡ ಜಾರಿಯಾಗಿತ್ತು. ನರೇಂದ್ರ ಮೋದಿಯವರು ಸರ್ಕಾರ ಉರುಳಿಸಿದ ಕಾರಣ ವಿರೋಧ ಪಕ್ಷಗಳಿಂದ ಭಾರಿ ಟೀಕೆಗೆ ಗುರಿಯಾಗಿದ್ದರು ಆದರೆ ನರೇಂದ್ರ ಮೋದಿ ಅವರು ಅಧಿಕಾರದ ಆಸೆ ಕೈಬಿಟ್ಟು ದೇಶದ ಹಿತಕ್ಕಾಗಿ ಭಾರತದ ಸೈನಿಕರ ಪರವಾಗಿ ನಿಂತಿದ್ದರು

ಸೇನೆಯ ಕೈಗೆ ಆಡಳಿತ ಸಿಕ್ಕ ಮೇಲೆ ಹಲವಾರು ತಿಂಗಳುಗಳ ಕಾಲ ಯಾವುದೇ ಸರ್ಕಾರಿ ಅಧಿಕಾರಿಗಳ ಹಂಗಿನಲ್ಲಿ ಆಡಳಿತವನ್ನು ನಡೆಸದೇ, ಉಗ್ರರ ದಮನಕ್ಕೆ ಸೇನೆಯು ಮುಂದಾಗಿತ್ತು. ಇನ್ನು ಕೇಂದ್ರ ಸರ್ಕಾರವು ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿದ ಕಾರಣ ಇಂದು ಅದೆಷ್ಟೊ ಕಡೆ ಕಾಶ್ಮೀರದಲ್ಲಿ ಶಾಂತಿ ನೆಲೆಯೂರಿದೆ ಹಾಗೂ ಇದೇ ಮೊಟ್ಟಮೊದಲ ಬಾರಿಗೆ ದೇಶದ ಇತಿಹಾಸದಲ್ಲಿ ಕಾಶ್ಮೀರದ ಒಂದು ಸಂಪೂರ್ಣ ಜಿಲ್ಲೆಯನ್ನು ಉಗ್ರ ಮುಕ್ತ ಎಂದು ಘೋಷಿಸಲಾಗಿದೆ. ಇದರಿಂದಾಗಿ ಕಾಶ್ಮೀರದಲ್ಲಿ ಶಾಂತಿ ಚಲಿಸುವ ದಿನಗಳು ದೂರವಿಲ್ಲ ಎಂಬುದು ಜನರಿಗೆ ಅರಿವಾಗುತ್ತಿದೆ.

ಈ ಎಲ್ಲಾ ವಿದ್ಯಮಾನಗಳಿಗೂ ನರೇಂದ್ರ ಮೋದಿಯವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಕಾರಣ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ನರೇಂದ್ರ ಮೋದಿ ರವರ ವಿರೋಧಿಗಳು ಸುಪ್ರೀಂ ಕೋರ್ಟ್ ನಲ್ಲಿ ಕೇಸನ್ನು ದಾಖಲಿಸಿ ಭಾರತೀಯ ಸೇನೆಯನ್ನು ಕಟ್ಟಿ ಹಾಕಲು ಪ್ರಯತ್ನ ಪಡುತ್ತಿದ್ದರು. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದ್ದು ಸೇನೆಗೆ ಮತ್ತೊಂದು ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ಜಯ ಎಂದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಅಷ್ಟಕ್ಕೂ ವಿಷಯದ ಮೂಲವೇನು??

ಜಮ್ಮು ಹಾಗೂ ಕಾಶ್ಮೀರದಲ್ಲಿ ಉಗ್ರರ ಉಪಟಳ ವನ್ನು ತಡೆಯಲು ಭಾರತೀಯ ಸೇನೆಯು ಸದಾ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಿದೆ. ಆದರೆ ಕೆಲವು ಉಗ್ರ ಸಂಘಟನೆಗಳು ಯುವಕರನ್ನು ತಪ್ಪು ದಾರಿಗೆ ಎಳೆದು ತಂದು ಹಣದ ಆಮಿಷ ನೀಡಿ ಸೇನೆಯ ಮೇಲೆ ಕಲ್ಲು ತೂರಲು ಹಾಗೂ ಉಗ್ರರ ವಿರುದ್ಧ ಹೋರಾಟ ಮಾಡಲು ಬಂದಾಗ ತಡೆಯಲು ಪ್ರಯತ್ನ ಮಾಡುತ್ತಿರುತ್ತಾರೆ. ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಇಂತಹ ಸಮಯದಲ್ಲಿ ಉಗ್ರರಿಗೆ ಬೆಂಬಲ ನೀಡುವವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳದೆ ಬೇರೆ ದಾರಿಯಿರುವುದಿಲ್ಲ. ಉಗ್ರರ ಬೆಂಬಲಿಗರು ಕಲ್ಲು ತೂರುವಾಗ ಅಡಗಿ ಕುಳಿತು ಕೊಳ್ಳಲು ಸಾಧ್ಯವೇ?? ಅವರಿಗೆ ತಕ್ಕ ಉತ್ತರ ನೀಡಲು ಸೇನೆಯು ಸಮಯಕ್ಕಾಗಿ ಎದುರು ನೋಡುವ ಪರಿಸ್ಥಿತಿ ಎದುರಾಗಿತ್ತು.

ಇದನ್ನು ಕಂಡು ನರೇಂದ್ರ ಮೋದಿ ಸರ್ಕಾರವು ಯಾವುದೇ ಸಮಯದಲ್ಲಿಯೂ ಸಹ ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಹಾಗೂ ಈ ರೀತಿಯ ವಿದ್ಯಮಾನಗಳು ನಡೆದಲ್ಲಿ ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡುತ್ತಿದ್ದೇವೆ, ಈ ಮೂಲಕ ಉಗ್ರರ ದಮನ ಮಾಡಲು ಆದೇಶ ನೀಡಿದ್ದರು, ಉಗುರನ್ನು ಬೆಂಬಲಿಸುವುದು ಸಹ  ಬಹು ದೊಡ್ಡ ಅಪರಾಧ ಆದ ಕಾರಣದಿಂದ ನಿರ್ಧಾಕ್ಷಣ್ಯ ವಿಲ್ಲದೆ ಕಲ್ಲು ತೂರಾಟಗಾರರ ಮೇಲೆ ಪ್ರಹಾರ ಮಾಡಿ ಎಂದು ಆದೇಶ ನೀಡಿದ್ದರು. ಇದನ್ನು ಕಂಡು ಕೆಲವು ವಿರೋಧಿಗಳಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ ಆದ ಕಾರಣ ಸುಪ್ರೀಂ ಕೋರ್ಟ್ ನಲ್ಲಿ ಕೇಸನ್ನು ದಾಖಲಿಸಿದ್ದರು.

ಯಾವುದಾದರೂ ಸೈನಿಕರು ಕಲ್ಲು ತೂರಾಟಗಾರರ ಮೇಲೆ ಗುಂಡು ಚಲಾಯಿಸಿದ್ದಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ವಿರೋಧ ನಾಯಕರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ ಸುಪ್ರೀಂಕೋರ್ಟ್ ವಿರೋಧ ನಾಯಕರಿಗೆ ಭಾರಿ ಮುಖಭಂಗ ವಾಗುವಂತೆ, ಸೈನಿಕರು ಯಾವುದೇ ಸಮಯದಲ್ಲಿಯೂ ಸಹ ಕಲ್ಲುತೂರಾಟ ಗಾರರ ಮೇಲೆ ಗುಂಡಿನ ದಾಳಿ ನಡೆಸಬಹುದು ಹಾಗೂ ಈ ರೀತಿಯ ವಿದ್ಯಮಾನಗಳಿಗೆ ಯಾವುದೇ ಎಫ್ ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ತೀರ್ಪನ್ನೂ ನೀಡಿದೆ.

ಹಾಗೂ ಈ ಮೂಲಕ ಸೈನಿಕರಿಗೆ ಮತ್ತೊಂದು ಬೃಹತ್ ಜಯ ದೊರಕಿದ್ದು, ಇನ್ನು ಮುಂದೆ ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರಿಗೆ ಸೇನೆಯು ತಕ್ಕ ಉತ್ತರವನ್ನು ನೀಡಲಿದ್ದಾರೆ. ಕೇವಲ ನರೇಂದ್ರ ಮೋದಿ ಅವರನ್ನು ಎದುರಿಸಲು ಕಲ್ಲು ತೂರಾಟಗಾರರ ಗೆ ಬೆಂಬಲ ನೀಡುತ್ತಿರುವ ಕೆಲವು ವಿರೋಧ ನಾಯಕರಿಗೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ ನೀವು ನರೇಂದ್ರ ಮೋದಿ ರವರ ವಿರೋಧಿ ಆದರೆ ದೇಶವನ್ನು ಯಾಕೆ ವಿರೋಧ ಮಾಡುತ್ತೀರಾ ಎಂದು ಕೇಳಲು ಬಯಸುತ್ತೇವೆ.