ಮತ್ತೊಮ್ಮೆ ಪವಾಡ ಸೃಷ್ಟಿಸಿದ ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳು

ಬರೋಬ್ಬರಿ 90 ವರ್ಷಗಳಿಂದ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿದ್ದಗಂಗಾ ಶ್ರೀಗಳು ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಹೊಂದಿರುವ ಇವರು ಈಗ ಮತ್ತೊಂದು ಪವಾಡವನ್ನು ಸೃಷ್ಟಿಸಿದ್ದಾರೆ. ಈ ಪವಾಡ ವೈದ್ಯಲೋಕಕ್ಕೆ ಅಚ್ಚರಿಯನ್ನು ಉಂಟು ಮಾಡಿದೆ.

ಅಷ್ಟೇ ಅಲ್ಲದೆ ಶಿವಕುಮಾರ ಸ್ವಾಮೀಜಿ ಅವರ ಅಭಿಮಾನಿಗಳಿಗೆ ಧೈರ್ಯ ತುಂಬಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಲವಾರು ದಿನಗಳಿಂದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರವರ ಆರೋಗ್ಯ ಹದಗೆಟ್ಟಿತ್ತು.  ಶ್ವಾಸ ಕೋಶ ಸೋಂಕು ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಶ್ರೀಗಳು ಚೆನ್ನೈನಲ್ಲಿ ಚಿಕಿತ್ಸೆ ಪಡೆದುಕೊಂಡು  ವಾಪಸು ಬರುವಾಗ ವೈದ್ಯರು ಇದೊಂದು ಪವಾಡ ಎಂದು ಹೇಳಿದ್ದು ಇನ್ನು ನಮಗೆ ನೆನಪಿದೆ.

ಈತನ್ಮಧ್ಯೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ರವರು ಮತ್ತೊಂದು ಪವಾಡವನ್ನು ಸೃಷ್ಟಿಸಿ ವೈದ್ಯಲೋಕ ಅಚ್ಚರಿ ಪಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಆ ಪವಾಡವೇನೂ ಗೊತ್ತಾ?

ಶ್ರೀಗಳ ಆರೋಗ್ಯ ಸರಿಯಿಲ್ಲ ಎಂದು ಭಕ್ತರು ಆತಂಕದಲ್ಲಿ ಇರುವಾಗ ಇದ್ದಕ್ಕಿದ್ದ ಹಾಗೆ ಶ್ರೀಗಳು ತಾವು  ಶ್ವಾಸ ಕೋಶ ಸೋಂಕು ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರೂ ಪವಾಡಸದೃಶ ರೀತಿಯಲ್ಲಿ 45 ನಿಮಿಷಗಳ ಕಾಲ ಸ್ವತಂತ್ರವಾಗಿ ಉಸಿರಾಡಿದ್ದಾರೆ. ಯಾವುದೇ ವೈದ್ಯಕೀಯ ಉಪಕರಣಗಳನ್ನು ಬಳಸದೆ 45 ನಿಮಿಷ ಉಸಿರಾಡಿದ ಶ್ರೀಗಳನ್ನು ನೋಡಿ ಒಂದು ಕ್ಷಣ ವೈದ್ಯರು ದಂಗಾಗಿದ್ದಾರೆ.

ಹಲವಾರು ದಿನಗಳಿಂದ ಸೋಂಕಿನಿಂದ ಬಳಲುತ್ತಿದ್ದ ಕಾರಣ ಸಿದ್ದಗಂಗಾ ಶ್ರೀಗಳಿಗೆ  ಕೃತಕ ಉಪಕರಣಗಳ ಮೂಲಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿತ್ತು.  ಆದರೆ ಇಂದು ಇದ್ದಕ್ಕಿದ್ದ ಹಾಗೆ ಕೃತಕ ಉಪಕರಣ ವಿಲ್ಲದೆ ಉಸಿರಾಡಿ, ಭಕ್ತರಲ್ಲಿ   ಧೈರ್ಯ ತುಂಬಿ  ವೈದ್ಯ ಲೋಕಕ್ಕೆ ಅಚ್ಚರಿಯನ್ನು ಮೂಡಿಸಿದ್ದಾರೆ.

Post Author: Ravi Yadav