ಪ್ರಧಾನಿ ಮೋದಿಗೆ ಬಂತು ಇಸ್ರೇಲಿನಿಂದ ತುರ್ತು ಕರೆ ! ಇಸ್ರೇಲ್ ಪ್ರಧಾನಿಯಿಂದ ಮೋದಿಗೆ ವಿಶೇಷ ಮನವಿ !

ನಮಸ್ಕಾರ ಸ್ನೇಹಿತರೇ, ಭಾರತ ಹಾಗೂ ನಮ್ಮ ಆಪ್ತಮಿತ್ರ ಇಸ್ರೇಲ್ ದೇಶದ ಸಂಬಂಧಗಳ ಬಗ್ಗೆ ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಸದಾ ಯಾವುದೇ ವಿಷಯದಲ್ಲಾದರೂ ಪರಸ್ಪರ ಹೊಂದಾಣಿಕೆಯಿಂದ ಮುನ್ನುಗ್ಗುತ್ತವೆ ಈ ಎರಡು ದೇಶಗಳು.

ಇದೀಗ ಇಡೀ ವಿಶ್ವದಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನ ವಿರುದ್ಧ ಕೂಡ ಈ ಎರಡೂ ದೇಶಗಳು ಒಟ್ಟಾಗಿ ಮುನ್ನುಗ್ಗಲು ನಿರ್ಧಾರ ಮಾಡಿವೆ. ಇದೇ ವಿಷಯವಾಗಿ ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರು ನರೇಂದ್ರ ಮೋದಿ ರವರಿಗೆ ಮುಖ ವಸ್ತುಗಳು (ಮಾಸ್ಕ್) ಹಾಗೂ ಕೊರೊನ ವೈರಸ್ ತಡೆಗಟ್ಟಲು ಔಷಧಿ ತಯಾರಿಕೆಗೆ ಬೇಕಾಗಿರುವ ಎಲ್ಲ ಕಚ್ಚಾ ವಸ್ತುಗಳನ್ನು ರಫ್ತು ಮಾಡುವಂತೆ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ.

ಇಸ್ರೇಲ್ ದೇಶದ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನಿ ಮೋದಿ ರವರು ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಇತರ ವಿಚಾರಗಳಂತೆ ಕೊರೊನ ಸವಾಲನ್ನು ಕೂಡ ನಾವು ಮತ್ತು ಭಾರತ ಒಟ್ಟಾಗಿ ಎದುರಿಸುತ್ತೇವೆ ಎಂದು ಇದೀಗ ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತ ಹೇಳಿಕೆ ನೀಡಿದ್ದಾರೆ

Facebook Comments

Post Author: RAVI