ನಮೋ ಹವಾ: ಮೋದಿ ಕಾರ್ಯಕ್ಕೆ ದಿಗ್ಗಜ ಬಿಲ್ ಗೇಟ್ಸ್ ಹ್ಯಾಟ್ಸ್ ಆಫ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ನಾಲ್ಕು ವರ್ಷಗಳ ಹಿಂದೆ ಸರ್ಕಾರಿ ಯೋಜನೆಗಳನ್ನು ಪಡೆಯಬೇಕೆಂದರೆ ಜನರೂ ಪರದಾಡ ಬೇಕಿತ್ತು. ತಮಗಾಗಿಯೇ ನೀಡಿದ್ದ ಯೋಜನೆಗಳನ್ನು ಜನಸಾಮಾನ್ಯರು ಪಡೆಯಲು ಹರಸಾಹಸ ಪಡಬೇಕಿತ್ತು. ಭ್ರಷ್ಟಾಚಾರವೆಂಬ ಭೂತ ಭಾರತದ ಹೆಗಲೇರಿತ್ತು.

ಆದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಈ ಎಲ್ಲಾ ಆಪಾದನೆಗಳು ದೂರವಾಗಿವೆ. ಅಭಿವೃದ್ಧಿ ಒಂದೇ ತನ್ನ ಮಂತ್ರ ಎಂದು ಮುನ್ನುಗ್ಗುತ್ತಿರುವ ನರೇಂದ್ರ ಮೋದಿ ರವರಿಗೆ ಈಗಾಗಲೇ ವಿಶ್ವದ ಎಲ್ಲಾ ಕಡೆಯಿಂದ ಹಲವಾರು ಪ್ರಶಂಸೆಗಳು ವ್ಯಕ್ತವಾಗಿವೆ. ಇತ್ತೀಚೆಗಷ್ಟೇ ವಿಶ್ವದ ಶ್ರೇಷ್ಠ ನಾಯಕ ಪಟ್ಟಕ್ಕೇರಿದ ನರೇಂದ್ರ ಮೋದಿ ರವರಿಗೆ ಈಗ ಮತ್ತೊಂದು ಗರಿ ಲಭಿಸಿದೆ.

ನರೇಂದ್ರ ಮೋದಿ ಅವರು ಬಡವರಿಗಾಗಿ ತಮ್ಮ ಕನಸಿನ ಯೋಜನೆಯಾದ ಆಯುಷ್ಮಾನ್ ಭಾರತ ಎಂಬ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಜಾರಿಗೆ ತಂದ ಕೆಲವೇ ದಿನಗಳಲ್ಲಿ ಹಲವಾರು ಜನ ಇದರ ಲಾಭ ಪಡೆದುಕೊಂಡಿದ್ದಾರೆ. ಯಾವುದೇ ಅರ್ಜಿ ತುಂಬದೆಯೇ ಕೇವಲ ಆಧಾರ್ ನಂಬರ್ ಅನ್ನು ಟ್ರ್ಯಾಕ್ ಮಾಡಿಕೊಂಡು ಜನರಿಗೆ ಆಯುಷ್ಮಾನ್ ಯೋಜನೆ ಯ ಸಂಪೂರ್ಣ ದಾಖಲೆಗಳನ್ನು ಮೋದಿ ಅವರು ಕಳಿಸಿಕೊಡುತ್ತಿದ್ದಾರೆ.

ಇದನ್ನೆಲ್ಲ ಕಂಡ ವಿಶ್ವದ ಐಟಿ ದಿಗ್ಗಜ ನಾಯಕರಾಗಿರುವ ಬಿಲ್ ಗೇಟ್ಸ್ ಅವರು ನರೇಂದ್ರ ಮೋದಿ ಅವರಿಗೆ ಹ್ಯಾಟ್ಸಾಫ್ ಹೇಳಿದ್ದಾರೆ. ಕೇವಲ 100 ದಿನಗಳಲ್ಲಿ ಲಕ್ಷಾಂತರ ಜನರಿಗೆ ತಲುಪಿರುವ ಈ ಯೋಜನೆಯನ್ನು ನೋಡಲು ಬಹಳ ಖುಷಿಯಾಗುತ್ತಿದೆ ಎನ್ನುವ ಮಾತುಗಳ ಮೂಲಕ ನರೇಂದ್ರ ಮೋದಿ ರವರ ಕಾರ್ಯಯೋಜನೆಯನ್ನು ಹೊಗಳಿದ್ದಾರೆ.

ಕೇವಲ 100 ದಿನಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನ ನರೇಂದ್ರ ಮೋದಿ ರವರ ಆಯುಷ್ಮಾನ್ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ರೈತರ ಮನೆ ಬಾಗಿಲಿಗೆ ಆಯುಷ್ಮಾನ್ ಯೋಜನೆಯ ಕಾರ್ಡುಗಳು ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬರ ಮನೆಗೂ ಕಾರ್ಡುಗಳು ತಲುಪಲಿವೆ. ಒಟ್ಟಿನಲ್ಲಿ ಎಲ್ಲರಿಗೂ ಆಸ್ಪತ್ರೆಯ ವೆಚ್ಚವನ್ನು ಯೋಜನೆಯ ಮೂಲಕ ಸರ್ಕಾರವೇ ಭರಿಸುತ್ತಿದೆ. ಇಂತಹ ಯೋಜನೆ ಜಾರಿಗೊಳಿಸಿದಕ್ಕಾಗಿ ನರೇಂದ್ರ ಮೋದಿ ಅವರಿಗೆ ನಮ್ಮ ಧನ್ಯವಾದಗಳು.

Post Author: Ravi Yadav