ಎಂ ಟಿ ಬಿ ನಾಗರಾಜ್ ಗೆ ಗುಡ್ ನ್ಯೂಸ್ ! ಸೋಲನ್ನು ಒಪ್ಪಿಕೊಂಡರೇ ಡಿಕೆ ಶಿವಕುಮಾರ್??

ಎಂ ಟಿ ಬಿ ನಾಗರಾಜ್ ಗೆ ಗುಡ್ ನ್ಯೂಸ್ ! ಸೋಲನ್ನು ಒಪ್ಪಿಕೊಂಡರೇ ಡಿಕೆ ಶಿವಕುಮಾರ್??

ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಲು ಹಲವಾರು ಪ್ರಯತ್ನಗಳನ್ನು ಮಾಡಿದ್ದರು. ಹಲವಾರು ಬಾರಿ ಇನ್ನೇನು ಸರ್ಕಾರ ಉರುಳಿತು ಎನ್ನುವಷ್ಟರಲ್ಲಿ ಮೈತ್ರಿ ಉಳಿಸುವ ಮೂಲಕ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ಡಿ.ಕೆ ಶಿವಕುಮಾರ್ ರವರು ಇದೀಗ ಮಹತ್ವದ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಸವಾಲು ಎದುರಾದರೇ ಬಿಜೆಪಿ ಪಕ್ಷ ಸುಲಭ ಗೆಲುವು ಕಾಣುವ ತವಕದಲ್ಲಿ ಇದೆ.

ಹೌದು, ಮೈತ್ರಿ ಸರ್ಕಾರ ಉರುಳಿದಾಗ ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದ ಡಿ.ಕೆ ಶಿವಕುಮಾರ್ ಅವರು ಎಲ್ಲಾ ಅನರ್ಹ ಶಾಸಕರಿಗೂ ಉಪ ಚುನಾವಣೆಯಲ್ಲಿ ಸೋಲನ್ನು ತೋರಿಸುವುದಾಗಿ ಪಣತೊಟ್ಟಿದ್ದರು. ಅದರಲ್ಲಿಯೂ ಸಿದ್ದರಾಮಯ್ಯ ರವರ ಆಪ್ತ ಬಳಗದಲ್ಲಿ ಗುರುತಿಸಿ ಕೊಂಡಿದ್ದ ಎಂಟಿಬಿ ನಾಗರಾಜ್ ರವರ ವಿರುದ್ಧ ಕಿಡಿಕಾರಿದ ಡಿ.ಕೆ ಶಿವಕುಮಾರ್ ರವರು, ರಾಜೀನಾಮೆ ನೀಡಿದ ಸಂದರ್ಭದಲ್ಲಿ ನಮ್ಮ ನಿಮ್ಮ ಮುಂದಿನ ಭೇಟಿ ಹೊಸಕೋಟೆ ಅಖಾಡದಲ್ಲಿ. ಅಲ್ಲಿ ನೋಡಿ ಕೊಳ್ಳೋಣ ಎಂದು ಸವಾಲೆಸೆದು ಶೇಕಡ ನೂರಕ್ಕೆ ನೂರರಷ್ಟು ಸೋಲಿಸಿ ತೀರುತ್ತೇನೆ ಎಂದು ಶಪಥ ಮಾಡಿದ್ದರು.

ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಎಂಟಿಬಿ ನಾಗರಾಜ್ ರವರು ಸಹ ಯಾವುದೇ ಕಾರಣಕ್ಕೂ ಜಗ್ಗುವ ಸೂಚನೆಗಳು ನೀಡಿರಲಿಲ್ಲ. ಹೊಸಕೋಟೆ ಅಖಾಡದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಎದುರಿಸಲು ಸಿದ್ಧರಿರುವುದಾಗಿ ಘೋಷಣೆ ಮಾಡಿ ಬಹಿರಂಗವಾಗಿ ತೊಡೆ ತಟ್ಟಿದ್ದರು. ಆದರೆ ಇದೀಗ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರ ಬಂದಿರುವ ಡಿ.ಕೆ ಶಿವಕುಮಾರ್ ಅವರು ಇದ್ದಕ್ಕಿದ್ದ ಹಾಗೆ ಎಂಟಿಬಿ ನಾಗರಾಜ್ ರವರ ವಿಷಯದಲ್ಲಿ ಉಲ್ಟಾ ಹೊಡೆದಿದ್ದಾರೆ. ಇದರಿಂದ ಡಿ.ಕೆ ಶಿವಕುಮಾರ್ ರವರು ಎಂಟಿಬಿ ನಾಗರಾಜ್ ರವರ ವಿರುದ್ಧ ಸ್ಪರ್ಧಿಸಲು ಸಾಧ್ಯವಾಗದೇ ಇರುವುದನ್ನು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಸಹ ಎಂಟಿಬಿ ನಾಗರಾಜ್ ರವರ ಬೆಂಬಲಿಗರಿಂದ ಕೇಳಿಬಂದಿವೆ.

ಹೊಸಕೋಟೆಯ ಉಪ ಚುನಾವಣೆಯ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್ ರವರು, ಇದರ ಕುರಿತು ಇಂದು ಮಾಧ್ಯಮ ದವರು ಪ್ರಶ್ನಿಸಿದಾಗ ಈಗ ನನಗೆ ಯಾವುದೇ ವಿಚಾರವು ಬೇಡ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿ ಮಾತು ಮುಗಿಸಿದ್ದಾರೆ. ಎಮ್ ಟಿ ಬಿ ನಾಗರಾಜ್ ರವರ ವಿಷಯದಲ್ಲಿ ಇದ್ದಕ್ಕಿದ್ದ ಹಾಗೆ ಡಿಕೆ ಶಿವಕುಮಾರ್ ಅವರು ಈ ರೀತಿ ಯುಟರ್ನ್ ಹೇಳಿಕೆ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲದೆ ಚುನಾವಣಾ ಉಸ್ತುವಾರಿಯನ್ನು ತಾನು ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದು ಪರೋಕ್ಷವಾಗಿ ಸಾರಿದ್ದಾರೆ. ಇನ್ನು ಕೆಲವು ರಾಜಕೀಯ ಪಂಡಿತರು ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಸೂಕ್ತ ಸ್ಥಾನಮಾನ ನೀಡುವ ವರೆಗೂ ಪಕ್ಷದಲ್ಲಿ ಅನಾರೋಗ್ಯದ ನೆಪ ಹೇಳಿ ಮೌನವಾಗಿರಲು ನಿರ್ಧಾರ ಮಾಡಿದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.