ದ್ರಾವಿಡ್ ಹುಟ್ಟು ಹಬ್ಬದ ಶುಭಾಶಯದ ಟ್ವೀಟ್ಟ್ ನಲ್ಲಿಯೂ ಸಿಕ್ಸರ್ ಸಿಡಿಸಿದ ವೀರೇಂದ್ರ ಸೆಹ್ವಾಗ್ ! ಶುಭಾಶಯ ಕೋರಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ಇಡೀ ದೇಶವೇ ಭಾರತ ಕ್ರಿಕೆಟ್ ತಂಡದ ಗೋಡೆ ಎಂದು ಕರೆಯುವ ಕನ್ನಡಿಗ ರಾಹುಲ್ ದ್ರಾವಿಡ್ ರವರ ಹುಟ್ಟು ಹಬ್ಬ. ಕ್ರಿಕೆಟ್ ಜಗತ್ತಿನಲ್ಲಿಯೇ ಅಜಾತಶತ್ರು ಎಂಬ ಹೆಸರನ್ನು ಪಡೆದು ಕೊಂಡಿದ್ದ ರಾಹುಲ್ ದ್ರಾವಿಡ್ ರವರ ಹುಟ್ಟು ಹಬ್ಬದ ಕಾರಣ ಪ್ರಪಂಚದ ಮೂಲೆ ಮೂಲೆಯಿಂದ ಕ್ರಿಕೆಟ್ ಆಟಗಾರರು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ರಾಹುಲ್ ದ್ರಾವಿಡ್ ರವರ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅದೇ ರೀತಿ ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ರವರು ಹುಟ್ಟು ಹಬ್ಬದ ಶುಭಾಶಯ ಕೋರುವ ಹೇಳಿಕೆಯಲ್ಲಿಯೂ ಕೂಡ ಸಿಕ್ಸರ್ ಸಿಡಿಸಿ ಸದ್ದು ಮಾಡಿದ್ದಾರೆ.

ತಮ್ಮ ಕ್ರಿಕೆಟ್ ಜೀವನ ಅಂತ್ಯಗೊಳಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನವೂ ಸಿಕ್ಸರ್ ಬಾರಿಸುವ ವೀರೇಂದ್ರ ಸೆಹ್ವಾಗ್ ರವರು 47ನೇ ವರ್ಷಕ್ಕೆ ಕಾಲಿಡುತ್ತಿರುವ ರಾಹುಲ್ ದ್ರಾವಿಡ್ ರವರ ಫೋಟೋ ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ, ನನಗೆ ತಿಳಿದಿರುವ ಮಟ್ಟಕ್ಕೆ ಅಡುಗೆ ಮನೆಯಲ್ಲಿ ಇರುವ ಮಿಕ್ಸರ್, ಗ್ರೈಂಡರ್ ಗಳಲ್ಲಿ ಮಾತ್ರ ರುಬ್ಬವುದು ಸಾಧ್ಯ ಎಂದು ನಾನು ತಿಳಿದುಕೊಂಡಿದ್ದೆ, ಆದರೆ ಕ್ರಿಕೆಟ್ ಪಿಚ್ ನಲ್ಲಿಯೂ ಕೂಡ ಇದು ಸಾಧ್ಯ ಎಂದು ರಾಹುಲ್ ದ್ರಾವಿಡ್ ರವರು ನನಗೆ ಕಲಿಸಿದರು ಎಂದು ಹೇಳಿದ್ದಾರೆ. ಅಂದರೆ ಎದುರಾಳಿ ತಂಡದ ಆಟಗಾರರನ್ನು ಕೊನೆಯವರೆಗೂ ಕಾಡಿ ರುಬ್ಬುತ್ತಿದ್ದರು ಎಂದು ಹೇಳಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

Facebook Comments

Post Author: Ravi Yadav