ಬಾಲಿವುಡ್ ನ ಕಾಫಿ ವಿತ್ ಕರಣ್ ಕಾರ್ಯಕ್ರಮದ ಆರನೇ ಆವೃತ್ತಿಯಲ್ಲಿ ಭಾರತೀಯ ಸ್ಟಾರ್ ಆಟಗಾರರಾದ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಒಂದು ಪ್ರಶ್ನೆಗೆ ಉತ್ತರಿಸುವಾಗ ವಿರಾಟ್ ಕೊಹ್ಲಿ ರವರ ಪರವಾಗಿ ಮಾತನಾಡಿದ್ದಕ್ಕಾಗಿ ಸಚಿನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?
ಬಾಲಿವುಡ್ ನ ಖ್ಯಾತ ನಿರ್ಮಾಪಕರಾಗಿರುವ ಹಾಗೂ ನಿರ್ದೇಶಕರಾಗಿರುವ ಕರಣ್ ಜೋಹರ್ ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ರಾಹುಲ್ ಹಾಗೂ ಪಾಂಡ್ಯ ಅತಿಥಿಗಳಾಗಿ ಆಗಮಿಸಿದ್ದರು, ಇದೇ ವೇಳೆ ಭಾರತೀಯ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಎಂಬ ಪ್ರಶ್ನೆಯನ್ನು ಕರಣ್ ರವರು ಇವರಿಗೆ ಕೇಳಿದ್ದಾರೆ.
ಸ್ವಲ್ಪವೂ ಯೋಚಿಸದೆ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ರವರು ವಿರಾಟ್ ಕೊಹ್ಲಿ ರವರ ಹೆಸರನ್ನು ಸೂಚಿಸಿದ್ದಾರೆ ಇದು ಕ್ರಿಕೆಟ್ ದೇವರು ಎಂದು ಹೆಸರಾಗಿರುವ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ನೆಟ್ಟಿಗರು ರಾಹುಲ್ ಹಾಗೂ ಆರ್ಥಿಕ ಪಾಂಡ್ಯ ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಆಟದ ಬಗ್ಗೆ ಏನೂ ಗೊತ್ತಿಲ್ಲದ ಇವರು ಸಚಿನ್ ರವರ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಚಿನ್ ಓರ್ವ ಶ್ರೇಷ್ಠ ಆಟಗಾರ ಎಂದು ವಿಶ್ವದ ಕ್ರಿಕೆಟ್ ದಂತಕತೆಗಳಾದ ವಿವಿಯನ್ ರಿಚರ್ಡ್ಸ್, ಡಾನ್ ಬ್ರಾಡ್ಮನ್, ಸುನಿಲ್ ಗವಾಸ್ಕರ್, ಬ್ರೆಟ್ ಲಿ, ವಾಸಿಂ ಅಕ್ರಮ್ ಹಾಗೂ ಗಂಗೂಲಿ ಮುಂತಾದ ಆಟಗಾರರು ಒಪ್ಪಿಕೊಂಡಿದ್ದಾರೆ ಇನ್ನು ನೀವೇನ್ ಒಪ್ಪಿಕೊಳ್ಳುವುದು ಎಂದಿದ್ದಾರೆ.
ಪ್ರತಿಯೊಬ್ಬ ನೈಜ ಕ್ರಿಕೆಟ್ ಆಟಗಾರನಿಗೆ ಗೊತ್ತು ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್ಮನ್ ಎಂದು ಟ್ವಿಟರ್ ಬಳಕೆದಾರನೊಬ್ಬ ಅಸಮಾಧಾನ ಹೊರಹಾಕಿದ್ದರೆ, ಮತ್ತೊಬ್ಬ ಕೇವಲ ಟೀಂನಲ್ಲಿ ಉಳಿಯುವುದಕ್ಕೆ ಈ ರೀತಿಯ ಚೀಪ್ ಗಿಮಿಕ್ಗಳನ್ನು ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಸಾಕಷ್ಟು ಜನರು ಉಭಯ ಆಟಗಾರರ ಉತ್ತರವನ್ನು ಖಂಡಿಸಿದ್ದಾರೆ