ಮತಾಂತರ NGO ಗಳಿಗೆ ಬಾರಿ ಗುದ್ದು ನೀಡಿದ ಕೇಂದ್ರ ಗೃಹ ಸಚಿವಾಲಯ !

ದೇಶದಲ್ಲಿ ಒಂದೆಡೆ ಸನಾತನ ಹಿಂದೂ ಧರ್ಮ ಭದ್ರವಾಗಿ ನೆಲೆಯೂರಿದ್ದರೆ, ಮತ್ತೋಂದೆಡೆ ಬಡವರ ಕಷ್ಟವನ್ನು ಲಾಭವನ್ನಾಗಿ ಮಾಡಿಕೊಂಡು ದುರುಪಯೋಗ ಪಡೆದುಕೊಳ್ಳುವ  ಮೂಲ ಉದ್ದೇಶದಿಂದ  ವಿದೇಶ ಗಳಿಂದ ಲಕ್ಷಾಂತರ ಕೋಟಿ ರೂಪಾಯಿ ಗಳನ್ನು ಅನುದಾನ ಪಡೆದುಕೊಂಡು ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಬಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಇನ್ನು ಇದರ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಣ ನೀತಿ ರೂಪಿಸುತ್ತಿದೆ ಎಂಬ ವಿಷಯ ತಿಳಿದು ಬಂದಿದೆ. ಇಡೀ ದೇಶದಲ್ಲಿ ಮತಾಂತರ ನಿಷೇದ ಮಾಡುವ ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯಲು ಇನ್ನು ಕೊಂಚ ಕಾಲಾವಕಾಶ ಬೇಕಾಗುತ್ತದೆ. ಇದರ ನಡುವೆಯೇ ಇದೀಗ ಇದೇ ಹಾದಿಯಲ್ಲಿ ಮತ್ತೊಂದು ಕಠಿಣ ನಿರ್ಧಾರ ಘೋಷಣೆ ಮಾಡಿ ಕಠಿಣ ಸಂದೇಶ ರವಾನೆ ಮಾಡಿದೆ.

ವಿದೇಶಗಳಿಂದ ಬಾರಿ ದೇಣಿಗೆ ಪಡೆದುಕೊಂಡು ಮತಾಂತರ ನಡೆಸುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಇಂದು ಆದೇಶ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, NGO ಗಳ ಆಟಕ್ಕೆ ಬ್ರೇಕ್ ಹಾಕಿದೆ. ಇನ್ನು ಮುಂದೆ ಯಾವುದೇ NGO ವಿದೇಶದಿಂದ ಕೇವಲ ಒಂದು ರೂ ದೇಣಿಗೆ ಪಡೆಯಬೇಕಾದರೆ, ಮತಾಂತರ ಆರೋಪ ಸಂಬಂಧ ಇಲ್ಲಿಯವರೆಗೂ ತಮ್ಮ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ ಹಾಗೂ ಮತಾಂತರ ಪ್ರಕರಣಗಳಲ್ಲಿ ಇಲ್ಲಿಯವರೆಗೂ ದೋಷಿಯಾಗಿಲ್ಲ ಎಂದು NGO ದ ಪ್ರತಿಯೊಬ್ಬ ಎಲ್ಲ ಧರ್ಜೆಯ ನೌಕರರು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಬಹಿರಂಗ ವಾಗಿ ಘೋಷಣೆ ಮಾಡಿಕೊಂಡು ಲಿಖಿತ ರೂಪದಲ್ಲಿ ಆದೇಶ ಹೊರಡಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.ಇಲ್ಲಿಯವರೆಗೂ ಇದೇ ಆರೋಪದ ಮೇಲೆ ಕೇಂದ್ರ ಸರ್ಕಾರ 14 ಸಾವಿರಕ್ಕೂ ಹೆಚ್ಚು NGO ಗಳನ್ನೂ ರದ್ದು ಮಾಡಿ ಆದೇಶ ಹೊರಡಿಸಿದೆ.

Facebook Comments

Post Author: RAVI