ಮೊಗಲರ ದೌಲತ್ತು ಪ್ರದರ್ಶಿಸಿದ ಜಮೀರ್! ಅನಂತ್ ಕುಮಾರ್ ಹೆಗ್ಡೆರವರನ್ನು ದೂಷಿಸಿದ್ದ ಮಾಧ್ಯಮಗಳೇ ಎಲ್ಲಿದಿರಾ??

ಕೆಲವೇ ಕೆಲವು ದಿನಗಳ ಹಿಂದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಬಿಜೆಪಿ ಪಕ್ಷವು ಹಿಂದುಗಳ ಮತ ಕೇಳುತ್ತಿದೆ ಎಂದು ಬೊಬ್ಬೆ ಹೊಡೆದಿದ್ದರು. ಆದರೆ ಯಾವ ಬಿಜೆಪಿ ನಾಯಕರು ಹಿಂದುಗಳು ಬಿಜೆಪಿ ಪಕ್ಷಕ್ಕೆ ಮಾತ್ರ ಮತ ನೀಡಬೇಕು ಎಂದು ಹೇಳಿರಲಿಲ್ಲ. ಆದರೂ ಹಿಂದುತ್ವವನ್ನು ಮುಂದಿಟ್ಟುಕೊಂಡು ಬಿಜೆಪಿ ಪಕ್ಷವು ಮತ ಕೇಳುತ್ತಿದೆ ಎಂದು ಆರೋಪಿಸಿದ್ದರು.

ಇನ್ನು ಮಾಧ್ಯಮಗಳ ಬಗ್ಗೆ ಮಾತನಾಡುವುದಾದರೆ ಅನಂತ್ ಕುಮಾರ್ ಹೆಗಡೆ ಅವರು ಎಷ್ಟು ಬಾರಿ ಸತ್ಯವಾದ ಮಾತು ಗಳನ್ನು ಹಾಡಿದರೆ ವಿವಾದಾತ್ಮಕ ಹೇಳಿಕೆ ಎಂದು ಎರಡು ಮೂರು ದಿನ ಚರ್ಚೆಗಳ ಮೇಲೆ ಚರ್ಚೆಗಳನ್ನು ನಡೆಸಿ ತಮ್ಮ ಚಾನಲ್ ಗಳ ಟಿಆರ್ ಪಿ ಗಾಗಿ ವಿವಾದಾತ್ಮಕ ಹೇಳಿಕೆ ಎಂದು ಬಿಂಬಿಸುತ್ತಾರೆ.

ಈಗ ಕರ್ನಾಟಕದ ಸಚಿವರಾಗಿರುವ ಜಮೀರ್ ಅಹಮದ್ ರವರು ಮೊಘಲರ ದೌಲತ್ತು ಪ್ರದರ್ಶಿಸಲು ಮುಂದಾಗಿದ್ದಾರೆ. ಹಲವಾರು ವರ್ಷಗಳ ಹಿಂದೆ ಮೊಗಲರು ಪ್ರತಿಯೊಬ್ಬರು ಮುಸ್ಲಿಮರೆ ಆಗಿರಬೇಕು ಎಂಬ ತತ್ವದಿಂದ ಭಾರತದ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು ಈಗ ಸ್ವತಃ ಜಮೀರ್ ಅಹಮದ್ ರವರು ಅದೇ ರೀತಿಯ ದೌಲತ್ತು ಪ್ರದರ್ಶಿಸಿ ಧರ್ಮವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕಿದವರು ಮುಸ್ಲಿಮರು ಅಲ್ಲವೇ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಬೆಂಬಲಿಸಿದರೆ ಕಾಂಗ್ರೆಸ್ ಪಕ್ಷವು 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾಜ್ಯದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ 85 ಲಕ್ಷ ವಿದೆ ಆದ ಕಾರಣದಿಂದ ಪ್ರತಿಯೊಬ್ಬ ಮುಸ್ಲಿಮರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕರೆ ನೀಡಿದ್ದಾರೆ.

ಆದರೆ ಇವರ ಹೇಳಿಕೆಗಳನ್ನು ಯಾವ ಮಾಧ್ಯಮಗಳು ಸಹ ವಿವಾದಾತ್ಮಕ ಹೇಳಿಕೆ ಎಂದು ಪ್ರಚಾರ ಮಾಡುತ್ತಿಲ್ಲ ಬದಲಾಗಿ ಬಿಜೆಪಿಗೆ ಮತ ಹಾಕುವವರು ಮುಸ್ಲಿಮರು ಅಲ್ಲವೇ ಅಲ್ಲ ಎಂದು ಜಮೀರ್ ಅಹಮದ್ ರವರು ಮುಸ್ಲಿಮರ ಮತ ಬೇಟೆಯಾಡಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಅನಂತ್ ಕುಮಾರ್ ಹೆಗಡೆ ಅವರು ಮಾತನಾಡಿದರೆ ವಿವಾದ, ಇವರು ಮಾತನಾಡಿದರೆ ಕೇವಲ ಒಂದು ಹೇಳಿಕೆ ಇದು ಯಾವ ನ್ಯಾಯ?? ಮಾಧ್ಯಮಗಳು ನಿಮ್ಮ ಕೆಲಸ ಸತ್ಯವನ್ನು ಪಸರಿಸುವುದು, ಟಿ ಆರ್ ಪಿ ಗೋಸ್ಕರ ಬಕೆಟ್ ಹಿಡಿದು ಬದುಕುವ ಮಾಧ್ಯಮಗಳು ಇದ್ದರೆಷ್ಟು ಹೋದರೆಷ್ಟು.

Post Author: Ravi Yadav