ಈ ಆಟಗಾರ ಟೀಮ್ ಇಂಡಿಯಾದಲ್ಲಿ ಇರುವುದು ಕೊಹ್ಲಿ ರವರ ಅದೃಷ್ಟ: ಸ್ಟೀವ್ ವಾ ! ಯಾವ ಆಟಗಾರನಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ತಂಡವು ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡಲು ಆಸ್ಟ್ರೇಲಿಯಾ ದೇಶಕ್ಕೆ ಪ್ರವಾಸ ಬೆಳೆಸಲಿದೆ. ಇದೇ ಸರಣಿಯಲ್ಲಿ ಐತಿಹಾಸಿಕ ಹೊನಲು ಬೆಳಕಿನ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಸಾಕ್ಷಿಯಾಗಲಿದೆ.

ಇದೀಗ ಇದರ ಕುರಿತು ಮಾತನಾಡಿರುವ ಆಸ್ಟ್ರೇಲಿಯಾ ದೇಶದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಸ್ಟೀವ್ ವಾ ರವರು, ಮೊದಲಿಗೆ ಐತಿಹಾಸಿಕ ಹೊನಲು ಬೆಳಕಿನ ಪಂದ್ಯದಲ್ಲಿ ಆಡಲು ಭಾರತ ತಂಡ ಗ್ರೀನ್ ಸಿಗ್ನಲ್ ನೀಡಿದ್ದಕ್ಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರವರಿಗೆ ಧನ್ಯವಾದ ತಿಳಿಸಿರುವ ಸ್ಟೀವ್ ವಾ ರವರು ಭಾರತೀಯ ಆಟಗಾರರ ಕುರಿತು ಮಾತನಾಡಿದ್ದಾರೆ. ಮೊದಲಿಗೆ ವಿರಾಟ್ ಕೊಹ್ಲಿ ರವರ ಬಗ್ಗೆ ಮಾತನಾಡಿರುವ ಸ್ಟೀವ್ ವಾ ರವರು, ಇದೀಗ ಭಾರತ ತಂಡವು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ದಿನೇದಿನೇ ಮತ್ತಷ್ಟು ಬಲಿಷ್ಠ ತಂಡವಾಗಿ ಮಾರ್ಪಡುತ್ತಿದೆ, ಯಶಸ್ಸನ್ನು ಗಳಿಸುತ್ತಿದೆ. ಎಲ್ಲಾ ಮಾದರಿಗೂ ವಿರಾಟ್ ಕೊಹ್ಲಿ ರವರೇ ನಾಯಕರಾಗಿ ತಂಡವನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತಿದ್ದಾರೆ.

ಅಷ್ಟೇ ಅಲ್ಲದೆ ಇದೀಗ ಭಾರತ ತಂಡ ವಿಶ್ವದಲ್ಲಿಯೇ ಅತ್ಯುತ್ತಮ ಬೌಲಿಂಗ್ ಲೈನ್ ಅಪ್ ಹೊಂದಿರುವ ತಂಡವಾಗಿದೆ, ಕೆಲವು ಭಾರತೀಯ ಬೌಲರ್ ಗಳ ಮೊನಚು ಬೌಲಿಂಗ್ ವಿದೇಶ ನೆಲದಲ್ಲಿ ಹಲವಾರು ಬಾರಿ ವರ್ಕೌಟ್ ಆಗಿಲ್ಲ, ಆದರೆ ಜಸ್ಪಿತ್ ಬುಮ್ರಾ ರವರು ವಿದೇಶದಲ್ಲಿಯೂ ತಮ್ಮದೇ ಆದ ಬೌಲಿಂಗ್ ಶೈಲಿಯ ಮೂಲಕ ವಿಕೆಟ್ ಗಳಿಸಬಲ್ಲರು. ಜಸ್ಮಿತ್ ಬುಮ್ರಾ ರವರು ತಂಡದಲ್ಲಿ ಆಡುವುದು ವಿರಾಟ್ ಕೊಹ್ಲಿ ರವರ ಅದೃಷ್ಟ, ಇವರ ಬೌಲಿಂಗ್ ಬಗ್ಗೆ ಅಥವಾ ಬೌಲಿಂಗ್ ಶೈಲಿಯ ಬಗ್ಗೆ ಯಾರು ಪಾಠ ಹೇಳಿಕೊಡಲು ಹೋಗಬಾರದು, ಅವರದೇ ಆದ ಶೈಲಿಯಲ್ಲಿ ಬೌಲಿಂಗ್ ಮುಂದುವರಿಸಲಿ ಎಂದು ಹೇಳಿಕೆ ನೀಡಿದ್ದಾರೆ.

Facebook Comments

Post Author: RAVI