ಕಲ್ಲಡ್ಕ: ಜೀವನದಲ್ಲಿ ಬಾಡಿ ಹೋದ ಆ 80ರ ಹರೆಯದ ಅಜ್ಜಿಯ ಹೃದಯ ಶ್ರೀಮಂತಿಕೆ ಎಷ್ಟಿದೆ ನಿಮಿಗೆ ಗೊತ್ತೇ???

ಕಲ್ಲಡ್ಕ: ಜೀವನದಲ್ಲಿ ಬಾಡಿ ಹೋದ ಆ 80ರ ಹರೆಯದ ಅಜ್ಜಿಯ ಹೃದಯ ಶ್ರೀಮಂತಿಕೆ ಎಷ್ಟಿದೆ ನಿಮಿಗೆ ಗೊತ್ತೇ???

0

ಯಾರದು ಅಜ್ಜಿ,ಏನದು ಹೃದಯ ಶ್ರೀಮಂತಿಕೆ ಅಂತಾ ತಿಳಿಬೇಕಾ? ಹಾಗಿದ್ರೆ ಸ್ವಲ್ಪ ಬಿಡುವು ಮಾಡಿ ಪೂರ್ತಿ ಓದಿಬಿಡಿ…

ಅದು ಹಿಂದುತ್ವದ ಶಕ್ತಿಕೇಂದ್ರ ಕಲ್ಲಡ್ಕ.. ಜಗತ್ತಿಗೆ ಮಾದರಿಯಾಗಿರುವ ಸಂಸ್ಕೃತಿಭರಿತ ಶಿಕ್ಷಣ ನೀಡುವ ಶ್ರೀರಾಮ ವಿದ್ಯಾಕೇಂದ್ರ… ಸುಮಾರು 3500 ವಿದ್ಯಾರ್ಥಿಗಳು.. ಶಿಶುಮಂದಿರದಿಂದ ಪದವಿ ವರೆಗೆ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.. ಸುಮಾರು 150ಕ್ಕೂ ಮಿಕ್ಕಿ ಶಿಕ್ಷಕರಿರುವ ಒಂದು ದೊಡ್ಡ ಸಂಸ್ಥೆ….

ಈ ಸಂಸ್ಥೆಯನ್ನು ಮುನ್ನಡೆಸುವವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರಿಯಾ ಕಾರ್ಯಕಾರಿಣಿ ಸದಸ್ಯರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ…

ಎಲ್ಲರಿಗೂ ತಿಳಿದಂತೆ ಈ ವಿದ್ಯಾಸಂಸ್ಥೆಯಲ್ಲಿ ಎಲ್ಲಾ ಪದವಿವರೆಗಿನ ಮಕ್ಕಳಿಗೆ ಉಚಿತ ಮದ್ಯಾಹ್ನದ ಊಟವನ್ನು ನೀಡಲಾಗುತ್ತದೆ… ಈ ಊಟಕ್ಕೆ ಸಹಾಯವಾಗಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯವಿತ್ತು… ಊಟದ ಸಹಾಯಧನವನ್ನು ಅದು ನೀಡುತ್ತಿತ್ತು..

ಇತ್ತೀಚಿಗೆ ದೇವಾಲಯಗಳಿಂದ ಶಿಕ್ಷಣ ಸಂಸ್ಥೆಗಳಿಗೆ ಊಟಕ್ಕಾಗಿ ಧನ ಸಹಾಯ ಮಾಡುವುದು ತಪ್ಪೆಂದು ನಿರ್ಧರಿಸಿ.. ಸಿದ್ದರಾಮಯ್ಯ ಸರ್ಕಾರ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗೆ ಬರುತ್ತಿದ್ದ ಧನ ಸಹಾಯವನ್ನು ನಿಲ್ಲಿಸಿಬಿಟ್ಟಿತು.

ರಾಜ್ಯದಲ್ಲಿ ಸುಮಾರು 400ಕ್ಕೂ ಅಧಿಕ ಸಂಸ್ಥೆಗಳಿಗೆ ದೇವಸ್ಥಾನಗಳಿಂದ ಊಟಕ್ಕಾಗಿ ಧನ ಸಹಾಯ ಮಾಡಲಾಗುತ್ತಿದರೂ ಕೂಡ ಮಾನ್ಯ ಸಿದ್ದರಾಮಯ್ಯರಿಗೆ ಕಂಡದ್ದು ಮಾತ್ರ ಕಲ್ಲಡ್ಕ ಹಾಗೂ ಪುನಚದ 2 ಸಂಸ್ಥೆಗಳು ಮಾತ್ರ…

ರಾಜ್ಯದಲ್ಲಿ ಬಹುತೇಕ ದಿನದಲ್ಲಿ ಈ ವಿಚಾರವಾಗಿ ಪರ ವಿರೋಧದ ಚರ್ಚೆ ನಡೆಯಿತು, ಕಲ್ಲಡ್ಕದ ವಿದ್ಯಾರ್ಥಿಗಳು ಬೀದಿಗಿಳಿದು ಊಟದ ತಟ್ಟೆಯ ಜತೆಗೆ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿದರು.. ಸ್ವತಃ ಮಕ್ಕಳೇ ನಿಂತು ಸಿದ್ದರಾಮಯ್ಯರ ವಿರುದ್ಧ ತೊಡೆ ತಟ್ಟಿ ಪ್ರತಿಭಟಿಸಿದರು…

ಇದಾದ ನಂತರ ಕಲ್ಲಡ್ಕದ ಹಸಿದ ಮಕ್ಕಳಿಗೆ ಸಹಾಯವಾಗಿ ಹಲವಾರು ಜನರು,ಸಂಸ್ಥೆ,ಸಂಘಟನೆಗಳು ಅಕ್ಕಿ,ಹಣದ ಸಹಾಯವನ್ನು ಮಾಡ ತೊಡಗಿದರು. ಕೆಲವರು “ಭಿಕ್ಷಾಂದೇಹಿ” ಎನ್ನುವ ಆಂದೋಲನವನ್ನೇ ಶುರು ಮಾಡಿದರು…

ರಾಜ್ಯ ಸರ್ಕಾರ ರಾಜ್ಯದ ಅತ್ಯಂತ ದೊಡ್ಡ ಕನ್ನಡ ಮಾಧ್ಯಮ ಶಾಲೆಯ ಮುಗ್ದ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ್ರೂ. ಕೂಡ.. ಸಮಾಜದ ಹಲವಾರು ಜನರು ಮುಂದೆ ಬಂದು… ಮಕ್ಕಳ ಹಸಿವು ನೀಗಿಸಲು ಶ್ರೀರಾಮ ವಿದ್ಯಾ ಸಂಸ್ಥೆಯೊಂದಿಗೆ ಕೈ ಜೋಡಿಸಿದರು…

ಹೀಗೆ ನಾನು ಕೂಡ ಸಹಾಯ ಮಾಡಬೇಕು,ನಾನು ಕೂಡ ಮುಗ್ದ ಮಕ್ಕಳ ಹಸಿವನ್ನು ನೀಗಿಸಬೇಕು ಎಂದು ಬಂದವರಲ್ಲಿ ಒಬ್ಬಾಕೆ 80ರ ಹರೆಯದವರು…

ನೇರವಾಗಿ ಶ್ರೀರಾಮ ವಿದ್ಯಾಸಂಸ್ಥೆಯ ಆಡಳಿತ ಕಚೇರಿಗೆ ಬಂದವರು ಡಾ.ಪ್ರಭಾಕರ್ ಭಟ್ ಜಿ ಯನ್ನು ಬೇಟಿಯಾಗಿದ್ದಾರೆ. 80ರ ಹರೆಯದ ಅಜ್ಜಿ ಅವರು.. ಜೀವನದಲ್ಲಿ ಅನೇಕ ಕಷ್ಟ ಎದುರಿಸಿದ ಜೀವ, ಮುಖ ಪೂರ್ತಿ ನೆರಿಗೆ ಬಿದ್ದಿದೆ, ಬಾಡಿದ ಕಿವಿಯಲ್ಲಿ ಸಣ್ಣ ಬೆಂಡೋಲೆ.. ಕುತ್ತಿಗೆಯಲ್ಲೊಂದು ಸಣ್ಣ ಸರ.. ಪುಡಿಪುಡಿಯಾದ ಹಳೆಯ ಸೀರೆ ಉಟ್ಟಿದರು.ಸ್ವಲ್ಪ.ಬಗ್ಗುತ್ತ ನಿಧಾನವಾಗಿ ಕಾಲಿ ಕಾಲಲ್ಲಿ ಬಂದಿದ್ದರು…ಅವ್ರು..

ಕೈಯಲ್ಲಿ ಒಂದು ಸಣ್ಣ ಚೀಲವೊಂದಿತ್ತು…ಡಾ.ಜಿಯನ್ನು ಭೇಟಿ ಮಾಡಿ ಚೀಲವನ್ನು ಅವರಿಗೆ ಕೊಟ್ಟಿದ್ದಾರೆ… ಹಸಿದ ಮಕ್ಕಳಿಗೆ ನನ್ನ ಸಹಾಯ ಎಂದಿದ್ದಾರೆ… ಡಾ.ಜಿ ಗೆ ಆಶ್ಚರ್ಯ ಆಗಿದೆ… ಆ ಚೀಲದಲ್ಲಿ ಸುಮಾರು ಒಂದೂವರೆ ಕೆಜಿಯಷ್ಟು ಅಕ್ಕಿ ಇತ್ತು… ನಂತ್ರ ತನ್ನ ಸೀರೇಯಲ್ಲಿ ಕಟ್ಟಿದ ಕಷ್ಟಪಟ್ಟು ಬೆವರು ಸುರಿಸಿ ತಾನೇ ಸಂಪಾದಿಸಿದ್ದ ಚಿಲ್ಲರೆ ಹಣವನ್ನು ಎರಡೂ ಕೈಯಲ್ಲಿ ಬಾಚಿ ಡಾ. ಜಿ ಗೆ ನೀಡಿದ್ದಾರೆ.. ಅದರಲ್ಲಿ 72ರೂಪಾಯಿ ಇತ್ತು…

ಇದನ್ನೆಲ್ಲಾ ಮೂಕವಿಸ್ಮಿತನಾಗಿ ನೋಡುತ್ತಿದ್ದ ಡಾ.ಜಿ ಗೆ ಹೃದಯ ತುಂಬಿ ಬಂದಿದೆ… ಆ ಮಹಾ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ…ಸಹಾಯಕ್ಕಾಗಿ ಧನ್ಯವಾದ ಹೇಳಿದ್ದಾರೆ.. ಅಕ್ಕಿ ಹಣಕೊಟ್ಟು ತುಸು ಮಾತಾಡದೇ ಆ ಮಹಾತಾಯಿ ಹೊರಟು ಹೋಗಿದ್ದಾರೆ.

ಎಂಥಾ ಕ್ಷಣ ನೋಡಿ ಒಂದುಕಡೆ ಸಾವಿರ,ಲಕ್ಷ, ಕ್ವಿOಟಾಲ್ ಅಕ್ಕಿ ಸಹಾಯ ಮಾಡುವ ಜನ.. ಇನ್ನೊಂದೆಡೆ ತಾನು ಕಷ್ಟ ಪಟ್ಟು ದುಡಿದ 72 ಹಣ 1kg ಅಕ್ಕಿ ಕೊಡುವ 80ರ ಹರೆಯದ ಅಜ್ಜಿ..

ಆ ಅಜ್ಜಿಯ ಕೊಡುವ ಮನಸ್ಸು ಎಷ್ಟು ಶ್ರೇಷ್ಠ. ತಣ್ಣಹತ್ರ ಹಣ ಇಲ್ಲದಿದ್ದರೂ,ತಾನು ಉಪವಾಸದಿಂದ ಇದ್ರೂ ಈ ಸಣ್ಣ ಮುಗ್ದ ಮಕ್ಕಳ ಹಸಿವನ್ನು ಅರಿತು, ಶತ ಪ್ರಯತ್ನ ಮಾಡಿ ಅಳಿಲು ಸೇವೆಯೊಂದನ್ನು ಮಾಡಿದ್ದಾರೆ.. ಆ ಮಹಾ ಮಾತೆಯ ಸೇವೆಗೆ ನನ್ನದೊಂದು ಸಲಾಮ್…

ಸಿದ್ದರಾಮಯ್ಯ ಕೊಲ್ಲೂರು ಮೂಕಾಂಬಿಕೆಯ ಪ್ರಸಾದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರುದನ್ನು ನಿಲ್ಲಿಸಿದರೆನಂತೆ… ಸಾಕ್ಷಾತ್ ಮೂಕಾಂಬಿಕೆಯೇ ಅಜ್ಜಿಯ ವೇಷದಲ್ಲಿ ಬಂದು ಅಕ್ಕಿ,ಹಣ ಕೊಟ್ಟ ಹಾಗಿತ್ತು… ಅದು ಅಕ್ಕಿಯಲ್ಲ ಅಮೃತ…ಪ್ರಸಾದ..ಇದನ್ನು ಉಂಡ ಕಲ್ಲಡ್ಕದ ಮಕ್ಕಳೇ ಧನ್ಯ…ಅವರೇ ಧನ್ಯರು…

ಇಂತಹ ಕೊಡುವ ಮನಸ್ಸು ಅಜ್ಜಿಗಿರಬೇಕಾದ್ರೆ ನಿಮಿಗ್ಯಾಕೆ ಸಿದ್ದರಾಮಯ್ಯ ಕಿತ್ತುಕೊಳ್ಳುವ ಮನಸ್ಸು ಬಂತು… ಅದ್ಯಾಕೆ ಕಲ್ಲಡ್ಕದ ಗ್ರಾಮೀಣ ಕೂಲಿ ಮಾಡುವ,ಬೀಡಿ ಕಟ್ಟುವ,ಕೃಷಿಕರ,ಕೃಷಿ ಕಾರ್ಮಿಕರ ಬಡ ಮಕ್ಕಳೇ ವ್ಯಾಸಂಗ ಮಾಡುವ ಕರ್ನಾಟಕದ ಅತ್ಯಂತ ದೊಡ್ಡ ಕನ್ನಡಮಾಧ್ಯಮ ಶಾಲೆಯ ಮಕ್ಕಳ ಊಟದ ಮೇಲೆ ಕಣ್ಣು ಬಿತ್ತು…

ನಿಮಿಗಿಷ್ಟವಾದ ಅಹಿಂದ ವರ್ಗದ ಮಕ್ಕಳೇ 94ಶೇಕಡಾ ಇರುವ ಶಾಲೆ ಅದು… ಉಳಿದ ಸಮುದಾಯದವರಿಗೆ ಆ ಶಾದಿ ಭಾಗ್ಯ,ಮೊಟ್ಟೆಬಾಗ್ಯ,ಕ್ಷೀರಭಾಗ್ಯ,ಆ ಭಾಗ್ಯ ಈ ಭಾಗ್ಯ ಅಂತ ಕೊಡುವ ನಿಮಿಗೆ… ಈ ಮಕ್ಕಳ ಅನ್ನ ಕಿತ್ತುಕೊಳ್ಳುವ ಮನಸ್ಸಾದ್ರು ಹೇಗ್ ಬಂತು..

ಅನ್ನವೇ ಏನುಂತಾ ತಿಳಿಯದ ಮುಗ್ದರ ಅನ್ನ ಕಿತ್ತುಕೊಂಡು ನೀವು ಸಾಧಿಸಿದ್ದಾದರೂ ಏನು? ಮಕ್ಕಳಿಗೋಸ್ಕರ ಆಸ್ತಿ ಮಾಡುವ ನಿಮಿಗೆ ಈ ಮುಗ್ದ ಮಕ್ಕಳೇ ಮುಂದೆ ದೇಶದ ಆಸ್ತಿ ಆಗುವವರು ಅಂತಾ ಗೊತ್ತಿರಲಿಲ್ವಾ??

ಕೋಟಿ ಯ ಕೈ ಗಡಿಯಾರ ಕಟ್ಟೋರಿಗೆ,4 ವರ್ಷದಲ್ಲಿ 69ಲಕ್ಷ ರೂಪಾಯಿಯ ಚಹಾ ಬಿಸ್ಕತ್ ತಿಂದವರಿಗೆ..ಸಾವಿರ ಸಾವಿರದ ಪಂಚೆ ಉಡುವವರಿಗೆ,ಕಾಗೆ ಕೂತರೆ ಕಾರನ್ನೇ ಬದಲಾಯಿಸುವ ನಿಮ್ಮಂತ ಭೋಗ ಜೀವಿಗೆ ಈ ಬಡವರ ಹಸಿವು ಹೇಗೆ ಗೊತ್ತಾಗುತ್ತದೆ ಅಲ್ವಾ?

ಎಷ್ಟು ಕೋಟಿ ಹಣ ಇದ್ರೇನು ಸಿದ್ದಣ್ಣ.. ದೇವರು ಕೊಟ್ಟ ಆಯುಷ್ಯ ಮೀರಿ ಹಣಕೊಟ್ಟು ಏನಾದ್ರೂ ಹೆಚ್ಚು ಬದುಕೊಕೆ ಆಗೊತ್ತಾ???

ಹುಟ್ಟೋದು ಮುಖ್ಯ ಅಲ್ಲ ,ಸಾಯೋದು ಮುಖ್ಯ…ಹುಟ್ಟು ನಿಮ್ಮ ಬಂಧುಗಳಿಗೆ ಮಾತ್ರ ಗೊತ್ತಾಗುತ್ತದೆ,ಆದ್ರೆ ಸಾವು ಇಡೀ ಜಗತ್ತಿಗೆ ಗೊತ್ತಾಗಬೇಕು ಅಷ್ಟು ಸಾಧನೆ ಮಾಡಬೇಕು ಸಿಕ್ಕಿದ ಜೀವನದಲ್ಲಿ….ಅದು ಬಿಟ್ಟು ಅನಾಚಾರ ಮಾಡಬಾರದು ಸಿದ್ದಣ್ಣ…

ಹುಟ್ಟಿದಾಗ ನಾಲ್ಕು ಜನ ಸಂತೋಷ ಪಡದಿದ್ದರೂ ತೊಂದ್ರೆಇಲ್ಲ ,ಸತ್ತಾಗ 4 ಜನ ಖುಷಿಪಡೋ ಹಾಗೆ ಆಗ್ಬಾರ್ದು ಜೀವನ…ನಿಮ್ಮದು ಯಾವ ಸೀಮೆ ಜೀವನ ಮಾನ್ಯ ಮುಖ್ಯಮಂತ್ರಿಗಳಿಗೆ???

ಇನ್ನೂ ಕಾಲ ಮಿಂಚಿಲ್ಲ ಏಕಾಂತದಲ್ಲಿ ಕನ್ನಡಿ ಎದುರು ನಿಂತು ನಿಮ್ಮ ಮುಖ ನೀವೇ ನೋಡಿಕೊಂಡು…ಸ್ವಲ್ಪ ನೀವು ಮಾಡಿದ್ದು ಸರಿಯಾ ಅಂತಾ ಯೋಚಿಸಿ,ಮುಖ್ಯಮಂತ್ರಿಗಳೇ.! ಬದಲಾಗಿ… ಜನರಿಗೋಸ್ಕರ ಕೆಲಸಮಾಡಿ ಇನ್ನುಳಿದ 6ತಿಂಗಳಲ್ಲಿ…ಬದಲಾಗಿ…! ನೀವು ಬದಲಾವಣೆ ಆಗ್ತಿರೋ ಇಲ್ವೋ ಗೊತ್ತಿಲ್ಲ… ನಾವು ಬದಲಾಗಿ ಆಗಿದೆ… ನಿಮ್ಮ ಸರ್ಕಾರ ಕಿತ್ತುಬಿಸಾಕುವ ಯೋಚನೆ ಮಾಡಿದ್ದೇವೆ…! ಸರ್ಕಾರ ಅನ್ನ ಕೊಡದಿದ್ರು ಪರ್ವಾಗಿಲ್ಲ…80ರ ಹರೆಯದ ಅಜ್ಜಿಯ ಹೃದಯ ನಮಿಗೋಸ್ಕರ ಮಿಡಿಯೊತ್ತೆ ಅಂತಾದ್ರೆ ಅದಿಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿದೆಯೇ…?

ಹಳ್ಳಿಯವರಾದ್ರು.. ಬಡವರಾದ್ರು ..ಕಲ್ಲಡ್ಕದ ಮಕ್ಕಳು…ಕಷ್ಟವನ್ನು ಎದುರಿಸುವವರು….ಆ ಸಾಮರ್ಥ್ಯ ಇರುವವರು.. ಕಷ್ಟ ಇದೆ ಅಂತ ಮನಸ್ಸಿಗೆ ಹೇಳದೆ, ಮನಸ್ಸಿದೆ ಅಂತಾ ಕಷ್ಟಕ್ಕೆ ಹೇಳುವ ವಿದ್ಯಾರ್ಥಿಗಳು ಕಲ್ಲಡ್ಕದವರು…. ಎಲ್ಲಕ್ಕೂ ಮಿಗಿಲಾಗಿ ಸ್ವಾಭಿಮಾನಿಗಳು…ನಾವು ಅನ್ನ ಕೊಡುವರೆ ಹೊರತು… ನಿಮ್ಮಹಾಗೆ ಕಿತ್ತುಕೊಳ್ಳುವವರು ಆಗೋಲ್ಲ ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳೇ…!!!

ಸಹಮತವಿದ್ರೆ ಅನ್ಯಾಯದ ವಿರುದ್ಧ ಪ್ರತಿಭಟಿಸಿ, ಶೇರ್ ಮಾಡಿ..ಧನ್ಯವಾದಗಳು..

. -ಸಚಿನ್ ಜೈನ್ ಹಳೆಯೂರು..