ಪ್ರಧಾನಿ ಮೋದಿಯವರನ್ನ ತುಳಿಯಲು ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಇಳಿದು ತನ್ನ ಸಂಸ್ಕೃತಿಯನ್ನ ತೋರಿಸುತ್ತೆ ಅನ್ನೋದನ್ನ ನೀವು ನೋಡಿದರೆ ಖಂಡಿತ ಕಾಂಗ್ರೆಸ್ಸಿಗೆ ಮತ ಹಾಕಲ್ಲ.

ಪ್ರಧಾನಿ ಮೋದಿಯವರನ್ನ ತುಳಿಯಲು ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಇಳಿದು ತನ್ನ ಸಂಸ್ಕೃತಿಯನ್ನ ತೋರಿಸುತ್ತೆ ಅನ್ನೋದನ್ನ ನೀವು ನೋಡಿದರೆ ಖಂಡಿತ ಕಾಂಗ್ರೆಸ್ಸಿಗೆ ಮತ ಹಾಕಲ್ಲ.

0

ಪ್ರಧಾನಿ ಮೋದಿಯವರನ್ನ ತುಳಿಯಲು ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಇಳಿದು ತನ್ನ ಸಂಸ್ಕೃತಿಯನ್ನ ತೋರಿಸುತ್ತೆ ಅನ್ನೋದನ್ನ ನೀವು ನೋಡಿದರೆ ಖಂಡಿತ ಕಾಂಗ್ರೆಸ್ಸಿಗೆ ಮತ ಹಾಕಲ್ಲ.

ಅದು 2002, ಆಗತಾನೆ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ನರೇಂದ್ರ ಮೋದಿಯವರಿಗೆ ತಮ್ಮ ರಾಜ್ಯದಲ್ಲಿ ಈ ರೀತಿಯ ಅವಘಡಗಳು ಸಂಭವಿಸುತ್ತೆ ಅಂತ ಕನಸು ಮನಸಿನಲ್ಲೂ ಭಾವಿಸಿರಲಿಲ್ಲ ಅನಿಸುತ್ತೆ.

ಆಯೋಧ್ಯೆಯ ರಾಮಮಂದಿರಕ್ಕೆ ಗುಜರಾತಿನಿಂದ ತೆರಳಿದ್ದ ಕರಸೇವಕರು, ರಾಮಭಕ್ತರು ಗುಜರಾತಿಗೆ ವಾಪಸ್ಸಾಗುತ್ತಿದ್ದಾಗ ಆ ಟ್ರೈನನ್ನು ಗೋಧ್ರಾ ಸ್ಟೇಷನ್ನಿನಲ್ಲಿ ತಡೆದು ನಿಲ್ಲಿಸಿ ಟ್ರೈನಿಗೇ ಜಿಹಾದಿಗಳು ಬೆಂಕಿಯಿಟ್ಟಿದ್ದರು.

ಕಾರಣ ಒಂದೇ ಆ ರೈಲಿನಲ್ಲಿ ಪ್ರಯಾಣಿಸುತ್ತಿದ್ದದ್ದು ರಾಮಭಕ್ತರು ಅನ್ನೋದಾಗಿತ್ತು. ಈ ದುರ್ಘಟನೆಯಲ್ಲಿ ಬರೋಬ್ಬರಿ 56 ರಾಮಭಕ್ತರು ಜೀವಂತ ಸುಟ್ಟು ಕರಕಲಾದರು, ಹಿಂದೂ ಸಮಾಜ ಶಾಂತಿಪ್ರೀಯ ಸಮಾಜ ಆದರೆ ತನ್ನ ತಂಟೆಗೆ ಬಂದರೆ ಮಾತ್ರ ಹಿಂದೂ ಉಗ್ರ ನರಸಿಂಹನಾಗಿ ಬದಲಾಗುತ್ತಾನೆ.

56 ಜನ ರಾಮಭಕ್ತರನ್ನ, ತನ್ನ ಸಂಬಂಧಿಕರನ್ನ, ಅಣ್ಣ ತಮ್ಮಂದಿರನ್ನ ಕಳೆದುಕೊಂಡ ಹಿಂದೂ ಸಮಾಜ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಗುಜರಾತಿನಲ್ಲಿ ದಂಗೆಯೆದ್ದರು. ಸಾವಿರಾರು ಹಿಂದುಗಳು ಸತ್ತರು ಮುಸಲ್ಮಾನರೂ ಸತ್ತರು.

ಗುಜರಾತಿನಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದುದನ್ನ ತಹಬಂದಿಗೆ ತರಲು ಆಗತಾನೆ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದ ಮೋದಿಗೆ ಸ್ವಲ್ಪ ಕಷ್ಟವಾಯಿತು. ಅವರು ಪಕ್ಕದ ಮಧ್ಯಪ್ರದೇಶ, ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ತನ್ನಲ್ಲಿನ ಪೋಲಿಸ್ ಪಡೆಗಳನ್ನ ಕಳಿಸೋಕಂತ ಪತ್ರ ಬರೆದರು.

ಆದರೆ ಆ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದ್ದದ್ದರಿಂದ ಮೋದಿಯವರಿಗೆ ಯಾವ ಸಹಾಯವೂ ಸಿಗಲಿಲ್ಲ, ಹೇಗೋ ತಮ್ಮ ರಾಜ್ಯದಲ್ಲಿ ಭುಗಿಲೆದ್ದಿದ್ದ ದಂಗೆಯನ್ನ ತಹಬಂದಿಗೆ ತಂದರು.

ಆದರೆ ಈ ವಿಚಾರವನ್ನೇ ಇಟ್ಟುಕೊಂಡು ಕಾಂಗ್ರೆಸ್ ಮೋದಿಯವರನ್ನ ಗುಜರಾತಿನ ಖಳನಾಯಕರಾಗಿ, ಮುಸ್ಲಿಂ ವಿರೋಧಿಯಾಗಿ ಬಿಂಬಿಸಲು ಸಾಕಷ್ಟು ಪ್ರಯತ್ನ ಪಟ್ಟರು, 2002 ರಿಂದ 2014 ರವರೆಗೆ 12 ವರ್ಷಗಳ ಕಾಲ ಮೋದಿಯವರ ತೇಜೋವಧೆ ಮಾಡೋಕೆ ಕಾಂಗ್ರೆಸ್ ಇನ್ನಿಲ್ಲದ ಎಲ್ಲ ಪ್ರಯತ್ನಗಳನ್ನೂ ಮಾಡಿದರು.

ಆದರೆ ಶುದ್ಧಚಾರಿತ್ರ್ಯವುಳ್ಳ ಮೋದಿಯ ಒಂದು ಕೂದಲನ್ನೂ ಕಾಂಗ್ರೆಸ್ ಅಲುಗಾಡಿಸಲಾಗಲಿಲ್ಲ. ಮೋದಿ 12 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ 2014 ರಲ್ಲಿ ಭಾರತದ ಪ್ರಧಾನಿಯಾಗೇ ಬಿಟ್ಟರು.

ಇದರಿಂದ ಹೊಟ್ಟೆಗೆ ಬೆಂಕಿ ಬಿದ್ದಿದ್ದ ಕಾಂಗ್ರೆಸ್ಸಿಗರು, ಎಡಪಕ್ಷಗಳು, ಸೋ ಕಾಲ್ಡ್ ಸೆಕ್ಯೂಲರ್ ಪಕ್ಷಗಳು ಮೋದಿಯನ್ನ ಟೀಕಿಸುವುದನ್ನ ಮಾತ್ರ ಬಿಡಲೇ ಇಲ್ಲ.

ಮೋದಿಯವರ ಸಂಸ್ಕೃತಿ ಹೀಗಿದೆ ಹಾಗಿದೆ, ಬಿಜೆಪಿ ಸಂಸ್ಕೃತಿಹೀನ ಪಕ್ಷ ಅಂತೆಲ್ಲ ಬೊಬ್ಬೆಯಿಟ್ಟರು, ಆದರೆ ಬೇರೆಯವರ ಸಂಸ್ಕೃತಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ತನ್ನ ಸಂಸ್ಕೃತಿ ಎಂತಹದ್ದು ಅನ್ನೋದನ್ನ ದೇಶದ ಜನರೆದುರು ತಾವಾಗಿಯೇ ಅನಾವರಣಗೊಳಿಸಿಕೊಂಡಿದ್ದರು.

ಅಂಥದ್ದೇನು ಮಾಡಿತ್ತು ಕಾಂಗ್ರೆಸ್? ಕಾಂಗ್ರೆಸ್ಸಿಗರು ಮೋದಿ ಅವರ ಬಗ್ಗೆ ಆಡಿದ ಮಾತುಗಳನ್ನ ಕೇಳಿದರೆ ನಿಮಗೆ ಕಾಂಗ್ರೆಸ್ ಎಷ್ಟು ಕೀಳುಮಟ್ಟದ ರಾಜಕೀಯ ಮಾಡೋಕೆ ಮುಂದಾಗಿ ಮೂಲೆಗುಂಪಾಯ್ತು ಅನ್ನೋದು ಅರ್ಥವಾಗುತ್ತೆ.ಕಾಂಗ್ರೆಸ್ ಮೋದಿಯವರ ಕುರಿತಾಗಿ ಆಡಿದ ಮಾತುಗಳು ಹೀಗಿವೆ.

1) “ಯಮರಾಜ”, ಎಂದು ಮೋದಿಯನ್ನ ಬೈದ ಕಾಂಗ್ರೆಸ್ ನಾಯಕ ರಾಶೀದ್ ಅಲ್ವಿ. (ದೆಹಲಿಯಲ್ಲಿ ಈ ಶಬ್ದ ಪ್ರಯೋಗಿಸಿದ್ದು)

2) “ಮೌತ್ ಕಾ ಸೌದಾಗರ್ (ಸಾವಿನ ವ್ಯಾಪಾರಿ)”, ಎಂದು -ಸೋನಿಯಾ ಗಾಂಧಿ 2007 ರಲ್ಲಿ ಮೋದಿಯನ್ನ ಬೈದದ್ದು.

3) “ಜೇಹೇರ್ ಕಿ ಖೇತೀ (ವಿಷದ ಫಸಲು)” – ಮೋದಿ ತನ್ನ ಆಡಳಿತದಲ್ಲಿ ಧರ್ಮಗಳ ನಡುವೆ ವಿಷದ ಬೀಜ ಬಿತ್ತಿ ವಿಷದ ಫಸಲನ್ನ ತೆಗೆಯುವ ವ್ಯಕ್ತಿ ಅಂತ ಸೋನಿಯಾ ಗಾಂಧಿ 2007 ರಲ್ಲಿ ಮೋದಿಯನ್ನ ಟೀಕಿಸಿದ್ದು

4) “ಮೋದಿಯೊಬ್ಬ ಹಾವು, ಚೇಳು, ಕೊಳಕು ಮನುಷ್ಯ” -ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಐಯ್ಯರ್ ಮಾರ್ಚ್ 2013 ರಲ್ಲಿ ಮೋದಿಯ ಕುರಿತಾಗಿ ಹೇಳಿದ್ದು

5) “ರಾವಣ ಮೋದಿ” – ಮೋದಿಯನ್ನ ರಾವಣನಿಗೆ ಹೋಲಿಸಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್.

6) “ಅಸತ್ಯ ಕಾ ಸೌದಾಗರ್(ಸುಳ್ಳಿನ ವ್ಯಾಪಾರಿ), ಪಾನಿ ಪುರುಷ” – ಹೀಗೆ ಮೋದಿಯನ್ನ ಟೀಕಿಸಿದ್ದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಣಿಶಂಕರ್ ಐಯ್ಯರ್.

7) “ಮೋದಿಯೊಬ್ಬ ಕೋತಿ, ರೇಬಿಸ್ ನಿಂದ ಬಳಲುತ್ತಿರುವ ವ್ಯಕ್ತಿ” – ಗುಜರಾತಿನ ಕಾಂಗ್ರೆಸ್ ನಾಯಕ ಅರ್ಜುನ್ ಮಾಧ್ವಾದಿಯ (2013 ಅಕ್ಟೋಬರ್ ರಲ್ಲಿ ಮೋದಿಯ ಬಗ್ಗೆ ಟೀಕಿಸಿದ್ದು)

8) “ಮೋದಿಯೊಬ್ಬ ಇಲಿ” –ಕಾಂಗ್ರೆಸ್ ನಾಯಕ ಹುಸ್ಸನ್ನ್ ದಲ್ ವಲ.

9) “ಮೋದಿ ಕೂಡ ದಾವುದ್ ಇಬ್ರಾಹಿಂ ನ ಹಾಗೆಯೇ ಇದ್ದಾರೆ” – ಮಾರ್ಚ್ 2013 ರಲ್ಲಿ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಮೋದಿಯನ್ನು ಉಗ್ರಗಾಮಿಗೆ ಹೋಲಿಸಿದ್ದು.

10) “ಹೆಂಡತಿಯನ್ನ ನೋಡಿಕೊಳ್ಳಾಗದ ಮೋದಿ ಅಪ್ರಯೋಜಕ ಪತಿ” – ಕಾಂಗ್ರೆಸ್ ನಾಯಕ ಅರ್ಜುನ್ ಮಾಧ್ವಾದಿಯ ಆಡಿದ ಮಾತು.

11) “ಮೋದಿ ಒಬ್ಬ ನಾಲಾಯಕ್, ಅವನ ಅಪ್ಪ ಅಮ್ಮ ಯಾರು?” – 2009 ರಲ್ಲಿ ಕಾಂಗ್ರೆಸ್ ನಾಯಕ ರಿಜ್ವಾನ್ ಮೋದಿ ಗೆ ಪ್ರಶ್ನಿಸಿದ್ದು

12) “ಮೋದಿಯೊಬ್ಬ ಸರ್ವಾಧಿಕಾರಿ, ಆತ ಹಿಟ್ಲರ್ ನ ರೀತಿಯಲ್ಲಿ ವರ್ತಿಸುತ್ತಿದ್ದಾನೆ” -ಜೂನ್ 7, 2013 ರಲ್ಲಿ ಕಾಂಗ್ರೆಸ್ ನಾಯಕ ಎಮ್ ಪಿ ಶಾಂತರಾಮ್ ಆಡಿದ್ದ ಮಾತು.

13) “ಈ ದೇಶಕ್ಕೆ ಮೋದಿ ವೈರಸ್ ಇದ್ದ ಹಾಗೆ” – ಜೂನ್ 7, 2013 ರಲ್ಲಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧ್ರಿ ಆಡಿದ್ದ ಮಾತು.

14) “ಮೋದಿಯೊಬ್ಬ ಕೋತಿ” -ಜೂನ್ 8, 2013 ರಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ ಮಾತು.

15) “ಮೋದಿ ಸರ್ವಾಧಿಕಾರಿ” -ಜೂನ್ 9, 2013 ರಲ್ಲಿ ಕಾಂಗ್ರೆಸ್ ನಾಯಕ ಮೀಮ್ ಆಫ್ಝಲ್ ಹೇಳಿದ ಮಾತು.

16) “ಮೋದಿ ಭಸ್ಮಾಸುರ” -ಜೂನ್ 13, 2013 ರಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ ಮಾತು.

17) “ಮೋದಿಯೊಬ್ಬ ಹುಚ್ಚು ನಾಯಿ” – ಜುಲೈ 14, 2013 ರಲ್ಲಿ ಕಾಂಗ್ರೆಸ್ ನಾಯಕ ಬೇನಿ ಪ್ರಸಾದ ಹೇಳಿದ ಮಾತು.

18) “ಮೋದಿಯೊಬ್ಬ ಗೂಂಡಾ” – ಏಪ್ರಿಲ್ 2, 2014 ರಲ್ಲಿ ಕಾಂಗ್ರೆಸ್ ನಾಯಕ ಬೇನಿ ಪ್ರಸಾದ ಹೇಳಿದ ಮಾತು.

19) “ಮೋದಿಯೊಬ್ಬ ಬ್ಲೀಡರ್” – ಏಪ್ರಿಲ್ 21, 2014 ರಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ ಮಾತು.

20) “ಮೋದಿಯೊಬ್ಬ ವಿಚಿತ್ರ ಪ್ರಾಣಿ” – ಕಾಂಗ್ರೆಸ್ ನಾಯಕ ಬೇನಿ ಪ್ರಸಾದ ಹೇಳಿದ್ದ ಮಾತು.

21) “ಮೋದಿ ನರಹಂತಕ” – ಏಪ್ರಿಲ್ 2014 ರಲ್ಲಿ, ಕರ್ನಾಟಕ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದ ಮಾತು.

22) “ಕ್ರೂರಿ, ಹಿಟ್ಲರ್, ಬಿಜೆಪಿಯೊಂದು ಕೋಮುವಾದಿ ಪಕ್ಷ” – ಮೆಗಾ ಸ್ಟಾರ್ ಚಿರಂಜೀವಿ ಹೇಳಿದ ಮಾತು.

23) “ಮೋದಿಯದ್ದು ನೀಚ ರಾಜನೀತಿ” – ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ ಮಾತು.

24) “ಮೋದಿಯನ್ನ ತುಂಡು ತುಂಡಾಗಿ ಕತ್ತರಿಸಿ” – ಇಮ್ರಾನ್ ಮಸೂದ್ ಮುಸಲ್ಮಾನರಿಗೆ ಕರೆ ಕೊಟ್ಟಿದ್ದು.

25) “ಹೆಂಡತಿಯನ್ನೇ ಕಾಪಾಡದವನು ದೇಶವನು ಕಾಪಾಡುತ್ತಾನಾ?” – ಸದಾ ತಾರುಣ್ಯದಲ್ಲಿರುವ ದಿಗ್ವಿಜಯ ಸಿಂಗ್ ಮೋದಿಯ ಕುರಿತು ಟ್ವಿಟರ್ ನಲ್ಲಿ ಹೀಗೆ ಕೇಳಿದ್ದ.

26) “ಖಳನಾಯಕ” -ಇಂಡಿಯಾ ನ್ಯೂಸ್ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಮ ಸಲ್ಮಾನ್ ಖುರ್ಷಿದ್ ನೀಡಿದ್ದ ಉತ್ತರ

27) “ಮೋದಿಯೊಬ್ಬ ಕಪ್ಪೆ” -16 ಆಗಸ್ಟ್, 2013 ಸಲ್ಮಾನ್ ಖುರ್ಷಿದ್ ಮೋದಿ ಬಗ್ಗೆ ಹೇಳಿದ್ದ ಮಾತು.

28) “ಮೋದಿ ಗಂಗೂ ತೇಲಿಯ ಹಾಗೆ” – ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಜಾದ್ ಹೇಳಿದ್ದ ಮಾತು.

29) “ಮೋದಿಯೊಬ್ಬ ನರಭಕ್ಷಕ” – ಕಾಂಗ್ರೆಸ್ ನಾಯಕ ಬೇನಿ ಪ್ರಸಾದ ಹೇಳಿದ್ದ ಮಾತು.

30) “ಮೋದಿ ನಪುಂಸಕ” -ಫೆಬ್ರವರಿ 26, 2014 ರಂದು ಸಲ್ಮಾನ್ ಖುರ್ಷಿದ್ ಮೋದಿಯನ್ನ ಹೀಗಂದಿದ್ದು (ಸಲ್ಮಾನ್ ಖುರ್ಷಿದ್ ಮೋದಿ ಹತ್ರ ಯಾವಾಗ ಹೋಗಿದ್ರೋ ನಂಗೆ ಗೊತ್ತಿಲ್ಲ)

31) “ಮೋದಿ ಔರಂಗಜೇಬ್ ನ ಹಾಗೆ” – ಮಾರ್ಚ್ 29, 2014 ರಂದು ಕಾಂಗ್ರೆಸ್ಸಿನ ಮತ್ತದೇ ಕಾಂಗ್ರೆಸ್ ನಾಯಕ ಅರ್ಜುನ್ ಮಾಧ್ವಾದಿಯ ಆಡಿದ್ದ ಮಾತು.

ನೋಡ್ರಪ್ಪಾ ಇದೆಲ್ಲ ಕಾಂಗ್ರೆಸ್ಸಿಗರು ಹಾಗು ತಮ್ಮನ್ನು ತಾವು ಸೆಕ್ಯೂಲರ್, ಸಚ್ಚಾರಿತ್ರ್ಯವಂತರು ಅಂತ ಕರೆದುಕೊಳ್ಳುವ ರಾಜಕೀಯ ನೇತಾರರು ಆಡಿದ್ದ ಮಾತುಗಳು, ಇಲ್ಲಿ ಅವರು ಆಡಿದ ಯಾವ ಮಾತಿಗೂ ಇದುವರೆಗೂ ಯಾರೊಬ್ಬರೂ ಕ್ಷಮೆ ಕೇಳಿಲ್ಲ.

ಮೋದಿ ಇವರ ಮೇಲೆ ಮಾನನಷ್ಟ ಮೊಕದ್ದಮೆಯೇನಾದರೂ ಹಾಕಿದ್ದಿದ್ದರೆ ಇದುವರೆಗೂ ಎಲ್ಲರೂ ಕೋರ್ಟ್ ನ ಮೆಟ್ಟಿಲು ಹತ್ತಿರಬೇಕಾಗುತ್ತಿತ್ತು.

ಆದರೆ ಮೋದಿಯವರು ಬೊಗಳುವ ನಾಯಿಗಳಿಗೆ ತಲೆ ಕೆಡಿಸಿಕೊಳ್ಳಲ್ಲ ಅವರಿಗೆ ದೇಶದ ಏಳಿಗೆ ಮುಖ್ಯ.

ಇಷ್ಟೆಲ್ಲ ಓದಿದ ನಂತರ ನಿಮಗೆ ಅರ್ಥವಾಗಿರುತ್ತೆ ಯಾರು ಸುಸಂಸ್ಕೃತವಂತರು ಯಾರು ಸಂಸ್ಕೃತಿಹೀನರಂತ. ನೋಡಿ ನಿರ್ಧಾರ ನಿಮಗೆ ಬಿಟ್ಟದ್ದು ಕಾಂಗ್ರೆಸ್ಸೋ ಅಥವಾ ಬಿಜೆಪಿ ನೋ ಅಂತ ನೀವೇ ನಿರ್ಧಾರ ಮಾಡಿ.