ಸಂಸತ್ತಿನಲ್ಲಿ ಐತಿಹಾಸಿಕ ನಿರ್ಧಾರ: ದೇಶವೇ ಮೆಚ್ಚುವ ನಿರ್ಧಾರ ತೆಗೆದುಕೊಂಡ ಮೋದಿ! ಖಡಕ್ ಆದೇಶ ಏನು ಗೊತ್ತಾ?

ಸಂಸತ್ತಿನಲ್ಲಿ ಐತಿಹಾಸಿಕ ನಿರ್ಧಾರ: ದೇಶವೇ ಮೆಚ್ಚುವ ನಿರ್ಧಾರ ತೆಗೆದುಕೊಂಡ ಮೋದಿ! ಖಡಕ್ ಆದೇಶ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ದೇಶ ಸ್ವತಂತ್ರ ಕಂಡು ಸಂವಿಧಾನ ರಚನೆಯಾಗಿ ಸಂಸದರಿಗೆ ಹಾಗೂ ವಿವಿಧ ಹುದ್ದೆಯ ರಾಜಕಾರಣಿಗಳಿಗೆ ನೀಡುತ್ತಿದ್ದ ಸೌಲಭ್ಯಗಳ ಕುರಿತು ಚರ್ಚೆ ನಡೆಯುತ್ತಲೇ ಬಂದಿದೆ. ಅದರಲ್ಲಿ ಒಂದು ನಮ್ಮ ಸಂಸತ್ ಎಂಬ ದೇಗುಲದಲ್ಲಿ ನೀಡುತ್ತಿದ್ದ ಊಟ ಹಾಗೂ ಉಪಹಾರಗಳ ಕುರಿತು. ಹೌದು, ಸಂಸತ್ ಆವರಣದಲ್ಲಿ ಇರುವ ಕ್ಯಾಂಟೀನ್ ನಲ್ಲಿ ಎಲ್ಲ ಸಂಸದರಿಗೂ ಸಬ್ಸಿಡಿ ಸಹಿತ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗುತಿತ್ತು.

ಎಷ್ಟೋ ಜನರು ಸಂಸದರು ಅತಿ ಬಡವರು ಅದೇ ಕಾರಣಕ್ಕೆ ಸಬ್ಸಿಡಿ ನೀಡಲಾಗುತ್ತಿದೆ ಎಂದೆಲ್ಲಾ ಟೀಕೆ ಮಾಡಿದರೂ ಯಾವುದೇ ಸರ್ಕಾರ ಇದರ ಬಗ್ಗೆ ತಲೆಕೆಡಿಸುಕೊಂಡು ಇರಲಿಲ್ಲ. ಇಲ್ಲಿನ ವ್ಯವಸ್ಥೆ ಹೇಗಿತ್ತು ಎಂದರೇ, ಕೇವಲ ಎರಡು ರೂ ಗೆ ರೋಟಿ ಸಿಗುತಿತ್ತು. ಇನ್ನು ನಾವು ನೂರಾರು ರೂಪಾಯಿ ಕೊಟ್ಟು ತಿನ್ನುವ ದಾಲ್ ಕೇವಲ 5 ರೂ ಅಷ್ಟೇ ಎಂದರೇ ನೀವು ನಂಬಲೇಬೇಕು. ಅಷ್ಟೇ ಯಾಕೇ ಅನ್ನ ಸಾಂಬರ್ ನ ಬೆಲೆ ಕೇವಲ 7 ರೂ, ಮಸಾಲಾ ದೋಸೆ ಬೆಲೆ 18 ರೂ ಹಾಗೂ ಚಿಕನ್ ಕೇವಲ 50 ರೂ ಗೆ ನೀಡಲಾಗುತಿತ್ತು. ಇದೆಲ್ಲ ಸಾಮಾನ್ಯ ಜನರಿಗೆ ಅಲ್ಲ ಸ್ವಾಮಿ, ಲಕ್ಷಾಂತರ ಸಂಬಳ ಪಡೆಯುವ ಸಂಸದರಿಗೆ ತಗುಲುವ ವೆಚ್ಚ. ಉಳಿದ ಹಣವನ್ನು ಸರ್ಕಾರ ತನ್ನ ಬೊಕ್ಕಸದಿಂದ ಸಬ್ಸಿಡಿ ರೂಪದಲ್ಲಿ ನೀಡ ಬೇಕಾಗುತ್ತಿತ್ತು.

ಇದೇ ಕಾರಣಕ್ಕೆ ಇದೀಗ ನರೇಂದ್ರ ಮೋದಿ ರವರ ನೇತೃತ್ವದ ಸರ್ಕಾರ ಇದೀಗ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇನ್ನು ಮುಂದೆ ಯಾವುದೇ ಕ್ಯಾಂಟೀನ್ ಗಳಲ್ಲಿ ಯಾವುದೇ ಆಹಾರಕ್ಕೂ ಸರ್ಕಾರದ ಕಡೆ ಇಂದ ಒಂದು ರೂ ಕೂಡ ಸಬ್ಸಿಡಿ ನೀಡದೇ ಇರಲು ನಿರ್ಧಾರ ಮಾಡಿ, ಸಂಸತ್ ನಲ್ಲಿ ಸ್ಪೀಕರ್ ಓಂ ಬಿರ್ಲಾ ರವರು ಘೋಷಣೆ ಮಾಡಿದರು, ಹಾಗೂ ಮೋದಿ ರವರ ಈ ನಿರ್ಧಾರವನ್ನು ಎಲ್ಲ ಸಂಸದರು ಅವಿರೋಧವಾಗಿ ಒಪ್ಪಿಕೊಂಡು ಬಿಲ್ ಪಾಸ್ ಮಾಡಲು ಒಪ್ಪಿಗೆ ನೀಡಿದರು. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ 17 ಕೋಟಿ ಹಣ ಪೋಲಾಗುತಿತ್ತು. ಇದರ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆ ನಡೆಸಲಾಗುತ್ತಿತ್ತು. ಹಲವಾರು ಬಾರಿ ದೇಶದ ಕಡು ಬಡವರು ಇಲ್ಲಿ ಊಟ ಮಾಡುತ್ತಾರೆ ಅದೇ ಕಾರಣಕ್ಕೆ ಸರ್ಕಾರ ಸಬ್ಸಿಡಿ ನೀಡುತ್ತಿದೆ ಎಂದು ಎಲ್ಲರೂ ವ್ಯಂಗ್ಯವಾಡಿದ್ದರು, ಆದರೆ ಇದೀಗ ಎಲ್ಲ ವ್ಯಂಗ್ಯ ಗಳನ್ನೂ ಕೇಂದ್ರ ಸರ್ಕಾರ ತೆಗೆದುಹಾಕಿದೆ.