ಧರ್ಮದ ವಿಚಾರದಲ್ಲಿ ಬಹಿರಂಗವಾಗಿ ಸಿಡಿದೆದ್ದು ಮಮತಾ ಗೆ ಖಡಕ್ ಸಂದೇಶ ರವಾನೆ ಮಾಡಿದ ಬಂಗಾಳ ಸಂಸದೆ ! ಮಾಡಿದ್ದೇನು ಗೊತ್ತಾ??

ಧರ್ಮದ ವಿಚಾರದಲ್ಲಿ ಬಹಿರಂಗವಾಗಿ ಸಿಡಿದೆದ್ದು ಮಮತಾ ಗೆ ಖಡಕ್ ಸಂದೇಶ ರವಾನೆ ಮಾಡಿದ ಬಂಗಾಳ ಸಂಸದೆ ! ಮಾಡಿದ್ದೇನು ಗೊತ್ತಾ??

ಇಷ್ಟು ದಿವಸ ಹಿಂದೂ ಧರ್ಮ ಆಚರಣೆಗಳನ್ನು ಬಹಳ ಶ್ರದ್ಧೆಯಿಂದ ಆಚರಣೆ ಮಾಡುವ ಮೂಲಕ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಬಂಗಾಳದ ಸಂಸದೆ ನುಸ್ರತ್ ಜಹಾನ್ ರವರು ಇದೀಗ ಮತ್ತೊಮ್ಮೆ ಭಾರಿ ಸದ್ದು ಮಾಡಿದ್ದಾರೆ. ಈ ಬಾರಿ ಏಕಾ ಏಕಿ ಟಿಎಂಸಿ ಪಕ್ಷದ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವರ ವಿರುದ್ಧ ತಿರುಗಿ ಬಿದ್ದಿರುವ ಅದೇ ಪಕ್ಷದ ಸಂಸದೆ ನುಸ್ರತ್ ಜಹಾನ್ ರವರು ತಾನು ಸರ್ವ ಧರ್ಮಗಳನ್ನು ಸಮಾನತೆಯನ್ನು ಕಾಣುತ್ತೇನೆ ಎಂದು ಪ್ರತಿ ಬಾರಿಯೂ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದ ದಾರಿಯಲ್ಲಿ ಮತ್ತೊಮ್ಮೆ ನಡೆಯುತ್ತಿದ್ದೇನೆ ಎಂದು ಸ್ಪಷ್ಟ ಸಂದೇಶವನ್ನು ಎಲ್ಲರಿಗೂ ಸಾರಿದ್ದಾರೆ. ತಾನೇ ಸರ್ವಾಧಿಕಾರಿ ಎಂದು ಮೆರೆಯುತ್ತಿದ್ದ ಮಮತಾ ಬ್ಯಾನರ್ಜಿ ಅವರ ಆದೇಶದ ವಿರುದ್ಧ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವ ನುಸ್ರತ್ ಜಹಾನ್ ರವರು ಮತ್ತೊಮ್ಮೆ ಸರ್ವಧರ್ಮಗಳ ಸಮಾನವೆಂದು ಪಟ್ಟು ಹಿಡಿದಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ ತಿಳಿಯಲು ಸಂಪೂರ್ಣವಾಗಿ ಓದಿ, ಸುದ್ದಿಯನ್ನು ಶೇರ್ ಮಾಡುವ ಮೂಲಕ ಎಲ್ಲರಿಗೂ ತಲುಪಿಸಿ.

ಪಶ್ಚಿಮ ಬಂಗಾಳದಲ್ಲಿ ಇದೀಗ ದುರ್ಗಾಮಾತೆಯ ಆಚರಣೆಯ ವಿಚಾರದಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘ ಸಂಸ್ಥೆಯು ಭಾರಿ ಸದ್ದು ಮಾಡುತ್ತಿದೆ. ಇಷ್ಟು ದಿವಸ ದುರ್ಗಾ ಮಾತೆಯ ಪೂಜೆಯನ್ನು ಬಹಳ ವಿಜ್ರಂಭಣೆಯಿಂದ ಆಚರಣೆ ಮಾಡುತ್ತಿದ್ದ ಪಕ್ಷಿಮ ಬಂಗಾಳದ ಜನರು ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಸದರು ಹಾಗೂ ಬೆಂಬಲಿಗರು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಕಾರಣ ಯಾವುದೇ ಸಮಸ್ಯೆಗಳಿಲ್ಲದೆ ಮತ್ತಷ್ಟು ವಿಜೃಂಭಣೆಯಿಂದ ದುರ್ಗಾ ಮಾತೆಯ ಆರಾಧನೆ ಮಾಡುತ್ತಿದ್ದಾರೆ. ಇದನ್ನು ಕಂಡು ಸಹಿಸದ ಕೆಲವು ಟಿಎಂಸಿ ಪಕ್ಷದ ಗೂಂಡಾಗಳು, ಎಲ್ಲೆಂದರಲ್ಲಿ ದುರ್ಗಾ ಮಾತೆಯ ಆರಾಧಿಸುವವರ ಮೇಲೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಮನಬಂದಂತೆ ದಾಳಿಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಆರ್ಎಸ್ಎಸ್ ಕಾರ್ಯಕರ್ತ ನೊಬ್ಬನ ಸಂಪೂರ್ಣ ಕುಟುಂಬದ ಮೇಲೆ ದಾಳಿ ಮಾಡಿ ಇಹಲೋಕ ತ್ಯಜಿಸುವಂತಹ ಕೃತ್ಯವೆಸಗಿದ್ದಾರೆ.

ಈ ಒಂದು ಪ್ರಕರಣ ಸಾಲದು ಎಂಬಂತೆ ಇಡೀ ಪಕ್ಷಿಮ ಬಂಗಾಳದ ಬಹುತೇಕ ಸ್ಥಳಗಳಲ್ಲಿ ಹಲವಾರು ದಾಳಿಗಳು ನಡೆದಿವೆ. ಇದನ್ನು ಎಂದಿನಂತೆ ಬಿಜೆಪಿ ಪಕ್ಷವು ಖಂಡಿಸಿ ಪಕ್ಷಿಮ ಬಂಗಾಳದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತೀರುವ ಸಂದರ್ಭದಲ್ಲಿ, ಮಮತಾ ಬ್ಯಾನರ್ಜಿ ರವರು ಪಕ್ಷದ ಬಂಗಾಳದ ಎಲ್ಲಾ ಟಿಎಂಸಿ ಕಾರ್ಯಕರ್ತರು ಸೇರಿದಂತೆ ಎಲ್ಲಾ ಶಾಸಕರು ಹಾಗೂ ಸಂಸದರಿಗೆ ಅಚ್ಚರಿಯ ಸಂದೇಶವನ್ನು ಕಳುಹಿಸುವ ಮೂಲಕ ಹುಬ್ಬೇರಿಸುತ್ತಾರೆ. ಅದುವೇ, ಯಾರೊಬ್ಬರೂ ಈ ಪ್ರಕರಣದ ಕುರಿತು ಎಲ್ಲಿಯೂ ಮಾತನಾಡುವುದಾಗಲಿ ಅಥವಾ ಬೆಂಬಲ ನೀಡುವುದಾಗಲಿ ಮಾಡಬಾರದು ಎಂದು. ಇದನ್ನು ಕಂಡ ಟಿಎಂಸಿ ಪಕ್ಷದ ಎಲ್ಲಾ ಶಾಸಕರು ಸಂಸದರು ಹಾಗೂ ಕಾರ್ಯಕರ್ತರು ಬಹಿರಂಗವಾಗಿ ಯಾರ ಬೆಂಬಲಕ್ಕೆ ಹೋಗುವುದಿಲ್ಲ. ಮತ್ತೊಂದೆಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಎಂದಿನಂತೆ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನುಸ್ರತ್ ಜಹಾನ್ ರವರು, ಮಮತಾ ಬ್ಯಾನರ್ಜಿ ರವರ ಪರ ನಿಲ್ಲದೆ, ನ್ಯಾಯದ ಪರ ನಿಂತಿದ್ದಾರೆ.

ಹೌದು, ಮಮತಾ ಬ್ಯಾನರ್ಜಿ ರವರು ಆದೇಶಕ್ಕೆ ಎಲ್ಲಾ ಟಿಎಂಸಿ ಶಾಸಕರು ಹಾಗೂ ಸಂಸದರು ತಲೆಬಾಗಿದರೆ, ಸಂಸದೆ ನುಸ್ರತ್ ಜಹಾನ್ ರವರು ಮಾತ್ರ ಬಹಿರಂಗವಾಗಿ ತಪ್ಪು ಯಾರೇ ಮಾಡಿದರೂ ತಪ್ಪು. ಒಂದು ಧರ್ಮದ ಆಚರಣೆ ನಡೆಯುತ್ತಿದೆ ಎಂದರೆ ಮತ್ತೊಂದು ಧರ್ಮದವರು ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಅದುವೆ ಭವ್ಯ ಭಾರತ. ಸಹಾಯ ಮಾಡಲು ಸಾಧ್ಯವಾಗದೇ ಇದ್ದರೆ ತಾವು ಸುಮ್ಮನಿದ್ದರೆ ಅದುವೇ ದೊಡ್ಡ ಸಹಾಯ. ಧರ್ಮದ ವಿಚಾರದಲ್ಲಿ ಅಥವಾ ಯಾವುದೇ ಆಚರಣೆಯ ವಿಚಾರದಲ್ಲಿ ಯಾವುದೇ ಧರ್ಮದ ಜನರು ಮತ್ತೊಂದು ಧರ್ಮದ ಜನರ ಮೇಲೆ ಹಲ್ಲೆ ಮಾಡುವುದು ಖಂಡನೀಯ. ಈಗ ಮರಣವನ್ನು ಅಪ್ಪಿ ರುವುದು ಯಾವುದೇ ಸಂಘದ ನಾಯಕನಾಗಿ ಇರಬಹುದು ಆದರೆ ಆತನೊಬ್ಬ ಭಾರತೀಯ ಎಂಬುದನ್ನು ಮರೆಯಬಾರದು, ಈ ಕೂಡಲೇ ಈ ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಮತಾ ಬ್ಯಾನರ್ಜಿ ರವರ ಆದೇಶವನ್ನು ಮೀರಿ ಸಿಡಿದೆದ್ದಿದ್ದಾರೆ.