ರೊಚ್ಚಿಗೆದ್ದ ಶಿವಸೇನಾ ಕಾರ್ಯಕರ್ತರು ! ಒಂದೆಡೆ ಶಿವಸೇನೆ ಟುಕ್ದೆ ಗ್ಯಾಂಗಿಗೆ ಶಿಕ್ಷೆ ನೀಡಿ ಎನ್ನುತ್ತಿದ್ದರೆ ಮತ್ತೊಂದೆಡೆ ಆದಿತ್ಯ ಠಾಕ್ರೆ ಮಾಡಲು ಹೊರಟಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ದೇಶದಲ್ಲಿ ಹಲವಾರು ವರ್ಷಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ತುಕಡೆ ಗ್ಯಾಂಗ್ ಗಳ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜಕೀಯ ನಾಯಕರನ್ನು ಹೊರತು ಪಡಿಸಿದರೇ ರಾಷ್ಟ್ರೀಯತೆಯನ್ನು ಸಾಮಾನ್ಯ ಜನರು ಪಕ್ಷಾತೀತವಾಗಿ ಒಪ್ಪಿಕೊಂಡು ಟುಕ್ದೆ ಗ್ಯಾಂಗ್ ವಿರುದ್ಧ ಒಂದಾಗಿದ್ದಾರೆ.

ಇದಕ್ಕೆ ಸ್ಪಷ್ಟ ನಿದರ್ಶನ ವೆಂದರೇ ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ರವರ ಚಪಕ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್. ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿರುವಾಗ ಇದ್ದಕ್ಕಿದ್ದ ಹಾಗೇ ಶಿವಸೇನಾ ಪಕ್ಷದ ಮುಖವಾಣಿಯಲ್ಲಿ ಉದ್ಧವ್ ಠಾಕ್ರೆ ಅವರು ಅಮಿತ್ ಷಾ ರವರಿಗೆ ಬಹಿರಂಗ ಸವಾಲು ಎಸೆದಿದ್ದಾರೆ, ನಿಮ್ಮ ಹೇಳಿಕೆಗಳನ್ನು ಕೇಳಿ ಸಾಕಾಗಿದೆ, ತುಕಡಿ ಗ್ಯಾಂಗ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇದು ಸರಿಯಾದ ಸಮಯ. ನಿಮ್ಮ ಆಕ್ರೋಶ ಕೇವಲ ಹೇಳಿಕೆಗಷ್ಟೇ ಸೀಮಿತವಾಗಿರದೇ ಕಠಿಣ ಕ್ರಮ ಕೈಗೊಳ್ಳಿ ಎಂದು ಸವಾಲು ಎಸೆದಿದ್ದರು. ಇದರ ಬೆನ್ನಲ್ಲೇ ಆದಿತ್ಯ ಠಾಕ್ರೆ ಯವರ ನಡೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ವಿರುದ್ಧ ಸ್ವತಃ ಶಿವಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ಮಾಡುತ್ತಿರುವುದು ಏನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ತುಕಡೆ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದುಕೊಂಡಿರುವ ವಿದ್ಯಾರ್ಥಿಗಳ ತಂಡ ಹಾಗೂ ಕೆಲವು ತಾರೆಯರು ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೇ ಕಾರಣಕ್ಕಾಗಿ ಮುಂಬೈನಲ್ಲಿ ಬಹು ದೊಡ್ಡ ವೇದಿಕೆ ಸಿದ್ಧಪಡಿಸಿರುವ ತುಕಡೆ ಗ್ಯಾಂಗ್ ನ ಉಮರ್ ಖಾಲಿದ್ ಹಾಗೂ ಬೆಂಬಲಿಗರು ಸೇರಿದಂತೆ ಹಲವಾರು ನಾಯಕರ ಜೊತೆ ಆದಿತ್ಯ ಠಾಕ್ರೆಯವರು ವೇದಿಕೆ ಹಂಚಿಕೊಂಡು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಲು ಸಿದ್ದರಾಗಿದ್ದಾರೆ. ಹೌದು ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಮಸೂದೆಯನ್ನು ವಿರೋಧಿಸುತ್ತಾರೆ ಎಂಬ ಟ್ಯಾಗ್ ಲೈನ್ ಬಳಸಿಕೊಂಡಿರುವ ಈ ಸಭೆಯಲ್ಲಿ ಬಾಳಠಾಕ್ರೆ ರವರ ಮೊಮ್ಮಗ ಆದಿತ್ಯ ಠಾಕ್ರೆ ಅವರು ಮುಂದಾಳತ್ವ ವಹಿಸಿ ತುಕಡೆ ಗ್ಯಾಂಗ್ ಗಳ ಪರವಾಗಿ ನಿಲ್ಲಲಿದ್ದಾರೆ. ಆದಿತ್ಯ ಠಾಕ್ರೆ ಅವರ ಈ ನಡೆ ಶಿವಸೇನಾ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

Facebook Comments

Post Author: RAVI