ನೀವೇ ಮುಖ್ಯಮಂತ್ರಿ, ಬನ್ನಿ ಮೈತ್ರಿ ಮಾಡಿಕೊಳ್ಳೋಣ ಎಂದ ಕಾಂಗ್ರೆಸ್ ಪಕ್ಷಕ್ಕೆ ಶಿವಸೇನೆಯ ಶಾಕಿಂಗ್ ಉತ್ತರ ! ಬಾರಿ ಮುಜುಗರಕ್ಕೆ ಒಳಗಾದ ಕಾಂಗ್ರೆಸ್

ನೀವೇ ಮುಖ್ಯಮಂತ್ರಿ, ಬನ್ನಿ ಮೈತ್ರಿ ಮಾಡಿಕೊಳ್ಳೋಣ ಎಂದ ಕಾಂಗ್ರೆಸ್ ಪಕ್ಷಕ್ಕೆ ಶಿವಸೇನೆಯ ಶಾಕಿಂಗ್ ಉತ್ತರ ! ಬಾರಿ ಮುಜುಗರಕ್ಕೆ ಒಳಗಾದ ಕಾಂಗ್ರೆಸ್

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳ ನಡುವಿನ ಕಾಳಗ ತಾರಕಕ್ಕೆ ಏರಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇದರ ಬೆನ್ನಲ್ಲೇ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆಯಲು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಸರ್ಕಾರ ರಚನೆ ಮಾಡಲು ಕಸರತ್ತು ನಡೆಸುತ್ತಿವೆ. ಆದರೆ ಈ ಎರಡು ಪಕ್ಷಗಳಿಗೆ ಶಿವಸೇನೆ ಶಾಕಿಂಗ್ ಉತ್ತರ ನೀಡಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಶಿವಸೇನಾ ಪಕ್ಷವು ಬಿಜೆಪಿ ಪಕ್ಷದ ಜೊತೆ ಸರ್ಕಾರವನ್ನು ರಚಿಸ ಬೇಕಾದರೆ ಎರಡುವರೆ ವರ್ಷಗಳ ಕಾಲ ಮುಖ್ಯಮಂತ್ರಿ ಕುರ್ಚಿಯನ್ನು ತನಗೆ ನೀಡಬೇಕು ಎಂದು ಪಟ್ಟು ಹಿಡಿದು ಕುಳಿತಿದೆ. ಮತ್ತೊಂದೆಡೆ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದರೂ ನೂರಕ್ಕೂ ಹೆಚ್ಚು ಸ್ಥಾನ ಗಳಿಸಿರುವ ಬಿಜೆಪಿ ಪಕ್ಷವು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದು ಸಾಧ್ಯವಿಲ್ಲ. ಬೇಕಿದ್ದರೆ ಆದಿತ್ಯ ಠಾಕ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಐದು ವರ್ಷಗಳ ಕಾಲ ನೀಡುತ್ತೇವೆ ಎಂದು ಭರವಸೆ ನೀಡಿ ಮೈತ್ರಿ ಮಾಡಿಕೊಳ್ಳಲು ಆಹ್ವಾನ ನೀಡಿದ್ದಾರೆ.

ಆದರೆ ಇದಕ್ಕೆ ಒಪ್ಪಿಗೆ ನೀಡದೇ ಶಿವಸೇನಾ ಪಕ್ಷವು ಫಲಿತಾಂಶ ಪ್ರಕಟಗೊಂಡು ಹಲವಾರು ದಿನಗಳು ಕಳೆದರೂ ಸಹ ಸರ್ಕಾರ ರಚನೆಗೆ ಮುಂದಾಗಿಲ್ಲ. ಇದೇ ಸಮಯವನ್ನು ಬಳಸಿಕೊಂಡ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳು ಶಿವಸೇನಾ ಪಕ್ಷವನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟಿದ್ದವು. ಶಿವಸೇನಾ ಪಕ್ಷ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಬ್ಯಾಟ್ ಬೀಸಿದ್ದ ಎನ್ಸಿಪಿ ಪಕ್ಷ ತದ ನಂತರ, ಕಾಂಗ್ರೆಸ್ ಪಕ್ಷದ ಜೊತೆ ಸಂಪೂರ್ಣ ಚರ್ಚೆ ಮಾಡಿ ಒಟ್ಟಾಗಿ ಶಿವಸೇನಾ ಪಕ್ಷಕ್ಕೆ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುತ್ತೇವೆ ಬನ್ನಿ ನಮ್ಮ ಜೊತೆ ಸರ್ಕಾರ ರಚನೆ ಮಾಡಿ ಎಂದು ಆಹ್ವಾನ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ ಪಕ್ಷವು ಹುಲಿ ಎಂದಿಗೂ ಹುಲ್ಲು ತಿನ್ನುವುದಿಲ್ಲ, ಹೊಟ್ಟೆ ಹಸಿದ ಮಾತ್ರಕ್ಕೆ ಮಾಂಸ ಬಿಟ್ಟು ಹುಲ್ಲು ತಿನ್ನಲು ಸಾಧ್ಯವೇ. ಹಿಂದುತ್ವ ವನ್ನು ವಿರೋಧಿಸುವ ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆ ಶಿವಸೇನಾ ಪಕ್ಷವು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳು ಇಂದಿಗೂ ಇಲ್ಲ ಮುಂದೆ ಎಂದಿಗೂ ಬರುವುದಿಲ್ಲ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳಿಗೆ ಭಾರಿ ಮುಜುಗರ ಉಂಟಾಗಿದ್ದು, ಇದೇ ಮಾತನ್ನು ಬಿಜೆಪಿ ಪಕ್ಷದ ವಕ್ತಾರರು ಬಳಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಮುಜುಗರ ಉಂಟುಮಾಡಿದ್ದಾರೆ.