ರಾಜಾ ಸಿಂಗ್ ಗೆ ಗೃಹ ಬಂಧನ ! ಕಾರಣ ಗೊತ್ತಾ?ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ತೆಲಂಗಾಣ ರಾಜ್ಯದಲ್ಲಿ ಭೈಂಸ ನಗರದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಇದರ ಬೆನ್ನಲ್ಲೆ ಬಿಜೆಪಿ ಪಕ್ಷದ ಶಾಸಕ ರಾಜ ಸಿಂಗ್ ರವರಿಗೆ ಗೃಹ ಬಂಧನ ವಿಧಿಸಲಾಗಿದ್ದು, ತೆಲಂಗಾಣ ಸರ್ಕಾರದ ಈ ನಡೆಯ ವಿರುದ್ಧ ಬಿಜೆಪಿ ಪಕ್ಷ ಹಾಗೂ ಕಾರ್ಯಕರ್ತರು ಭಾರೀ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಘಟನೆಗೆ ಕಾರಣಗಳೇನು? ಹಾಗೂ ವಿಷಯದ ಮೂಲಗಳ ಬಗ್ಗೆ ತಿಳಿಯಲು ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ದಿನಗಳ ಹಿಂದೆ ತೆಲಂಗಾಣದ ಪ್ರಮುಖ ಸಂಘ ಸಂಸ್ಥೆಗಳಲ್ಲಿ ಒಂದಾದ ಹಿಂದೂ ವಾಹಿನಿ ಎಂಬ ಸಂಸ್ಥೆಯ ಕಾರ್ಯಕರ್ತರ ಮೇಲೆ ದಾಳಿ ನಡೆದಿತ್ತು. ಈ ವಿಷಯ ತಿಳಿದ ಕೂಡಲೇ ಹಿಂದೂ ವಾಹಿನಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಲು ಹೊರಟಿದ್ದಾರೆ, ಇವರ ನೇತೃತ್ವವನ್ನು ತೆಲಂಗಾಣ ರಾಜ್ಯದ ಏಕೈಕ ಬಿಜೆಪಿ ಪಕ್ಷದ ಶಾಸಕ ರಾಜಾ ಸಿಂಗ್ ರವರು ಹೊತ್ತು ಕೊಂಡಿದ್ದರು. ಇದಕ್ಕಾಗಿ ಪೊಲೀಸರ ಬಳಿ ಅನುಮತಿ ಪಡೆದುಕೊಂಡು ಹೊರಟಿರುವ ಸಂದರ್ಭದಲ್ಲಿ ಪೊಲೀಸರು ಭಾರಿ ಸಂಖ್ಯೆಯಲ್ಲಿ ರಾಜಾ ಸಿಂಗ್ ರವರ ಮನೆ ಮುಂದೆ ಜಮಾವಣೆಯಾಗಿ ರಾಜ ಸಿಂಗ್ ರವರನ್ನು ಗೃಹಬಂಧನದಲ್ಲಿ ಇಟ್ಟಿದ್ದಾರೆ.

ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಪಕ್ಷ ಹಾಗೂ ಕಾರ್ಯಕರ್ತರು ತೆಲಂಗಾಣ ಪಕ್ಷದ ರಾಜಕೀಯ ನಾಯಕರು ಹಾಗೂ AIMIM ಪಕ್ಷದ ಹಲವಾರು ನಾಯಕರು ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಆದರೆ ನಮ್ಮ ಹುಲಿ ರಾಜ ಸಿಂಗ್ ರವರು ಸ್ಥಳಕ್ಕೆ ಭೇಟಿ ನೀಡಲು ಪೊಲೀಸರು ಬಿಡುತ್ತಿಲ್ಲ. ಮನೆಯಿಂದ ಹೊರಗಡೆ ಕೂಡ ಬರಲು ಬಿಡದೇ ಗೃಹ ಬಂಧನದಲ್ಲಿ ಇಟ್ಟು ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಘಟನೆ ನಡೆಯುವ ಮುನ್ನ ರಾಜಾ ಸಿಂಗ್ ರವರು ಟ್ವಿಟ್ಟರ್ನಲ್ಲಿ ತೆಲಂಗಾಣದಲ್ಲಿ ನಡೆದ ಹಿಂಸಾತ್ಮಕ ಘಟನೆಗೆ ನೇರವಾಗಿ ಓವೈಸಿ ನೇತೃತ್ವದ AIMIM ಪಕ್ಷವೇ ಕಾರಣ ಎಂದು ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಕೆಲವೇ ಕೆಲವು ಗಂಟೆಗಳಲ್ಲಿ ರಾಜ ಸಿಂಗ್ ರವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

Facebook Comments

Post Author: Ravi Yadav