ಕಾಶ್ಮೀರಿ ವಿಚಾರದಲ್ಲಿ ಮೂಗು ತೂರಿಸಿದ ಚೀನಾ ದೇಶಕ್ಕೆ ರಷ್ಯಾ ತಿರುಗೇಟು ನೀಡಿದ್ದು ಹೇಗೆ ಗೊತ್ತಾ??

ಕಾಶ್ಮೀರಿ ವಿಚಾರದಲ್ಲಿ ಮೂಗು ತೂರಿಸಿದ ಚೀನಾ ದೇಶಕ್ಕೆ ರಷ್ಯಾ ತಿರುಗೇಟು ನೀಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಜಮ್ಮು ಹಾಗೂ ಕಾಶ್ಮೀರ ಭಾರತದ ಸ್ವತ್ತು, ಇಲ್ಲಿನ ಕಾನೂನುಗಳನ್ನು ಭಾರತ ಸಂವಿಧಾನದ ಪ್ರಕಾರ ತಿದ್ದುಪಡಿ ಮಾಡಲಾಗುತ್ತದೆ. ಈ ವಿಷಯದಲ್ಲಿ ಬೇರೆ ಯಾವ ದೇಶಗಳು ಮೂಗು ತೂರಿಸುವ ಹಕ್ಕು ಇಲ್ಲ, ಆದರೆ ಏನು ಮಾಡುವುದು ಹೇಳಿ ಸುಖಾ ಸುಮ್ಮನೆ ಕಾಲುಕೆರೆದು ಕೊಂಡು ಜಗಳಕ್ಕೆ ಬರುವ ಪಾಕಿಸ್ತಾನವು ಭಾರತದ ಆಂತರಿಕ ವಿಚಾರದಲ್ಲಿ ಸದಾ ಮೂಗು ತೂರಿಸುತ್ತಿರುತ್ತದೆ.

ಇನ್ನು ಈ ಕುತಂತ್ರಿ ರಾಷ್ಟ್ರಕ್ಕೆ ಬೆಂಬಲವಾಗಿ ಸದಾ ಚೀನಾ ದೇಶ ನಿಂತಿರುತ್ತದೆ, ಭಾರತದ ವಿರುದ್ಧ ಕತ್ತಿ ಮಸೆಯಲು ಚೀನಾ ದೇಶವು ಪ್ರತಿ ಬಾರಿಯೂ ಪಾಕಿಸ್ತಾನ ದೇಶದ ಬೆಂಬಲಕ್ಕೆ ನಿಂತವು ಸುಖಾ ಸುಮ್ಮನೆ ಇನ್ನಿಲ್ಲದ ಸರ್ಕಸ್ ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿರುತ್ತದೆ. ಇದೇ ವಿಚಾರವಾಗಿ ಹಲವಾರು ಬಾರಿ ಮುಖಭಂಗ ಎದುರಾದರೂ ಕೂಡ ಮತ್ತೊಮ್ಮೆ ಚೀನಾ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಮ್ಮು ಹಾಗೂ ಕಾಶ್ಮೀರ ವಿಚಾರದಲ್ಲಿ ರಷ್ಯಾ, ಅಮೆರಿಕಾ ದೇಶಗಳು ಸೇರಿದಂತೆ ಇನ್ನುಳಿದ ರಾಷ್ಟ್ರಗಳು ಕೂಡ ಭಾರತದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಭಾರತ ನಡೆಸುತ್ತಿರುವ ದೌರ್ಜನ್ಯಗಳನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿತ್ತು. ಇದಕ್ಕೆ ಇದೀಗ ರಷ್ಯಾ ದೇಶದಿಂದ ಪ್ರತಿಕ್ರಿಯೆ ಬಂದಿದ್ದು ಖಡಕ್ ಆಗಿ ತಿರುಗೇಟು ನೀಡಿದೆ.

ರಷ್ಯಾ ದೇಶವು ಎಂದಿಗೂ ಜಮ್ಮು ಹಾಗೂ ಕಾಶ್ಮೀರದ ವಿಚಾರದಲ್ಲಿ ತಲೆ ಹಾಕುವುದಿಲ್ಲ ಹಾಗೂ ಯಾವುದೇ ಆಯೋಗವನ್ನು ನಾವು ಭಾರತಕ್ಕೆ ಕಳುಹಿಸುವುದಿಲ್ಲ. ನಮಗೆ ಭಾರತ ದೇಶದ ಬಗ್ಗೆ ನಂಬಿಕೆ ಇದೆ ಹಾಗೂ ಭಾರತ ದೇಶದ ನಿಲುವಿನ ಬಗ್ಗೆ ಅನುಮಾನ ಇರುವವರು ಮಾತ್ರ ಭಾರತಕ್ಕೆ ನಿಯೋಗ ಕಳುಹಿಸಬೇಕು, ಆದರೆ ಭಾರತದ ವಿಚಾರದಲ್ಲಿ ಕಿಂಚಿತ್ತು ನಮಗೆ ಅನುಮಾನವೇ ಇಲ್ಲ. ಆದ ಕಾರಣದಿಂದ ರಷ್ಯಾ ದೇಶದಿಂದ ಯಾವ ಪ್ರತಿನಿಧಿಯು ಭಾರತದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದೆ. ಕಾಯಂ ಸದಸ್ಯತ್ವ ಮಂಡಳಿ ವಿಚಾರದಲ್ಲಿ ಚೀನಾ ದೇಶವು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ ವಿಷಯದ ಬಗ್ಗೆ ಮಾತನಾಡಿದ ರಷ್ಯಾ ರಾಯಭಾರಿ, ಶಿಮ್ಲಾ ಮತ್ತು ಲಾಹೋರ್ ಒಪ್ಪಂದದ ಆಧಾರದ ಮೇಲೆ ಯಾವುದೇ ವಿಚಾರವಾಗಲಿ ಭಾರತ ಹಾಗೂ ಪಾಕಿಸ್ತಾನ ದೇಶಗಳ ದ್ವಿಪಕ್ಷೀಯ ಮಾತುಕತೆಗಳ ಮೂಲಕ ಮಾತನಾಡ ಬಹುದಾಗಿದೆ, ಈ ವಿಚಾರದಲ್ಲಿ ನಮ್ಮ ದೇಶ ಅಷ್ಟೇ ಅಲ್ಲ ಬೇರೆ ಯಾವ ದೇಶಗಳು ಮೂಗು ತೂರಿಸುವುದು ಸೂಕ್ತವಲ್ಲ ಹಾಗೂ ನ್ಯಾಯವಲ್ಲ ಎಂದು ಹೇಳಿಕೆ ನೀಡಿದ್ದಾರೆ.