Personal loan: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ.

Personal Loan- You can get Personal loan upto 2 lac rupees from Devaraju Arasu Mandali. Below is the details of how to get personal loan without any guarantee.

Personal loan: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಮ್ಮದೇ ಆದಂತಹ ಸ್ವಂತವಾದ ವ್ಯಾಪಾರ ರೀತಿಯ ಅಥವಾ ಆದಾಯವನ್ನು ಹುಟ್ಟು ಹಾಕುವಂತಹ ಕೆಲಸವನ್ನು ಮಾಡಲು ಯೋಚನೆ ಮಾಡುತ್ತಾರೆ. ಆದರೆ ಅದನ್ನು ಪ್ರಾರಂಭಿಸಲು ಬೇಕಾಗಿರುವಂತಹ ಸಾಮಾನ್ಯ ಬಂಡವಾಳ ಕೂಡ ಇತ್ತೀಚಿನ ದಿನಗಳಲ್ಲಿ ಸಿಗೋದು ಕಷ್ಟ ಯಾಕಂದ್ರೆ ಲಕ್ಷಗಟ್ಟಲೆ ಹಣದಲ್ಲಿ ಇದನ್ನು ಪ್ರಾರಂಭಿಸ ಬೇಕಾಗಿರುತ್ತದೆ. ಆದರೆ ಈಗ ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಡಿ ದೇವರಾಜ ಅರಸು ಅವರ ಸ್ವಯಂ ವೈಯಕ್ತಿಕ ಉದ್ಯೋಗ ಸಾಲವನ್ನು(devaraj arasu swayam vyaktika udyoga sala) ನೀಡುವಂತಹ ಯೋಜನೆಯನ್ನು ಜಾರಿಗೆ ತಂದಿದ್ದು 2 ಲಕ್ಷ ರೂಪಾಯಿಗಳ ವರೆಗೂ ಕೂಡ ವೈಯಕ್ತಿಕ ಆರ್ಥಿಕ ಸಾಲವನ್ನು ನೀಡಲಾಗುತ್ತದೆ.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

Personal Loan- You can get Personal loan upto 2 lac rupees from Devaraju Arasu Mandali. Below is the details of how to get personal loan without any guarantee.

ಉದಾಹರಣೆಗೆ ಈ ಯೋಜನೆಯಲ್ಲಿ ಪಡೆದುಕೊಳ್ಳುವಂತಹ ಒಂದು ಲಕ್ಷ ರೂಪಾಯಿ ಸಾಲದಲ್ಲಿ ಗರಿಷ್ಠ 20 ಸಾವಿರ ರೂಪಾಯಿವರೆಗೂ ಕೂಡ ರಿಯಾಯಿತಿ ಅಂದರೆ ಸಹಾಯಧನ ರೂಪದಲ್ಲಿ ನೀಡಲಾಗುತ್ತದೆ. ಒಂದರಿಂದ ಎರಡು ಲಕ್ಷ ರೂಪಾಯಿಗಳವರೆಗಿನ ಸಾಲದ ಮೇಲೆ 30,000 ವರೆಗೂ ಕೂಡ ರಿಯಾಯಿತಿ ಎಂದರೆ ಸಹಾಯಧನ ನಿಮಗೆ ಇದರಲ್ಲಿ ಸಿಗುತ್ತದೆ. ಕೇವಲ 4 ಪ್ರತಿಶತ ಬಡ್ಡಿ ದರದಲ್ಲಿ ನೀವು ಈ ಯೋಜನೆಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಈ ಯೋಜನೆಯಲ್ಲಿ ಸಾಲವನ್ನು ಪಡೆಯುವವರು ಗ್ರಾಮಾಂತರ ಪ್ರದೇಶದಲ್ಲಿದ್ದರೆ ಅವರ ವಾರ್ಷಿಕ ಆದಾಯ ಎನ್ನುವುದು 98 ಸಾವಿರ ರೂಪಾಯಿ ಆಗಿರಬೇಕು ಹಾಗೂ ಪಟ್ಟಣದಲ್ಲಿ ಇರುವವರಿಗೆ 1.20 ಲಕ್ಷ ರೂಪಾಯಿಗಳ ವಾರ್ಷಿಕ ಆದಾಯದ ಒಳಗೆ ಇರಬೇಕು. 18 ರಿಂದ 55 ವರ್ಷದ ಒಳಗಿರುವಂತಹ ವ್ಯಕ್ತಿಗಳು ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಪ್ರವರ್ಗ ಒಂದು ಜಾತಿ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳು ಏಳನೇ ತರಗತಿ ಓದಿರಬೇಕು ಹಾಗೂ ಸಾಮಾನ್ಯ ವರ್ಗದವರು ಕನಿಷ್ಠ ಪಕ್ಷ 10ನೇ ತರಗತಿ ಓದಿದರೆ ಮಾತ್ರ ಅವರಿಗೆ ಈ ಸಾಲವನ್ನು ನೀಡಲಾಗುತ್ತದೆ.

Aadhar card ನಿಮ್ಮ ಬ್ಯಾಂಕ್ ಖಾತೆಗೆ ಈ ಸಂದರ್ಭದಲ್ಲಿ ಲಿಂಕ್ ಆಗಿರಬೇಕು ಎನ್ನುವುದನ್ನು ಪರಿಶೀಲಿಸಬೇಕು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ(income certificate) ಕೂಡ ಈ ಸಂದರ್ಭದಲ್ಲಿ ನೀವು ಒದಗಿಸಬೇಕಾಗಿರುತ್ತದೆ. ಒಂದು ವೇಳೆ ನೀವು ಅಥವಾ ನಿಮ್ಮ ಕುಟುಂಬದವರು ಬೇರೆ ಯಾವುದೇ ಯೋಜನೆ ಅಡಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಯಾವುದೇ ಯೋಜನೆಯ ಫಲಾನುಭವಿಗಳಾಗಿದ್ದಲ್ಲಿ ನಿಮಗೆ ಈ ಯೋಜನೆಯಲ್ಲಿ ಸಾಲವನ್ನು ಪಡೆದುಕೊಳ್ಳುವ ಅವಕಾಶವನ್ನು ನೀಡಲಾಗುವುದಿಲ್ಲ.

ವಾರಕ್ಕೆ ಎರಡು ಗಂಟೆ ಸಾಕು ಈ ಈ ಬಿಜಿನೆಸ್ ಮಾಡಿ, ಲಕ್ಷ ಲಕ್ಷ ಆದಾಯ. ಹಳ್ಳಿಯಲ್ಲಿ ಇದ್ದರೂ ಮಾಡಬಹುದು. Business Ideas

ಹಾಗಿದ್ರೆ ಬನ್ನಿ ಯಾವೆಲ್ಲ ಜಾತಿಯವರಿಗೆ ದೇವರಾಜ ಅರಸು ವೈಯಕ್ತಿಕ ಸಾಲ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವಂತಹ ಅರ್ಹತೆ ಇದೆ ಎನ್ನುವುದನ್ನು ತಿಳಿಯೋಣ. ಹಿಂದುಳಿದ ಪ್ರವರ್ಗ 1, 2ಎ ಮತ್ತು ಮೂರು ಬಿ ವರ್ಗದವರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ಒಂದು ವೇಳೆ ನೀವು ಕೂಡ ಈ ವರ್ಗಕ್ಕೆ ಸೇರಿದವರಾಗಿದ್ದರೆ ತಪ್ಪದೇ ನೀವು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ನಿಮ್ಮದೇ ಆದಂತಹ ವ್ಯಾಪಾರವನ್ನು ಮಾಡಬಹುದಾಗಿದೆ. SevaSindhu ( https://sevasindhu.karnataka.gov.in) ಇದು ಸೇವಾ ಸಿಂಧು ಲಿಂಕ್ ಆಗಿದ್ದು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ಪಡೆದುಕೊಳ್ಳುತ್ತೀರಿ.