ಜೈಲಿನಲ್ಲಿರುವ ಡಿಕೆಶಿಗೆ ಮರ್ಮಾಘಾತ ! ಭದ್ರಕೋಟೆ ಕನಕಪುರಕ್ಕೆ ಎಂಟ್ರಿಕೊಟ್ಟ ಸಿಬಿಐ ! ಬಂಡೆ ಪುಡಿಪುಡಿ ಮಾಡಲು ಭರ್ಜರಿ ತಯಾರಿ??

ಇತ್ತೀಚಿಗೆ ಯಾಕೋ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಮೊದಲಿನಿಂದಲೂ ತಾನೇ ರಾಜ ಎಂದು ಮೆರೆದ ಡಿಕೆ ಶಿವಕುಮಾರ್ ಅವರು ಇದೀಗ ಕೇವಲ ಬೇಲ್ ಪಡೆಯಲು ವಿಫಲವಾಗಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಡಿಕೆ ಶಿವಕುಮಾರ್ ಅವರ ವಿರುದ್ಧ ಸಾಕ್ಷಿಗಳು ಎಷ್ಟು ಬಲವಾಗಿವೆ ಎಂದರೆ ನ್ಯಾಯಾಲಯವು ನಾಲ್ಕಕ್ಕೂ ಹೆಚ್ಚು ಬಾರಿ ಜಾಮೀನು ಅರ್ಜಿಯನ್ನು ನಿರಾಕರಿಸಿ ಡಿಕೆ ಶಿವಕುಮಾರ್ ರವರನ್ನು ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಿದೆ. ಈಗಾಗಲೇ ಅಧಿಕಾರಿಗಳಿಂದ ಕಠಿಣ ವಿಚಾರಣೆಯನ್ನು ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ, ಇದೀಗ ಮತ್ತೊಂದು ಆಘಾತ ಎದುರಾಗಿದೆ. ಡಿಕೆ ಶಿವಕುಮಾರ್ ಅವರ ಭದ್ರಕೋಟೆ ಎನಿಸಿಕೊಂಡಿರುವ ಕನಕಪುರಕ್ಕೆ ಸಿಬಿಐ ಅಧಿಕಾರಿಗಳು ಎಂಟ್ರಿಕೊಟ್ಟಿದ್ದಾರೆ.

ಹಲವಾರು ವರ್ಷಗಳಿಂದ ಡಿಕೆ ಶಿವಕುಮಾರ್ ರವರು ಕನಕಪುರದ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯ ಮೂಲಕ ಸಾವಿರಾರು ಕೋಟಿ ಹಣ ಅಕ್ರಮವಾಗಿ ಸಂಪಾದಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಷ್ಟು ಸಾಲದು ಎಂಬಂತೆ ಹಲವಾರು ವಿಡಿಯೋಗಳು ಸಹ ಹರಿದಾಡಿ ಸಾಮಾಜಿಕ ಜಾಲತಾಣಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಾವಿರಾರು ಕೋಟಿ ಹಣ ಕೇವಲ ಕನಕಪುರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಬಂದಿದೆ ಎಂಬ ಆರೋಪಗಳು ಬಲವಾಗಿ ಕೇಳಿಬಂದಿವೆ. ಇದೇ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರಿಗೆ ಕನಕಪುರದ ಬಂಡೆ ಎಂಬ ಹೆಸರು ಬಂದಿದೆ ಎಂದು ಸಹ ಜನರು ಹೇಳುತ್ತಾರೆ. ಹೀಗಿರುವಾಗ ಇದೇ ಕನಕಪುರದಲ್ಲಿ ಇದೀಗ ಸಿಬಿಐ ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. ಡಿಕೆ ಶಿವಕುಮಾರ್ ಅವರು ಸಮ್ಮತಿ ನೀಡಿದ ಸ್ಥಳದಲ್ಲಿ ಮಾತ್ರ ಗಣಿಗಾರಿಕೆ ಮಾಡದೇ ಅಕ್ರಮವಾಗಿ ನೂರಾರು ಎಕರೆ ಅರಣ್ಯ ಪ್ರದೇಶವನ್ನು ವಶಪಡಿಸಿಕೊಂಡು ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದಾರೆ ಎಂಬ ಆರೋಪವನ್ನು ಸಿಬಿಐ ಸಂಸ್ಥೆ ಮಾಡಿದೆ.

ಇದೇ ವಿಚಾರವಾಗಿ ಸಿಬಿಐ ಸಂಸ್ಥೆ ತನಿಖೆಗೆ ಅನುವು ಮಾಡಿಕೊಡುವಂತೆ ನ್ಯಾಯಾಲಯದ ಬಳಿ ಮೊರೆ ಹೋಗಿತ್ತು. ಸಿಬಿಐ ಸಂಸ್ಥೆಯ ಮನವಿಗೆ ಸ್ಪಂದಿಸಿರುವ ಹೈ ಕೋರ್ಟ್ ಸಂಪೂರ್ಣವಾಗಿ ಅರಣ್ಯ ಒತ್ತುವರಿಯ ಕುರಿತು ಮಾಹಿತಿ ಪಡೆಯಲು ನ್ಯಾಯಾಲಯ ಒಪ್ಪಿಕೊಳ್ಳುತ್ತಿದೆ ಈ ಕೂಡಲೇ ಸಂಪೂರ್ಣ ಅರಣ್ಯ ಒತ್ತುವರಿ ಮಾಹಿತಿಯನ್ನು ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಅಷ್ಟೇ ಅಲ್ಲದೆ ಸಂಪೂರ್ಣವಾಗಿ ಇಲಾಖಾ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದ್ದು, ಒತ್ತುವರಿ ಆಗಿದೆ ಎನ್ನಲಾಗುತ್ತಿರುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿರುದ್ಧ ವಿಚಾರಣ ವರದಿಯನ್ನು ಸಲ್ಲಿಸುವಂತೆ ಆದೇಶ ನೀಡಿದೆ. ಇದೇ ಸಮಯದಲ್ಲಿ ಒಟ್ಟು 143 ಅರಣ್ಯ ಒತ್ತುವರಿ ಪ್ರಕರಣಗಳನ್ನು ದಾಖಲೆ ಮಾಡಿಕೊಳ್ಳಲಾಗಿತ್ತು, ಈಗಾಗಲೇ 22 ಅರಣ್ಯಾಧಿಕಾರಿಗಳ ವಿರುದ್ಧ ತನಿಖೆ ನಡೆದಿರುವ ಕಾರಣ ಉಳಿದ ಎಲ್ಲಾ ಪ್ರಕರಣಗಳ ತನಿಖೆಗೆ ಸಿಬಿಐ ಸಂಸ್ಥೆಗೆ ಅವಕಾಶ ನೀಡುವುದಾಗಿ ಹೈಕೋರ್ಟ್ ಘೋಷಣೆ ಮಾಡಿದೆ. ಇದರಿಂದ ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಬಾರಿ ಹಗರಣ ಹೊರಬೀಳುವ ಭೀತಿ ಎದುರಾಗಿದೆ. ಇನ್ನು ಅರಣ್ಯ ಒತ್ತುವರಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರಿಗೂ ಕಂಟಕ ಎದುರಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

Facebook Comments

Post Author: RAVI