ಸಿದ್ದರಾಮಯ್ಯ ರವರ ಬುಡಕ್ಕೆ ಬಾಂಬ್ ಇಟ್ಟ ಸೋನಿಯಾ ಗಾಂಧಿ: ಸಿದ್ದು ಗೆ ಗುದ್ದು ನೀಡಿದ್ದು ಹೇಗೆ ಗೊತ್ತಾ??

ಇದೀಗ ಸಿದ್ದರಾಮಯ್ಯ ರವರ ನಡುವಳಿಕೆಯೇ ಅವರಿಗೆ ಕಂಟಕವಾಗುವ ಸೂಚನೆ ನೀಡಿದೆ. ಮೊದಲಿನಿಂದಲೂ ಸಿದ್ದರಾಮಯ್ಯನವರ ನಡುವಳಿಕೆಯ ಬಗ್ಗೆ ಬಾರಿ ಆಕ್ರೋಶದ ಮಾತುಗಳು ಕೇಳಿಬರುತ್ತಿದ್ದವು, ಅದರಲ್ಲಿಯೂ ಕೆಲವೊಮ್ಮೆ ಧರ್ಮ, ಆಚಾರ, ವಿಚಾರ ಹಾಗೂ ಸೇನೆಯ ವಿಚಾರದಲ್ಲಿ ಆಡಿದ ಮಾತುಗಳಿಂದ ಬಾರಿ ವಿವಾದಗಳು ಸೃಷ್ಟಿಯಾಗಿದ್ದವು. ಇಷ್ಟೆಲ್ಲ ನಡೆಯುತ್ತಿದ್ದರೂ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇತ್ತೀಚಿಗೆ, ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಕೂಡ ಸಿದ್ದರಾಮಯ್ಯ ರವರ ಮೇಲೆ ಸಿಟ್ಟಾಗಿರುವಂತೆ ಕಾಣುತ್ತಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಯಾಕೆಂದರೆ ಇತ್ತೀಚಿಗೆ ಡಿ ಕೆ ಶಿ ರವರ ಬಂಧನದ ವಿಚಾರದಲ್ಲಿ ಸಿದ್ದರಾಮಯ್ಯ ರವರ ಆಕ್ರೋಶ ಕೇವಲ ಮಾತುಗಳಿಗಷ್ಟೇ ಸೀಮಿತವಾಗಿತ್ತು. ಯಾವುದೇ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರಲಿಲ್ಲ.

ಇದರಿಂದ ಹೈ ಕಮಾಂಡ್ ಕೆಂಗಣ್ಣಿಗೆ ಗುರಿಯಾಗಿರುವ ಸಿದ್ದರಾಮಯ್ಯ ರವರಿಗೆ ಇದೀಗ ಸೋನಿಯಾ ಗಾಂಧಿ ಶಾಕ್ ನೀಡಿದ್ದಾರೆ. ಹೌದು, ಇದೀಗ ರಾಜ್ಯ ಕಾಂಗ್ರೆಸ್ಸಿನಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಬಾರಿ ಲಾಭಿ ನಡೆಯುತ್ತಿದೆ. ಇದೇ ಸ್ಥಾನದ ಮೇಲೆ, ಮಾಜಿ ಡಿಸಿಎಂ ಜಿ. ಪರಮೇಶ್ವರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರಂಭದ ದಿನಗಳಲ್ಲಿ ಕಣ್ಣು ಇಟ್ಟಿದ್ದರು, ಆದರೆ ಇದೀಗ ಡಿ.ಕೆ.ಶಿವಕುಮಾರ್ ಬಂಧನ ವಾಗಿರುವ ಕಾರಣ, ಈ ಸ್ಥಾನಕ್ಕೆ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಆಯ್ಕೆ ಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ಸ್ಥಾನವನ್ನು ತನಗೆ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದು ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶ ನಡೆಸಿದರೂ ಸಹ, ಸೋನಿಯಾ ಖ್ಯಾರೇ ಎನ್ನದೆ ವಿಪಕ್ಷ ಸ್ಥಾನ ನೀಡಲು ಸಾಧ್ಯವಿಲ್ಲ, ಒಂದು ವೇಳೆ ಬೇಕೇ ಬೇಕು ಎಂದರೆ, ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಖಡಕ್ ಆಗಿ ತಿಳಿಸಿದ್ದಾರೆ ಎನ್ನಲಾಗಿದೆ.

Facebook Comments

Post Author: Ravi Yadav