ಬಿಗ್ ನ್ಯೂಸ್: ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟಕ್ಕೆ ಬಿಜೆಪಿ ಪಕ್ಷದಿಂದ ಹೊಸ ಹೆಸರು ! ಶಿವಸೇನೆ ತಲೆಬಾಗುವುದು ಖಚಿತ?

ಇದೀಗ ಮಹಾರಾಷ್ಟ್ರ ರಾಜ್ಯವು ಅತಂತ್ರ ಸರ್ಕಾರದ ಭೀತಿಯನ್ನು ಎದುರಿಸುತ್ತಿದೆ. ಎಲ್ಲವೂ ಚುನಾವಣಾ ಪೂರ್ವ ಮೈತ್ರಿಯಲ್ಲಿ ಅಂದು ಕೊಂಡಂತೆ ನಡೆದಿದ್ದರೆ ಇಷ್ಟೊತ್ತಿ ಗಾಗಲೇ ಶಿವಸೇನಾ ಪಕ್ಷದ ಬೆಂಬಲವನ್ನು ಪಡೆದು ಕೊಂಡು ದೇವೆಂದ್ರ ಫಡ್ನವಿಸ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕಾರ ಮಾಡಿ ತಮ್ಮ ಆಡಳಿತವನ್ನು ಆರಂಭ ಮಾಡುತ್ತಿದ್ದರು. ಆದರೆ ಶಿವಸೇನಾ ಪಕ್ಷವು ಮುಖ್ಯಮಂತ್ರಿ ಕುರ್ಚಿಯನ್ನು ಏರಲು ಪ್ರಯತ್ನ ಪಟ್ಟಿರುವ ಕಾರಣ ಇಲ್ಲಿಯವರೆಗೂ ಸರ್ಕಾರ ರಚಿಸುವ ಪ್ರಯತ್ನಕ್ಕೆ ಯಾವ ಪಕ್ಷಗಳು ಕೈ ಹಾಕಿಲ್ಲ.

ಈಗಾಗಲೇ ಶಿವಸೇನಾ ಪಕ್ಷವು ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಳ್ಳಲು ಮುಂದೆ ಹೋಗಿ ತದ ನಂತರ ಎರಡು ಪಕ್ಷಗಳು ಛೀಮಾರಿ ಹಾಕಿ ಹೊರ ಕಳಿಸಿದ ನಂತರ ಇದೀಗ ಆರ್ಎಸ್ಎಸ್ ಸಂಸ್ಥೆಯ ಮೊರೆಹೋಗಿದೆ. ಆದರೆ ಆರೆಸ್ಸೆಸ್ ಸಂಸ್ಥೆಯು ಯಾವುದೇ ಅಧಿಕೃತ ಹೇಳಿಕೆ ಯನ್ನು ನೀಡದೆ ಶಿವಸೇನಾ ಪಕ್ಷವನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಇಂದು ದೇವೇಂದ್ರ ಫಡ್ನವಿಸ್ ಅವರು ಇದೇ ವಿಷಯದ ಕುರಿತು ಆರೆಸ್ಸೆಸ್ ಸಂಸ್ಥೆಯ ಜೊತೆ ಮಾತುಕತೆ ನಡೆಸಿದ ಬಳಿಕ ಇದೀಗ ಹೊಸದೊಂದು ಭಾರಿ ಸುದ್ದಿ ಹೊರಬಿದ್ದಿದೆ.

ಈ ಸುದ್ದಿ ಕೇಳಿದರೆ ನೀವು ಅಚ್ಚರಿ ಪಡುತ್ತೀರಾ. ಯಾಕೆಂದರೆ ಬಿಜೆಪಿ ಪಕ್ಷವು ಶಿವಸೇನಾ ಪಕ್ಷದ ಮನವೊಲಿಸಿ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ತನ್ನಲ್ಲೇ ಇಟ್ಟುಕೊಳ್ಳಲು ಎರಡು ಹೊಸ ರೀತಿಯ ಪ್ಲಾನ್ ಗಳನ್ನು ಮಾಡಿದೆ ಎನ್ನಲಾಗುತ್ತಿದೆ. ಈ ಪ್ಲಾನ್ ಗಳಲ್ಲಿ ಮೊದಲನೆಯದಾಗಿ ಶಿವಸೇನಾ ಪಕ್ಷವು ಒಂದು ವೇಳೆ ಐದು ವರ್ಷಗಳ ಕಾಲ ದೇವೇಂದ್ರ ಫಡ್ನವಿಸ್ ರವರನ್ನು ಮುಖ್ಯಮಂತ್ರಿ ಮಾಡಲು ಒಪ್ಪಿಗೆ ನೀಡದಿದ್ದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಅಜಾತಶತ್ರು ಎಂದೇ ಖ್ಯಾತಿ ಪಡೆದು ಕೊಂಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಆಲೋಚನೆಗೆ ಕೈ ಹಾಕಿದೆ.

ಮೊದಲಿನಿಂದಲೂ ನಿತಿನ್ ಗಡ್ಕರಿ ರವರ ಮಾತಿಗೆ ಇಲ್ಲಿಯವರೆಗೂ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ ಹಾಗೂ ಎನ್ಸಿಪಿ ಪಕ್ಷಗಳು ಯಾವುದೇ ರೀತಿಯ ತಕರಾರು ತೆಗೆದಿಲ್ಲ. ಹೀಗಿರುವಾಗ ಒಂದು ವೇಳೆ ನಿತಿನ್ ಗಡ್ಕರಿ ಅವರು ಮುಖ್ಯಮಂತ್ರಿಯಾದರೇ ಶಿವಸೇನಾ ಪಕ್ಷ ವಿರೋಧ ಮಾಡುವುದಿಲ್ಲ ಎಂದು ಆರೆಸ್ಸೆಸ್ ಸಂಸ್ಥೆಯು ಬಲವಾಗಿ ನಂಬಿದೆ. ಅಷ್ಟೇ ಅಲ್ಲದೆ ಒಂದು ವೇಳೆ ಶಿವಸೇನಾ ಪಕ್ಷವು ತನ್ನ ಮಿತಿಯನ್ನು ಮೀರಿ ನಿತಿನ್ ಗಡ್ಕರಿ ರವರು ಐದು ವರ್ಷಗಳ ಕಾಲ ಮುಖ್ಯಮಂತ್ರಿ ಯಾಗುವುದಕ್ಕೂ ವಿರೋಧ ಮಾಡಿದ್ದಲ್ಲಿ, ಬಿಜೆಪಿ ಪಕ್ಷವು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ದವಾಗಿ ಎಂದು ಆರ್ ಎಸ್ ಎಸ್ ಸಂಘ ಸಂಸ್ಥೆಯು ಈಗಾಗಲೇ ದೇವಿಂದ್ರ ಪಡ್ನವಿಸ್ ರವರಿಗೆ ಆದೇಶ ಹೊರಡಿಸಿದೆ.

Facebook Comments

Post Author: Ravi Yadav