ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ! ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್

ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ! ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವು ಕೆಲವೇ ಕೆಲವು ಮತಗಳ ಅಂತರದಿಂದ ಸೋಲನ್ನು ಕಂಡು ಹದಿನೈದು ವರ್ಷಗಳ ಸುದೀರ್ಘ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಿತ್ತು. ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ನಗುನಗುತ್ತಲೇ ಮುಖ್ಯಮಂತ್ರಿ ಕುರ್ಚಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರು.

ಮೊದಲಿನಿಂದಲೂ ಮಧ್ಯಪ್ರದೇಶದ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ,ಇದರ ನಡುವೆ  ಶಿಸ್ತಿನ ಪಕ್ಷ ಎನಿಸಿಕೊಂಡಿದ್ದ ಬಿಜೆಪಿ ಪಕ್ಷಕ್ಕೆ ಸಾಮಾನ್ಯ ಜನರು ಕಾಂಗ್ರೆಸ್ ಪಕ್ಷದ ಸಾಲ ಮನ್ನಾ ಎಂಬ ಅಸ್ತ್ರಕ್ಕೆ ಮನಸೋತು ಅಧಿಕಾರದ ಗದ್ದುಗೆ ನೀಡಿದ್ದರು. ಇಷ್ಟೆಲ್ಲಾ ನಡೆದ ಮೇಲೆ ಕಾಂಗ್ರೆಸ್ ಪಕ್ಷವು ಅಧಿಕಾರದ ಗದ್ದುಗೆಗೆ ಕೆಲವೇ ಕೆಲವು ದಿನಗಳಲ್ಲಿ ತನ್ನ ಹಗರಣಗಳನ್ನು ಪ್ರಾರಂಭಿಸಿತ್ತು.

ಮೊದಲು ಯೂರಿಯಾ ಬೆಲೆ ದುಪ್ಪಟ್ಟು ಹೆಚ್ಚು ಮಾಡಿ ರೈತರಿಗೆ ಮೊದಲ ಶಾಕ್ ನೀಡಿದ್ದ ಕಾಂಗ್ರೆಸ್ ಪಕ್ಷವು ತದನಂತರ ಅಸ್ತಿತ್ವವೇ ಇಲ್ಲದ ರೈತರ ಹೆಸರಲ್ಲಿ ನೂರಿಪ್ಪತ್ತು ಕೋಟಿ ಸಾಲ ಮನ್ನಾ ಮಾಡಿ ಸುದ್ದಿಯಾಗಿತ್ತು. ಈ ಎಲ್ಲಾ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ಜ್ಯೋತಿರಾಧಿತ್ಯ ಸಿಂಧಿಯಾ ರವರು ಮುಖ್ಯಮಂತ್ರಿ ಕನಸನ್ನು ಕಾಣುತ್ತಿದ್ದರು, ಆದರೆ ಗಾಂಧಿ ಕುಟುಂಬಕ್ಕೆ ಹತ್ತಿರವಾದ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷವು ಆಯ್ಕೆ ಮಾಡಿತ್ತು.  ಮೊದಲಿನಿಂದಲೂ  ಅಧಿಕಾರಕ್ಕಾಗಿ ಕಾದು ಕುಳಿತಿದ್ದ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನದ ಕಟ್ಟೆ ಒಡೆದಿತ್ತು.

ಹಲವಾರು ವರ್ಷಗಳಿಂದ ತಮಗೆ ಅಧಿಕಾರ ಸಿಗದ ಕಾರಣ ಪ್ರತಿಯೊಬ್ಬ ನಾಯಕರು ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದರು. ಆದರೆ ಹೀಗೆ ಎಲ್ಲಾ ವಿದ್ಯಮಾನಗಳನ್ನು ಬದಿಗೊತ್ತಿ, ಕೇವಲ ಗಾಂಧಿ ಕುಟುಂಬಕ್ಕೆ ಹತ್ತಿರವಾದ ನಾಯಕನನ್ನು ಕಾಂಗ್ರೆಸ್ ಪಕ್ಷವು ಆಯ್ಕೆ ಮಾಡಿತ್ತು. ಮೊದಲಿನಿಂದಲೂ ತಮ್ಮ ಪಕ್ಷದಲ್ಲಿ  ಮೊದಲಿನಿಂದಲೂ ತಮ್ಮ ಪಕ್ಷದಲ್ಲಿ ಯಾರಿಗೂ ಗೌರವ ನೀಡದೆ ತಮ್ಮ ಪಕ್ಷದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಹಲವಾರು ಆರೋಪಗಳು ಮಧ್ಯಪ್ರದೇಶದ ಮುಖ್ಯಮಂತ್ರಿಗಳ ಮೇಲೆ ಕೇಳಿಬಂದಿದ್ದವು. ಆದರೆ ಇದ್ಯಾವುದಕ್ಕೂ ರಾಹುಲ್ ಗಾಂಧಿ ಅವರು ಸೊಪ್ಪು ಹಾಕಲಿಲ್ಲ.

ಇದರಿಂದ ಸಾಮಾನ್ಯವಾಗಿಯೇ ಸಿಂಧ್ಯಾರವರು 10 ತಗೊಂಡ್ ಇದ್ದರು ತದನಂತರ ಇದ್ದಕ್ಕಿದ್ದ ಹಾಗೆ ಶಿವರಾಜ್ ಸಿಂಗ್ ಚೌಹಾನ್ ರವರ ಮನೆಗೆ ಭೇಟಿ ನೀಡಿ 40 ನಿಮಿಷಗಳ ಕಾಲ, ಯಾರೊಬ್ಬರನ್ನು ಬಿಟ್ಟುಕೊಳ್ಳದೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಭಾರಿ ವರ್ಚಸ್ಸನ್ನು ಹೊಂದಿರುವ ಸಿಂಧ್ಯಾರವರು ಇದ್ದಕ್ಕಿದ್ದ ಹಾಗೆ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಭೇಟಿಯಾಗಿರುವುದು ಎಲ್ಲರಲ್ಲೂ ಇನ್ನಿಲ್ಲದ ಕುತೂಹಲ ಕೆರಳಿಸಿದೆ.

ಅಷ್ಟೇ ಅಲ್ಲದೆ ನಗುಮುಖದ ಶಿವರಾಜ್ ಸಿಂಗ್ ಚೌಹಾನ್ ರವರು ಕಾರಿನ ಬಳಿ ವರೆಗೂ ಬಂದು ಬಿಳ್ಕೊಡುವ ಸಮಯದಲ್ಲಿ ನಡೆದ ಮಾತುಕತೆ ಹಾಗೂ ಕಣ್ಸನ್ನೆ ಗಳನ್ನು ಗಮನಿಸಿದ ಮಾಧ್ಯಮಗಳು ಖಚಿತವಾಗಿಯೂ ಇದು ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ನೀಡುವ ಯೋಜನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲದರ ನಡುವೆ ಕಾಂಗ್ರೆಸ್ ಪಕ್ಷದ ಅಧಿಕಾರದಿಂದ ಬೇಸತ್ತಿರುವ ಮಧ್ಯಪ್ರದೇಶ ಜನ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಲೆಯನ್ನು ಸೃಷ್ಟಿಸಿದ್ದಾರೆ.ಭಾರಿ ಜನ ಬೆಂಬಲ ವನ್ನು ಹೊಂದಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೊಮ್ಮೆ ಮುಖ್ಯಮಂತ್ರಿಗಳು ಆದರೆ ಇಡೀ ಮಧ್ಯಪ್ರದೇಶದ ಜನತೆಯು  ಮತ್ತೊಮ್ಮೆ ಬಿಜೆಪಿಯನ್ನು ಕೆಳಗಿಳಿಸುವ ದೈರ್ಯ ಮಾಡುವುದಿಲ್ಲ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಚಿಕ್ಕ ಮನೆಯಲ್ಲಿ ಸಂಸಾರ ನಡೆಸುತ್ತಿರುವ ಶಿವರಾಜ್ ಸಿಂಗ್ ರವರ ಪಾರದರ್ಶಕ ಆಸ್ತಿಯನ್ನು ಕಂಡ ಜನ ಇವರನ್ನು ಯಾಕೆ ಕಳೆದುಕೊಂಡೆವು ಎಂಬ ಚಿಂತೆಯಲ್ಲಿ ತೊಡಗಿರುವುದಂತೂ ಸತ್ಯ.