ಸಿದ್ದುಗೆ ಗುದ್ದು ನೀಡಿ,ದಿನೇಶ್ ಗೆ ಬಿಗ್ ಶಾಕ್ ನೀಡಲು ಮುಂದಾದ ಸೋನಿಯಾ: ಮಾಡುತ್ತಿರುವುದಾದರೂ ಏನು ಗೊತ್ತಾ??

ಸಿದ್ದುಗೆ ಗುದ್ದು ನೀಡಿ,ದಿನೇಶ್ ಗೆ ಬಿಗ್ ಶಾಕ್ ನೀಡಲು ಮುಂದಾದ ಸೋನಿಯಾ: ಮಾಡುತ್ತಿರುವುದಾದರೂ ಏನು ಗೊತ್ತಾ??

ಇಷ್ಟು ದಿವಸ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಅಧಿಪತ್ಯ ಎಂದು ಮೆರೆಯುತ್ತಿದ್ದ ಸಿದ್ಧರಾಮಯ್ಯನವರಿಗೆ ಇದೀಗ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಬಹು ದೊಡ್ಡ ಶಾಕ್ ನೀಡಲು ಹೊರಟಿದೆ. ತಾನೇ ನಾಯಕ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ನವರಿಗೆ, ಅದ್ಯಾಕೋ ತಿಳಿದಿಲ್ಲ ಇತ್ತೀಚೆಗೆ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಸಿದ್ದರಾಮಯ್ಯ ರವರ ನೆಡವಳಿಕೆ ಇಂದು ಅವರಿಗೆ ಕಂಟಕವಾಗುವ ಸೂಚನೆಗಳು ಕಾಣಸಿಗುತ್ತವೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಲವಾರು ವರ್ಷಗಳಿಂದ ಸಿದ್ದರಾಮಯ್ಯ ರವರು ನಡೆದುಕೊಳ್ಳುವ ರೀತಿ ಭಾರಿ ವಿವಾದವನ್ನು ಸೃಷ್ಟಿಸುತ್ತಿವೆ. ಅದರಲ್ಲಿಯೂ ಜಾತಿ , ಧರ್ಮ, ಆಚಾರ-ವಿಚಾರ ಹಾಗೂ ಭಾರತೀಯ ಸೇನೆ ಸೇರಿದಂತೆ ಕೆಲವು ಸೂಕ್ಷ್ಮ ವಿಚಾರಗಳಲ್ಲಿ ಸಿದ್ದರಾಮಯ್ಯ ರವರು ನೀಡಿದ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಗಿವೆ ಎಂಬ ಆರೋಪಗಳು ಸಹ ಕೇಳಿಬಂದಿವೆ. ಇಷ್ಟಾದರೂ ತಲೆಕೆಡಿಸಿಕೊಂಡಿರದ ಹೈಕಮಾಂಡ್ ಇದೀಗ ಸಿದ್ದರಾಮಯ್ಯರವರ ಮೇಲೆ ಬಾರಿ ಸಿಟ್ಟಾಗಿದೆ.

ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದು ಕೊಂಡಿದ್ದ ಡಿಕೆ ಶಿವಕುಮಾರ್ ಅವರು ಜೈಲು ಸೇರಿದಾಗ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹಾಗೂ ಒಕ್ಕಲಿಗ ಜಾತಿಯ ನಾಯಕರು ಸೇರಿದಂತೆ ಜೆಡಿಎಸ್ ಪಕ್ಷದ ಕೆಲವು ನಾಯಕರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ಹಲವಾರು ಕಡೆ ಪ್ರತಿಭಟನೆಗಳನ್ನು ನಡೆಸಿತ್ತು. ಒಂದೆಡೆ ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಪಕ್ಷ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿ ಗುಟುರು ಹಾಕುತ್ತಿರುವ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ರವರ ಹೇಳಿಕೆಗಳು ಕೇವಲ ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದವು. ಇನ್ನು ಸಿದ್ದರಾಮಯ್ಯ ಅವರು ಸಹ ಇದೇ ನಿಟ್ಟಿನಲ್ಲಿ ಎಲ್ಲಿಯೂ ಹೊರಗಡೆ ಡಿಕೆ ಶಿವಕುಮಾರ್ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಈ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸೋನಿಯಾ ಗಾಂಧಿ ಅವರು ಇದೀಗ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ರವರಿಗೆ ಕ್ಯಾರೆ ಎನ್ನುತ್ತಿಲ್ಲ.

ನಿಮಗೆಲ್ಲರಿಗೂ ತಿಳಿದಿರುವ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವು ಎಲ್ಲಾ ಜವಾಬ್ದಾರಿಗಳನ್ನು ಸಿದ್ದರಾಮಯ್ಯ ರವರಿಗೆ ವಹಿಸುತ್ತಿತ್ತು. ಯಾವುದರ ಬಗ್ಗೆಯೂ ಆಲೋಚನೆ ಮಾಡದೆ ಸಿದ್ದರಾಮಯ್ಯರವರು ಪ್ರತಿಯೊಂದು ವಿಷಯದಲ್ಲಿಯೂ ನಾಯಕತ್ವ ವಹಿಸುತ್ತಿದ್ದರು. ಆದರೆ ಇದೀಗ ಮೈತ್ರಿ ಸರ್ಕಾರ ಉರುಳಿ ಬಿದ್ದ ನಂತರ ತೆರವಾಗಿರುವ ಪ್ರತಿಪಕ್ಷ ನಾಯಕನ ಆಯ್ಕೆಗೆ ಸಿದ್ದರಾಮಯ್ಯ ರವರು ಆಯ್ಕೆಯಾಗುತ್ತಾರೆ ಎಂದು ಎಲ್ಲರೂ ಊಹೆ ಮಾಡಿದ್ದರು. ಆದರೆ ಸ್ವತಃ ಸಿದ್ದರಾಮಯ್ಯ ರವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಲಾಬಿ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಿದ್ದರಾಮಯ್ಯ ರವರಿಗೆ ಸೋನಿಯಾ ಗಾಂಧಿ ಪ್ರತಿಪಕ್ಷ ಸ್ಥಾನ ನೀಡಲು ಒಪ್ಪುತ್ತಿಲ್ಲ. ಅಷ್ಟೇ ಅಲ್ಲದೆ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಸಿಡಿದೆದ್ದಿದ್ದಾರೆ.

ಆದರೆ ಹೇಗಾದರೂ ಮಾಡಿ ಪಕ್ಷದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ತಯಾರಿ ನಡೆಸುತ್ತಿರುವ ಸಿದ್ದರಾಮಯ್ಯ ರವರು ಇತ್ತೀಚೆಗೆ ತಮ್ಮ ಬೆಂಬಲಿಗ ಶಾಸಕರ ಮೂಲಕ ಹಲವಾರು ಹಿರಿಯ ನಾಯಕರನ್ನು ಸೇರಿಸಿಕೊಂಡು ಶಕ್ತಿ ಪ್ರದರ್ಶನ ಕೂಡ ಮಾಡಿದ್ದರು. ಆದರೆ ಸೋನಿಯಾ ಗಾಂಧಿ ರವರು ಇದ್ಯಾವುದಕ್ಕೂ ಕ್ಯಾರೇ ಎಂದಿಲ್ಲ. ಇದೇ ಕಾರಣಕ್ಕಾಗಿ ಇದೀಗ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯರವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರ ಮನವೊಲಿಸಲು ಮುಂದಾಗಿದ್ದಾರೆ. ಆದರೆ, ಸೋನಿಯಾ ಗಾಂಧಿ ರವರು ಪರ್ಯಾಯ ನಾಯಕನ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ. ಇತ್ತೀಚೆಗೆ ಅಹಮದ್ ಪಟೇಲ್ ಅವರನ್ನು ಸಹ ಭೇಟಿ ಮಾಡಿದ ಸಿದ್ದರಾಮಯ್ಯರವರು ಪ್ರತಿಪಕ್ಷ ನಾಯಕನ ಲಾಬಿ ನಡೆಸಿದ್ದಾರೆ. ಇದಕ್ಕೆ ಸೋನಿಯಾಗಾಂಧಿ ರವರು ಮಾತ್ರ ಒಪ್ಪಿಗೆ ನೀಡದೇ ಸಿದ್ದರಾಮಯ್ಯರವರನ್ನು ಶಾಕ್ ತಳ್ಳಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.