ರಫೈಲ್ ಪೂಜೆಯ ವಿರೋಧಿಗಳು ಅಡಗಿ ಕೊಳ್ಳುವಂತಹ ಹೇಳಿಕೆ ನೀಡಿದ ಪಾಕ್ ಸೇನಾ ವಕ್ತಾರ!

ಇದೀಗ ಎಲ್ಲಿ ನೋಡಿದರೂ ಆಯುಧ ಪೂಜೆ ಸದ್ದು ಮಾಡುತ್ತಿದೆ. ಇಷ್ಟು ದಿವಸ ಭಾರತೀಯ ಹಿಂದೂಗಳ ಮಹತ್ವವಾದ ಹಬ್ಬವಾದ ದಸರಾ ಸಂದರ್ಭದಲ್ಲಿ ಆಯುಧ ಪೂಜೆ ಕೇವಲ ಒಂದು ಹಬ್ಬವಾಗಿತ್ತು. ಎಲ್ಲರೂ ಬಹಳ ಸಂಭ್ರಮದಿಂದ ಆಚರಣೆ ಮಾಡಿ ಶಾಂತಿಯುತವಾಗಿ ಹಬ್ಬವನ್ನು ಕಳೆಯುತ್ತಿದ್ದರು.ಒಂದೊಂದು ಪ್ರಾಂತ್ಯಗಳಿಗೆ ಹೆಸರು ಬದಲಾವಣೆ ಮಾಡಿ ತಾಯಿಯ ಆರಾಧನೆ ಮಾಡಿ ದೇವರ ಬಳಿ ಸಂಪೂರ್ಣ ವರ್ಷದ ಏಳಿಗೆಗಾಗಿ ಪ್ರಾರ್ಥನೆ ಮಾಡಿ ಕೊಳ್ಳುತ್ತಿದ್ದರು. ಇದೇ ಆಚರಣೆಯನ್ನು ಭಾರತೀಯ ಸೇನೆ ಸಹ ಮಾಡುತಿತ್ತು. ಕಾಂಗ್ರೆಸ್ ಪಕ್ಷ ಕೂಡ ಭಾರತೀಯ ಸೇನೆಯ ಆಯುಧಗಳಿಗೆ ಪೂಜೆ ಸಲ್ಲಿಸುತಿತ್ತು. ಇನ್ನು ಮಾಜಿ ಕಾಂಗ್ರೆಸ್ ಪಕ್ಷದ ರಕ್ಷಣಾ ಸಚಿವರ ಹೆಂಡತಿಯೊಬ್ಬರು ಆಯುಧ ಪೂಜೆಯ ದಿನ ಹಿಂದುಗಳಿಗೆ ಮಹತ್ವವೆನಿಸಿರುವ ಓಂ ಬರೆಯುವ ಬದಲು ಶಿಲುಬೆ ಬರೆದರೂ ಸಹ ಯಾರು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈ ಬಾರಿ  ರಫೈಲ್  ಯುದ್ಧ ವಿಮಾನಗಳಿಗೆ ಓಂ ಎಂದು ಬರೆದು ಪೂಜೆ ಸಲ್ಲಿಸಿದ್ದನ್ನು ಮಾತ್ರ ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಾಂಗ್ರೆಸ್ ಪಕ್ಷ ಎಂದಿನಂತೆ ಆಡಳಿತ ಪಕ್ಷದ ನಡೆಯನ್ನು ವಿರೋಧಿಸುವಲ್ಲಿ ನಿರತವಾಗಿದೆ. ಆದರೆ ಮನೆಯಲ್ಲಿ ತಮ್ಮ ತಮ್ಮ ವಾಹನಗಳಿಗೆ, ಆಯುಧಗಳಿಗೆ ಪೂಜೆ ನಡೆಸಿ ನಂತರ ಪಕ್ಷದ ಮುಖವನ್ನು ನೋಡಿ ಕೆಲವರು ತಾವು ಪೂಜೆಯೇ ಮಾಡಿಲ್ಲ ಎಂಬಂತೆ ರಾಜನಾಥ್ ಸಿಂಗ್ ರವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಈ ನಿಲುವಿನ ಬಗ್ಗೆ ಅವರಲ್ಲಿಯೇ ಒಗ್ಗಟ್ಟಿಲ್ಲ ಎಂಬುದು ಸಹ ಇದೀಗ ಬಟಾ ಬಯಾಲಾಗಿದೆ. ಯಾಕೆಂದರೆ ಹಲವಾರು ನಾಯಕರು ಆಯುಧ ಪೂಜೆಯ ಪರ ನಿಂತಿದ್ದಾರೆ. ಇಷ್ಟಾದರೂ ಪಟ್ಟು ಬಿಡಲು ಕಾಂಗ್ರೆಸ್ ಪಕ್ಷ ಮಾತ್ರ ತಯಾರಿಲ್ಲ. ಅದರಲ್ಲಿಯೂ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಮಲ್ಲಿಕಾರ್ಜುನ ಖರ್ಗೆ ರವರು, ಇದುವರೆಗೂ ಟೀಕೆಗಳನ್ನು ನಿಲ್ಲಿಸಿಲ್ಲ. ಇದರ ನಡುವೆ ಶತ್ರು ರಾಷ್ಟ್ರದ ಸೇನಾ ವಕ್ತಾರ ಆಸೀಫ್ ಘಾಫೂರ್ ರವರು ಆಯುಧ ಪೂಜೆಯನ್ನು ಭಾರತದಲ್ಲಿ ವಿರೋಧ ಮಾಡುತ್ತಿರುವವರ ಬಾಯಿಗೆ ಬೀಗ ಬೀಳುವಂತಹ ಹೇಳಿಕೆ ನೀಡಿದ್ದಾರೆ.

ಹೌದು, ಸದಾ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಭಾರತೀಯ ಸೇನೆಯ ವಿರುದ್ಧ ಕಿಡಿಕಾರುವ ಪಾಕಿಸ್ತಾನದ ಸೇನಾ ವಕ್ತಾರ ಆಸೀಫ್ ಘಾಫೂರ್ ರವರು, ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿ, ಭಾರತೀಯ ಸೇನೆಯು ಬಲಾಢ್ಯ ಶಕ್ತಿ ಶಾಲಿ ರಫೈಲ್ ಯುದ್ಧ ವಿಮಾನವನ್ನು ಸೇನೆಗೆ ಸೇರಿಸಿಕೊಳ್ಳುವ ಸಂಧರ್ಭದಲ್ಲಿ ಆಯುಧ ಪೂಜೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೇ, ಇದು ಅವರ ಆಚಾರ ವಿಚಾರ ಧರ್ಮಗಳಿಗೆ ಸಂಬಂಧಿಸಿದ ಆಚರಣೆ. ಆದ ಕಾರಣದಿಂದ ಪ್ರತಿಯೊಬ್ಬರು ಇದನ್ನು ಗೌರವಿಸಲೇಬೇಕು ಎಂದಿದ್ದಾರೆ. ಸದಾ ನಮ್ಮ ವಿರುದ್ಧ ಕಾಲ್ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಆಸೀಫ್ ಘಾಫೂರ್ ರವರು, ಧರ್ಮ ಆಚಾರ ವಿಚಾರ ಎಂದಾಗ ಅವರದ್ದು ಅವರಿಗೆ ನಮದು ನಮಗೆ ಎಂದು ಅರ್ಥ ಮಾಡಿಕೊಂಡು ಹೇಳಿಕೆ ನೀಡಿದ್ದಾರೆ. ಶತ್ರು ರಾಷ್ಟ್ರದ ಸೇನೆ ವಕ್ತಾರರಿಗೆ ಅರ್ಥವಾದ ವಿಷಯ ಇಲ್ಲಿನ ಕೆಲವು ಜನರಿಗೆ ಅರ್ಥವಾಗುತ್ತಿಲ್ಲ ಎಂಬುದೇ ವಿಪರ್ಯಾಸ. ಇಲ್ಲಿ ನಾವು ಯಾವ ಪಕ್ಷದ ಪರವಾಗಿಯೂ ಮಾತನಾಡುತ್ತಿಲ್ಲ, ಬದಲಾಗಿ ನಮ್ಮ ಆಚಾರ ವಿಚಾರ ಧರ್ಮವನ್ನು ಯಾರೇ ಎತ್ತಿ ಹಿಡಿದರೂ ನಮಗೆ ಸಂತೋಷವೇ.

Facebook Comments

Post Author: RAVI