ಮಂಡ್ಯ ಜಿಲ್ಲೆಯಲ್ಲಿ ಅಪರೂಪದ ಕನಿಜ ಸಂಪತ್ತುಗಳು ! ದೇಶಕ್ಕೆ ಅಗತ್ಯವಿರುವ ಕೋಟ್ಯಂತರ ಬೆಲೆಬಾಳುವ ಖನಿಜ ಸಂಪತ್ತಿನ ಬಗ್ಗೆ ನಿಮಗೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಇದೀಗ ಮಂಡ್ಯ ಜಿಲ್ಲೆ ದೇಶದ ಎಲ್ಲೆಡೆ ಸದ್ದು ಮಾಡುತ್ತಿದೆ. ದೇಶದ ಮುಂದಿನ ಭವಿಷ್ಯಕ್ಕೆ ಬಹಳ ಅಗತ್ಯವಿರುವ ಪ್ರಮುಖ ಖನಿಜ ಸಂಪತ್ತು ಇಲ್ಲಿ ಅಡಗಿ ಕೂತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ವಿಶ್ವವೇ ಇದೀಗ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದೆ. ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳ ಕುರಿತು ಎಲ್ಲೆಡೆ ಸರ್ಕಾರಗಳು ಜನ-ಜಾಗೃತಿ ಮೂಡಿಸುತ್ತಿವೆ. ದಿನಕ್ಕೆ ಕೋಟ್ಯಾಂತರ ವಾಹನಗಳು ಓಡಾಡುವ ಭಾರತದಲ್ಲಿಯೂ ಕೂಡ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಸಬ್ಸಿಡಿ ನೀಡಿ ಎಲೆಕ್ಟ್ರಿಕ್ ವಾಹನ ಖರೀದಿಸಲು ಉತ್ತೇಜನ ನೀಡಲಾಗುತ್ತಿದೆ. ಇದೀಗ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಬಹಳ ಅಗತ್ಯವಾಗಿರುವ ಲಿಥಿಯಂ ಗುರುತು ಮಂಡ್ಯ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಸುಮಾರು 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಹೆಚ್ಚು ಟನ್ ಲಿಥಿಯಂ ಇದೆಯೆಂದು ಭೂವೈಜ್ಞಾನಿಕ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿಯೇ ಚಿನ್ನದ ನಿಕ್ಷೇಪ ಇರುವುದು ಬೆಳಕಿಗೆ ಬಂದಿದ್ದು, ಬ್ರಿಟಿಷರ ಕಾಲದಿಂದ ಬಂಗಾರದ ಗುಡ್ಡ ಎಂದು ಹೆಸರು ಪಡೆದುಕೊಂಡಿದ್ದ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಸಂಶೋಧನಾಕಾರರು ಕೆಲವು ಗುಹೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಈ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಒಟ್ಟಿನಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಲಿಥಿಯಂ ಸಿಗುವುದು ಖಚಿತವಾಗಿದ್ದರೆ ಮತ್ತೊಂದೆಡೆ ಚಿನ್ನ ಕೂಡ ಸಿಕ್ಕರೆ ಮಂಡ್ಯ ಜಿಲ್ಲೆಯ ಭವಿಷ್ಯವೇ ಬದಲಾಗಲಿದೆ ಎಂದೇ ಹೇಳಲಾಗುತ್ತಿದೆ.

Facebook Comments

Post Author: RAVI