ಸಂಪುಟ ವಿಸ್ತರಣೆ ನಂತರ ಸರ್ಕಾರ ಉರುಳುತ್ತದೆ ಎಂದ ಜೆಡಿಎಸ್ ಹಾಗೂ ಕುಮಾರಸ್ವಾಮಿಗೆ ಬಾರಿ ಮುಜುಗರ ! ಜಿಟಿ ದೇವೇಗೌಡ ರವರು ಸರ್ಕಾರ ಅಸ್ತಿತ್ವದ ಬಗ್ಗೆ ಹೇಳಿದ್ದೇನು ಗೊತ್ತಾ??

ಸಂಪುಟ ವಿಸ್ತರಣೆ ನಂತರ ಸರ್ಕಾರ ಉರುಳುತ್ತದೆ ಎಂದ ಜೆಡಿಎಸ್ ಹಾಗೂ ಕುಮಾರಸ್ವಾಮಿಗೆ ಬಾರಿ ಮುಜುಗರ ! ಜಿಟಿ ದೇವೇಗೌಡ ರವರು ಸರ್ಕಾರ ಅಸ್ತಿತ್ವದ ಬಗ್ಗೆ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಇನ್ನೇನು ಎರಡು-ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದೆ. ಆದರೆ ಖಾತೆಗಳ ಹಂಚಿಕೆಯಲ್ಲಿ ಹಾಗೂ ಸೋತವರು ಅಸಮಾಧಾನಗೊಂಡು ಬಿಎಸ್ ಯಡಿಯೂರಪ್ಪ ನವರ ಸರ್ಕಾರ ಉರುಳುತ್ತದೆ ಎಂದು ಕೆಲವರು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿ ಕೊಂಡಿದ್ದಾರೆ.

ಒಂದು ಕಡೆ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಮತ್ತೊಂದೆಡೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ನ ಹಲವಾರು ನಾಯಕರು ಯಾವುದೇ ಕಾರಣಕ್ಕೂ ಬಿಎಸ್ ಯಡಿಯೂರಪ್ಪ ನವರ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ ದೇವೇಗೌಡ ರವರು ಪಕ್ಷ ಸಂಘಟನೆಯ ಕಾರ್ಯಕ್ರಮಗಳಲ್ಲಿ ಚುನಾವಣೆಗೆ ಸಿದ್ಧರಾಗಿ ಎಂಬ ಘೋಷಣೆಯಲ್ಲಿ ತೊಡಗಿದ್ದಾರೆ. ಹೀಗಿರುವಾಗ ಯಡಿಯೂರಪ್ಪನವರ ಸರ್ಕಾರದ ಕುರಿತು ಜಿಟಿ ದೇವೇಗೌಡ ರವರು ಭವಿಷ್ಯ ನುಡಿದಿದ್ದಾರೆ. ಹಲವಾರು ನಾಯಕರು ಬಿಜೆಪಿ ಸರ್ಕಾರ ಉಳಿಯುವುದಿಲ್ಲ, ಉಪ ಚುನಾವಣೆ ಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ, ಅಷ್ಟೇ ಅಲ್ಲದೆ ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ ಎಂದೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಆದರೆ ಯಾರು ಏನನ್ನಾದರೂ ಹೇಳಲಿ ಏನಾದರೂ ಆಗಲಿ ಯಡಿಯೂರಪ್ಪ ನವರ ಸರ್ಕಾರವು ಮೂರು ವರ್ಷಗಳ ಕಾಲ ಸುಭದ್ರವಾಗಿರುತ್ತದೆ.

ಯಡಿಯೂರಪ್ಪನವರು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸುಭದ್ರ ಸರ್ಕಾರ ನೀಡಲಿದ್ದಾರೆ, ಉಳಿದ ಪ್ರತಿಯೊಬ್ಬರೂ ಯಡಿಯೂರಪ್ಪ ನವರಿಗೆ ಸಹಕಾರ ಕೊಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಎಲ್ಲರಿಗೂ ಸಚಿವ ಸ್ಥಾನ ಸಿಗದೇ ಇರಬಹುದು, ಆದರೆ ಸಂಪುಟ ದರ್ಜೆಯ ಸ್ಥಾನಮಾನವನ್ನು ಪ್ರತಿಯೊಬ್ಬ ಶಾಸಕರು ಪಡೆದು ಕೊಳ್ಳಲಿದ್ದಾರೆ, ಯಾವ ಶಾಸಕರಿಗೆ ಯಾವ ಹುದ್ದೆ ನೀಡಬೇಕು ಅಥವಾ ನಿಗಮ ಮಂಡಳಿ ಅಧಿಕಾರವನ್ನು ನೀಡಬೇಕು ಎಂಬುದು ಬಿಎಸ್ ಯಡಿಯೂರಪ್ಪ ನವರಿಗೆ ಚೆನ್ನಾಗಿ ತಿಳಿದಿದೆ. ಪ್ರತಿಯೊಂದನ್ನು ಸರಿದೂಗಿಸಿಕೊಂಡು ಯಡಿಯೂರಪ್ಪ ನವರು ಮುನ್ನುಗ್ಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ವಿಶ್ವನಾಥ್ ರವರ ಬಗ್ಗೆ ಮಾತನಾಡಿದ ಜಿಟಿ ದೇವೇಗೌಡ ರವರು ರಾಜೀನಾಮೆ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರಿಕೊಂಡವರು ಈಗಾಗಲೇ ರಾಜಕೀಯದಲ್ಲಿ ಸಾಕಾಗಿ ಹೋಗಿದ್ದಾರೆ, ಬಿಜೆಪಿ ಪಕ್ಷ ಸಚಿವ ಸ್ಥಾನ ನೀಡಿದರೂ ಅಥವಾ ನೀಡದೆ ಇದ್ದರೂ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ಅವರಿಗೂ ತಿಳಿದಿದೆ ಎಂದು ಟಾಂಗ್ ನೀಡಿದ್ದಾರೆ.